ಮೆಂತ್ಯ ನೀರು ಕುಡಿದ್ರೆ ಈ ಅಪಾಯವಿದೆಯಾ..! ನೀವು ಇದನ್ನೊಮ್ಮೆ ಓದಿ Fenugreek water

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮೆಂತ್ಯವು ಆರೋಗ್ಯಕ್ಕೆ ಉಪಯುಕ್ತ ಎಂದು ಇದನ್ನು ಶತಮಾನಗಳಿಂದ ಮನೆಮದ್ದಾಗಿ ಬಳಸಲಾಗುತ್ತದೆ
  • ಜೀರ್ಣಕ್ರಿಯೆಯನ್ನು ಸುಧಾರಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
  • ಯೋಚಿಸದೆ ಕುಡಿಯಲು ಆರಂಭಿಸಿದರೆ, ನಿಮ್ಮ ಆರೋಗ್ಯಕ್ಕೆ ಹಾನಿಯಾಗುವುದಂತೂ ಗ್ಯಾರೆಂಟಿ.!
  • ಮೆಂತ್ಯವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
Fenugreek water: ಮೆಂತ್ಯವು ಆರೋಗ್ಯಕ್ಕೆ ಉಪಯುಕ್ತ ಎಂದು ಇದನ್ನು ಶತಮಾನಗಳಿಂದ ಮನೆಮದ್ದಾಗಿ ಬಳಸಲಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ಹಲವಾರು ಜನರು ಇದನ್ನು ಆರೋಗ್ಯಕರ ದಿನಚರಿಯಲ್ಲಿ ಇದನ್ನು ಒಂದು ಭಾಗವಾಗಿ ಬಳಸುತ್ತಾರೆ.
ಆದರೆ, ಮೆಂತ್ಯ ನೀರು ಎಲ್ಲರಿಗೂ ಪ್ರಯೋಜನಕಾರಿಯಲ್ಲ . ಇದು ಕೆಲವರಿಗೆ ಹಾನಿಕಾರಕ. ನೀವು ಅದನ್ನು ಯೋಚಿಸದೆ ಕುಡಿಯಲು ಆರಂಭಿಸಿದರೆ, ನಿಮ್ಮ ಆರೋಗ್ಯಕ್ಕೆ ಹಾನಿಯಾಗುವುದಂತೂ ಗ್ಯಾರೆಂಟಿ. ಹಾಗಾಗಿ ಯಾವ ವ್ಯಕ್ತಿಗಳು ಮೆಂತ್ಯ ನೀರಿನಿಂದ ದೂರ ಇರಬೇಕು ಎಂದು ನೋಡೋಣ ಬನ್ನಿ..

1. ಮಧುಮೇಹಿಗಳು

ಮೆಂತ್ಯವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಈಗಾಗಲೇ ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟವನ್ನು ಹೊಂದಿರುವವರು ಮೆಂತ್ಯ ಸೇವನೆಯನ್ನು ಮಾಡುವುದರಿಂದ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಇದರಿಂದ ತಲೆತಿರುಗುವಿಕೆ, ಮೂರ್ಛೆ ಹೋಗುವುದಕ್ಕೆ, ಸ್ನಾಯುಗಳು ಬಲ ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಆದರಿಂದ ಮಧುಮೇಹಿಗಳು ವೈದ್ಯರನ್ನು ಸಂಪರ್ಕಿಸಿ ಈ ಆಹಾರ ಸೇವಿಸುವುದು ಉತ್ತಮ.

2. ಗರ್ಭಿಣಿಯರು

ಗರ್ಭಿಣಿಯರು ಮೆಂತ್ಯ ನೀರನ್ನು ಕುಡಿಯುವುದು ಅಪಾಯಕಾರಿ. ಹೆಚ್ಚು ಮೆಂತ್ಯ ನೀರನ್ನು ಕುಡಿಯುವುದರಿಂದ ಇದು ಅಕಾಲಿಕ ಹೆರಿಗೆ ಅಥವಾ ಗರ್ಭಪಾತದ ಅಪಾಯ ಹೆಚ್ಚಾಗಿ ಸಂಭವಿಸುತ್ತದೆ. ಹಾಗೆಯೇ ಗ್ಯಾಸ್, ವಾಕರಿಕೆ ಅಥವಾ ಹೊಟ್ಟೆ ನೋವನ್ನು ಉಂಟು ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ಈ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು.

3. ಥೈರಾಯ್ಡ್ ರೋಗಿಗಳು

ಥೈರಾಯ್ಡ್ ರೋಗಿಗಳು ಪ್ರತಿದಿನ ಮೆಂತ್ಯ ನೀರು ಕುಡಿಯುವುದರಿಂದ, ಥೈರಾಕ್ಸಿನ್ ಔಷಧದ ಹೀರಿಕೊಳ್ಳುವಿಕೆ ತಡೆಯಾಗಿ TSH ಮಟ್ಟ ಏರಿಕೆಯಾಗಬಹುದು. ಹಾಗೇ ಮೆಂತ್ಯದಲ್ಲಿರುವ ಗಾಯಟ್ರೋಜೆನಿಕ್ ಪದಾರ್ಥಗಳು ಗಾಯಿಟರ್ ಉಲ್ಬಣಗೊಳಿಸಬಹುದು. ಇದರಿಂದ ಥೈರಾಯ್ಡ್​ ಸಮಸ್ಯೆ ಇರುವವರಿಗೆ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗಿ ತಲೆಸುತ್ತು-ನಡುಕ ಬರಬಹುದು. ಖಾಲಿ ಹೊಟ್ಟೆಯಲ್ಲಿ ಹೆಚ್ಚು ಕುಡಿದ್ರೆ ಅತಿಸಾರ, ಹೊಟ್ಟೆ ನೋವು, ಅಲರ್ಜಿ ಉಂಟಾಗಬಹುದು. ಹಾಗಾಗಿ ವೈದ್ಯರನ್ನು ಸಂಪರ್ಕಿಸಿದ ನಂತರ ಸೇವಿಸುವುದು ಉತ್ತಮ ಮಾರ್ಗ.

4. ಹೊಟ್ಟೆ ಸಂಬಂಧಿ ಕಾಯಿಲೆ ಇರುವವರು

ಹೊಟ್ಟೆಗೆ ಸಂಬಂಧಿಸಿದಂತೆ ಆರೋಗ್ಯ ಸಮಸ್ಯೆ ಇರುವವರು ಮೆಂತ್ಯ ನೀರನ್ನು ಸೇವಿಸಬಾರದು. ಇದರಲ್ಲಿ ಫೈಬರ್ ಮತ್ತು ಸಪೋನಿನ್‌ಗಳು ಅಧಿಕವಾಗಿದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅನಿಲ, ಉಬ್ಬುವುದು, ಅತಿಸಾರ ಅಥವಾ ವಾಯು ಉಂಟಾಗುತ್ತದೆ. ಇದರಿಂದ ಜೀರ್ಣಕಾರಿ ಸಮಸ್ಯೆಯನ್ನು ಅನುಭವಿಸುವಂತೆ ಮಾಡುತ್ತದೆ. ಹಾಗಾಗಿ ಈ ಸಮಸ್ಯೆ ಇರುವವರು ಮೆಂತ್ಯ ನೀರನ್ನು ಕುಡಿಯದೇ ಇರುವುದು ಉತ್ತಮ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net