ನಿಮ್ಮ ಶ್ವಾಸಕೋಶ ಫುಲ್​ ಕ್ಲೀನ್​ ಆಗಿ ಆರೋಗ್ಯವಾಗಿರಬೇಕೇ? ಇಲ್ಲಿದೆ ನೋಡಿ ಅದ್ಭುತ ಕಷಾಯ! Lungs Health

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ನಾವು ದೀರ್ಘಕಾಲ ಆರೋಗ್ಯವಾಗಿರಲು ನಮ್ಮ ದೇಹದ ಪ್ರತಿಯೊಂದು ಅಂಗವು ತುಂಬಾ ಮುಖ್ಯ
  • ವಿಶೇಷವಾಗಿ ಶ್ವಾಸಕೋಶ ಮತ್ತು ಹೃದಯ ಚೆನ್ನಾಗಿ ಕೆಲಸ ಮಾಡಬೇಕು
  • ದೇಹದ ಯಾವುದೇ ಅಂಗಗಳ ಕಾರ್ಯದಲ್ಲಿ ಕೊಂಚ ಏರುಪೇರಾದರೆ ಅನಾರೋಗ್ಯ ಕಾಡುತ್ತದೆ
  • ಗಾಳಿಯನ್ನು ಉಸಿರಾಡುವಾಗ ಆಮ್ಲಜನಕವನ್ನು ಶೋಧಿಸಿ ದೇಹಕ್ಕೆ ಕಳುಹಿಸುತ್ತೆ ಶ್ವಾಸಕೋಶ
Lungs Health : ನಾವು ದೀರ್ಘಕಾಲ ಆರೋಗ್ಯವಾಗಿರಲು ನಮ್ಮ ದೇಹದ ಪ್ರತಿಯೊಂದು ಅಂಗವು ತುಂಬಾ ಮುಖ್ಯ. ಅದರಲ್ಲೂ ವಿಶೇಷವಾಗಿ ಶ್ವಾಸಕೋಶ ಮತ್ತು ಹೃದಯ ಚೆನ್ನಾಗಿ ಕೆಲಸ ಮಾಡಬೇಕು. ದೇಹದ ಯಾವುದೇ ಅಂಗಗಳ ಕಾರ್ಯದಲ್ಲಿ ಕೊಂಚ ಏರುಪೇರಾದರೆ ಅನಾರೋಗ್ಯ ಕಾಡುತ್ತದೆ.
ಓರ್ವ ಸರಾಸರಿ ಮನುಷ್ಯ ಒಂದು ದಿನಕ್ಕೆ 22,000 ಬಾರಿ ಉಸಿರನ್ನು ತೆಗೆದುಕೊಳ್ಳುತ್ತಾನೆ. ಆತ ಸುಮಾರು 255 ಘನ ಮೀಟರ್ (9,000 ಘನ ಅಡಿ) ಗಾಳಿಯನ್ನು ಒಳಗೆ ಎಳೆದುಕೊಳ್ಳುತ್ತಾನೆ ಮತ್ತು ಬಿಡುತ್ತಾನೆ. ನಾವು ಗಾಳಿಯನ್ನು ಉಸಿರಾಡುವಾಗ ಆಮ್ಲಜನಕವನ್ನು ಶೋಧಿಸಿ ದೇಹಕ್ಕೆ ಕಳುಹಿಸಲು ಶ್ವಾಸಕೋಶಗಳು ನೆರವಾಗುತ್ತವೆ. ಆಮ್ಲಜನಕವು ದೇಹದಾದ್ಯಂತ ರಕ್ತದ ಹರಿವಿಗೆ ಸಹಾಯ ಮಾಡುತ್ತದೆ ಮತ್ತು ದೇಹದ ಎಲ್ಲಾ ಭಾಗಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ತಲುಪಿಸಲು ಸಹಾಯ ಮಾಡುತ್ತದೆ.
ಇದಿಷ್ಟೇ ಅಲ್ಲದೆ, ಶ್ವಾಸಕೋಶಗಳು ನಮ್ಮ ದೇಹದಿಂದ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಹಾಕುತ್ತವೆ. ಈ ಕಾರ್ಯಗಳು ದೇಹದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಶ್ವಾಸಕೋಶಗಳಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾದರೆ, ಅದು ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು. ಹೀಗಾಗಿ ಶ್ವಾಸಕೋಶವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ.
ಚಳಿಗಾಲದಲ್ಲಂತೂ ಶ್ವಾಸಕೋಶಗಳು ಶೀತ ಮತ್ತು ಸೋಂಕುಗಳಿಗೆ ಗುರಿಯಾಗುತ್ತವೆ ಮತ್ತು ಶ್ವಾಸಕೋಶಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇದರಿಂದ ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ, ಸೋಂಕುಗಳನ್ನು ತೆಗೆದುಹಾಕಿ ಶ್ವಾಸಕೋಶವನ್ನು ಗುಣಪಡಿಸುವ 'ನೈಸರ್ಗಿಕ ಜಪಾನೀಸ್ ಕಷಾಯ'ವಿದೆ. ಅದರ ಬಗ್ಗೆ ನಾವೀಗ ತಿಳಿದುಕೊಳ್ಳೋಣ.

ನೈಸರ್ಗಿಕ ಜಪಾನೀಸ್ ಕಷಾಯ

ಬೆಳಗ್ಗೆ ಟೀ ಮತ್ತು ಕಾಫಿ ಕುಡಿಯುವುದನ್ನು ತಪ್ಪಿಸಿ, ತಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಬಯಸುವವರು ಈ ಕಷಾಯವನ್ನು ಕುಡಿಯಬಹುದು. ಕಷಾಯ ಮಾಡುವ ವಿಧಾನ ಹೇಗೆಂದರೆ, ಒಂದು ಬಟ್ಟಲು ತೆಗೆದುಕೊಳ್ಳಿ. ಆ ಬಟ್ಟಲಿಗೆ ನೀರು ಹಾಕಿ, ಮೂರು ಈರುಳ್ಳಿ ತುಂಡುಗಳು, ನಾಲ್ಕು ಕಿತ್ತಳೆ ತುಂಡುಗಳು, ಒಂದು ತುಂಡು ನಿಂಬೆ, ಸ್ವಲ್ಪ ಕತ್ತರಿಸಿದ ಶುಂಠಿ, ಬೇ ಎಲೆ ಮತ್ತು ಎರಡು ದಾಲ್ಚಿನ್ನಿ ತುಂಡುಗಳನ್ನು ಸೇರಿಸಿ 15 ನಿಮಿಷಗಳ ಕಾಲ ಕುದಿಸಿದರೆ ಕಷಾಯ ರೆಡಿ. ಈ ಕಷಾಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಕಪ್ ಕುಡಿಯುವುದರಿಂದ ಶ್ವಾಸಕೋಶದ ಊತ ನಿವಾರಣೆಯಾಗುತ್ತದೆ ಮತ್ತು ಗಂಟಲಿಗೆ ಪರಿಹಾರ ಸಿಗುತ್ತದೆ. ಎಚ್ಚರ! ಹೀಗೆ ಮಾಡಿದ ನಂತರ, ಧೂಮಪಾನದ ಅಭ್ಯಾಸವನ್ನು ಮತ್ತೆ ಪ್ರಾರಂಭಿಸುವುದು ಅಪಾಯಕಾರಿ.

ಮನೆಮದ್ದುಗಳು ಕೂಡ ಇವೆ

ಶ್ವಾಸಕೋಶದಲ್ಲಿ ಕೊಳಕು ಸಂಗ್ರಹವಾಗುವುದರಿಂದ ಅಸ್ತಮಾ ಮತ್ತು ಸೋಂಕುಗಳ ಅಪಾಯ ಹೆಚ್ಚಾಗುತ್ತದೆ. ಸಾಮಾನ್ಯವಾಗಿ, ಹವಾಮಾನ ಬದಲಾದಾಗ, ಮೊದಲು ಪರಿಣಾಮ ಬೀರುವುದು ಶ್ವಾಸಕೋಶಗಳ ಮೇಲೆ. ಹಲವು ಕಾರಣಗಳಿಂದ ಶ್ವಾಸಕೋಶಗಳು ದುರ್ಬಲಗೊಂಡು ಕ್ರಮೇಣ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸುತ್ತವೆ. ಧೂಮಪಾನದ ಅಭ್ಯಾಸ, ಮಾಲಿನ್ಯ, ಹೊಗೆ ಮತ್ತು ಕಳಪೆ ಜೀವನಶೈಲಿಯಿಂದಾಗಿ, ಜನರ ಶ್ವಾಸಕೋಶಗಳು ವೇಗವಾಗಿ ಕ್ಷೀಣಿಸಲು ಪ್ರಾರಂಭಿಸುತ್ತವೆ. ಅದೇ ರೀತಿ, ಶ್ವಾಸಕೋಶದಲ್ಲಿ ಕೊಳಕು ಸಂಗ್ರಹವಾಗುವುದರಿಂದ ಶ್ವಾಸಕೋಶಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ತಡೆಯುತ್ತದೆ. ಇದು ಉಸಿರಾಟದ ತೊಂದರೆಗಳು ಮತ್ತು ರೋಗಗಳಿಗೆ ಕಾರಣವಾಗಬಹುದು. ಇದನ್ನು ಮನೆಮದ್ದುಗಳಿಂದಲೂ ಸ್ವಚ್ಛಗೊಳಿಸಬಹುದು.

ಬಿಸಿನೀರಿನೊಂದಿಗೆ ಜೇನುತುಪ್ಪ ಬೆರೆಸಿ ಕುಡಿಯಿರಿ

ಜೇನು ತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಇದನ್ನು ಆಯುರ್ವೇದ ಔಷಧವೆಂದು ಗುರುತಿಸಲಾಗಿದೆ. ಅದೇ ರೀತಿ, ಜೇನುತುಪ್ಪದಲ್ಲಿ ಉತ್ಕರ್ಷಣ ನಿರೋಧಕಗಳಿದ್ದು, ನಿಮ್ಮ ದೇಹ ಮತ್ತು ಶ್ವಾಸಕೋಶಗಳನ್ನು ಶುದ್ಧೀಕರಿಸುತ್ತದೆ ಹಾಗೂ ದೇಹದಲ್ಲಿ ವಿಷವನ್ನು ಸಂಗ್ರಹಿಸಲು ಬಿಡುವುದಿಲ್ಲ. ಜೇನುತುಪ್ಪವು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮ ಶ್ವಾಸಕೋಶ ಆರೋಗ್ಯಕರವಾಗಿರುತ್ತದೆ. ಶ್ವಾಸಕೋಶವನ್ನು ಶುದ್ಧೀಕರಿಸಲು ನೀವು ನೀರಿನೊಂದಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು. ಒಂದು ಕಪ್ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ. ನೀರು ತುಂಬಾ ಬಿಸಿಯಾಗಿರಬಾರದು. ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದರೆ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net