ಪುರುಷರೇ ಎಚ್ಚರ; ಮೂತ್ರ ವಿಸರ್ಜನೆಯಲ್ಲಿನ ಈ ಸಣ್ಣ ಬದಲಾವಣೆಗಳನ್ನು ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ! Prostate cancer

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Prostate cancer: ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿ ಮಾತ್ರ ಕಂಡುಬರುವ ಪ್ರಮುಖ ಕ್ಯಾನ್ಸರ್ ಆಗಿದ್ದು, ಇದು ಮೂತ್ರನಾಳದ ಕೆಳಗಿರುವ ಪ್ರಾಸ್ಟೇಟ್ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತದೆ. ಈ ರೋಗದ ದೊಡ್ಡ ಸಮಸ್ಯೆ ಎಂದರೆ, ಅದರ ಆರಂಭಿಕ ಲಕ್ಷಣಗಳು ಗೋಚರಿಸುವುದಿಲ್ಲ. ಹಾಗಾಗಿ ಅನೇಕ ಪುರುಷರು ಆರಂಭದಲ್ಲಿ ಯಾವುದೇ ವಿಶೇಷ ಸಮಸ್ಯೆಗಳನ್ನು ಅನುಭವಿಸುವುದಿಲ್ಲ, ಏಕೆಂದರೆ ಆರಂಭಿಕ ಪ್ರಾಸ್ಟೇಟ್ ಕ್ಯಾನ್ಸರ್ ಮೌನ ಬೆಳವಣಿಗೆಯನ್ನು ಹೊಂದಿರುತ್ತದೆ.
ಕ್ರಮೇಣವಾಗಿ ಇದು ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಬೆನ್ನು ಅಥವಾ ಸೊಂಟದ ನೋವಿನಂತೆ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಆರಂಭಿಕ ಹಂತದಲ್ಲಿ ನೀವೇನಾದರೂ ಈ ಕಾಯಿಲೆಯನ್ನು ಪತ್ತೆ ಹಚ್ಚಿದರೆ ಸೂಕ್ತ ಚಿಕಿತ್ಸೆಯ ಮೂಲಕ ಇದನ್ನು ಗುಣಪಡಿಸಬಹುದು.

ಭಾರತದಲ್ಲಿ ಗಂಭೀರ ಸಮಸ್ಯೆ

ಪುರುಷರಲ್ಲಿ ಕಂಡುಬರುವ ಮೂರನೇ ಕ್ಯಾನ್ಸರ್​ ಸಮಸ್ಯೆಗಳಲ್ಲಿ ಇದೂ ಒಂದಾಗಿದ್ದು, ನಂತರದ ಸ್ಥಾನದಲ್ಲಿ ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್ ಇದೆ. ಭಾರತದಾದ್ಯಂತ ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಈ ಪ್ರಮಾಣವು ವಯಸ್ಸಿನೊಂದಿಗೆ ಹೆಚ್ಚಾಗುವ ನಿರೀಕ್ಷೆಯಿದೆ.
2024 ರಲ್ಲಿ ಇಂಡಿಯನ್ ಜರ್ನಲ್ ಆಫ್ ಯೂರಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರಾಸ್ಟೇಟ್ ಕ್ಯಾನ್ಸರ್ ಪ್ರಕರಣಗಳು ಪುರುಷರು 50 ವರ್ಷಕ್ಕೂ ಮೇಲ್ಪಟ್ಟ ನಂತರ ವೇಗವಾಗಿ ಹೆಚ್ಚಾಗುತ್ತವೆ. 64 ವರ್ಷ ವಯಸ್ಸಿನ ನಂತರ ಗರಿಷ್ಠ ಮಟ್ಟವನ್ನು ತಲುಪುತ್ತವೆ. ಆದಾಗ್ಯೂ, 43 ಪ್ರತಿಶತ ಪ್ರಕರಣಗಳಲ್ಲಿ, ಕ್ಯಾನ್ಸರ್ ಈಗಾಗಲೇ ದೇಹದ ಇತರ ಭಾಗಗಳಿಗೆ ಹರಡಿದಾಗ ರೋಗನಿರ್ಣಯ ಮಾಡಲಾಗುತ್ತದೆ ಎಂದು ವರದಿ ಮಾಡಿದೆ.
ಭಾರತದಲ್ಲಿ ಅರಿವಿನ ಕೊರತೆ
ಪ್ರಾಸ್ಟೇಟ್ ಕ್ಯಾನ್ಸರ್ ಸಾಮಾನ್ಯ ಕಾಯಿಲೆಯಾಗಿದ್ದರೂ, ಭಾರತದಲ್ಲಿ ಈ ಕಾಯಿಲೆಯ ಬಗ್ಗೆ ಅರಿವು ತುಂಬಾ ಕಡಿಮೆ ಇದೆ. ಇದಕ್ಕೆ ಮುಖ್ಯ ಕಾರಣವೆಂದರೆ ಆರಂಭಿಕ ಲಕ್ಷಣಗಳು ಬಹಳ ಸಾಮಾನ್ಯವಾಗಿರುತ್ತವೆ. ಹೆಚ್ಚಿನ ಪುರುಷರು ರಾತ್ರಿಯಲ್ಲಿ ಪದೇ ಪದೇ ಮೂತ್ರ ವಿಸರ್ಜಿಸುತ್ತಾರೆ. ಇನ್ನೂ ಕೆಲವರು ವಯಸ್ಸಾದ ನಂತರ ಮೂತ್ರ ವಿಸರ್ಜಿಸುವುದನ್ನು ಕಡಿಮೆ ಮಾಡುತ್ತಾರೆ. ಈ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಕೆಲವೊಮ್ಮೆ ಈ ಸಮಸ್ಯೆ ವಿಸ್ತರಿಸಿದ ಪ್ರಾಸ್ಟೇಟ್ನ್​ನಿಂದ ಉಂಟಾಗಿರುತ್ತದೆ. ಆದರೆ, ಇದನ್ನು ಸಾಮಾನ್ಯ ಸಮಸ್ಯೆ ಎಂದು ಭಾವಿಸಿ, ಈ ರೋಗವನ್ನು ನಿರ್ಲಕ್ಷಿಸುತ್ತಾರೆ.

ಆರಂಭಿಕ ಲಕ್ಷಣಗಳು

ಮೇಯೊ ಕ್ಲಿನಿಕ್ ವರದಿಯ ಪ್ರಕಾರ, ಪ್ರಾಸ್ಟೇಟ್ ಕ್ಯಾನ್ಸರ್ ಯಾವಾಗಲೂ ಆರಂಭಿಕ ಹಂತಗಳಲ್ಲಿ ಗೋಚರಿಸುವುದಿಲ್ಲ. ಬದಲಾಗಿ ಇದು ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರದ ಹರಿವಿನಲ್ಲಿ ತೊಂದರೆ, ಮೂತ್ರದ ಹರಿವು ನಿಲ್ಲುವುದು ಮತ್ತು ಪ್ರಾರಂಭವಾಗುವುದು, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಮೂತ್ರ ವಿಸರ್ಜಿಸುವಾಗ ಉರಿ, ಅಪೂರ್ಣ ವಿಸರ್ಜನೆಯ ಭಾವನೆ ಉಂಟಾಗುತ್ತದೆ. ಕ್ಯಾನ್ಸರ್ ಮುಂದುವರಿದರೆ, ಮೂತ್ರ ವಿಸರ್ಜನೆಯ ತುರ್ತುಸ್ಥಿತಿ, ಬೆನ್ನು ಅಥವಾ ಮೂಳೆ ನೋವು, ತೀವ್ರ ಆಯಾಸ, ತೋಳುಗಳು ಮತ್ತು ಕಾಲುಗಳಲ್ಲಿ ದೌರ್ಬಲ್ಯ ಕಂಡುಬರುತ್ತದೆ.

ಇದರ ಲಕ್ಷಣಗಳೇನು?

ಶಸ್ತ್ರಚಿಕಿತ್ಸಾ ಆಂಕೊಲಾಜಿ ತಜ್ಞ ಡಾ. ಅರುಣ್ ಕುಮಾರ್ ಗೋಯೆಲ್ ಪ್ರಕಾರ, ಅನೇಕ ಪುರುಷರು ವಯಸ್ಸಾದಂತೆ ಬೆನಿಗ್ನ್ ಪ್ರಾಸ್ಟೇಟ್ ಹೈಪರ್‌ಪ್ಲಾಸಿಯಾ ಎಂಬ ಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾರೆ. ಇದು ದುರ್ಬಲ ಮೂತ್ರದ ಹರಿವು, ಅಪೂರ್ಣ ಮೂತ್ರಕೋಶ ಖಾಲಿಯಾಗುವುದು ಮತ್ತು ಮೂತ್ರ ವಿಸರ್ಜಿಸಲು ರಾತ್ರಿ ಎರಡು ಬಾರಿ ಹೆಚ್ಚು ಎಚ್ಚರಗೊಳ್ಳುವುದು ಬಿಪಿ ಹೆಚ್ಚಾಗುವುದು ಈ ರೀತಿಯ ಸಮಸ್ಯೆಗಳು ಗೋಚರಿಲು ಪ್ರಾರಂಭವಾಗುತ್ತದೆ.
ವೈದ್ಯರ ಪ್ರಕಾರ, ಪ್ರಾಸ್ಟೇಟ್ ಕ್ಯಾನ್ಸರ್‌ ಬರದಂತೆ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಇದು ಸಾಮಾನ್ಯವಾಗಿ 50 ವರ್ಷ ವಯಸ್ಸಿನ ನಂತರ ಪ್ರಾರಂಭವಾಗುತ್ತದೆ. ಕುಟುಂಬದಲ್ಲಿ ಯಾರಾದರೂ ಪ್ರಾಸ್ಟೇಟ್ ಕ್ಯಾನ್ಸರ್‌ ಸಮಸ್ಯೆಯನ್ನು ಹೊಂದಿದ್ದರೆ, ಅವರು 45 ನೇ ವಯಸ್ಸಿನಿಂದ ಪಿಎಸ್‌ಎ ಪರೀಕ್ಷೆ ಮತ್ತು ಡಿಜಿಟಲ್ ಗುದನಾಳದ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಸರಿಯಾದ ತಪಾಸಣೆಯು ರೋಗ ಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಯಶಸ್ವಿ ಚಿಕಿತ್ಸೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net