Dengue: ಕೊಳಚೆ ಪ್ರದೇಶಗಳು, ನಿಂತಿರುವ ನೀರು, ಅಶುಚಿತ್ವದಿಂದ ಕೂಡಿದ
ಪ್ರದೇಶಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಆ ಸೊಳ್ಳೆಗಳು ಆರೋಗ್ಯಯುತ ವ್ಯಕ್ತಿಗೆ
ಕಚ್ಚುವುದರಿಂದ ಇದು ಜ್ವರ, ಶೀತ, ಕೆಮ್ಮು, ಮಲೇರಿಯಾ, ಡೆಂಗಿಯಂತಹ ಕಾಯಿಲೆಗಳಿಗೆ
ತುತ್ತಾಗಬೇಕಾಗುತ್ತದೆ. ಇದರಿಂದ ಆರೋಗ್ಯವು ಕ್ರಮೇಣವಾಗಿ ಹದಗೆಡಲು
ಪ್ರಾರಂಭವಾಗುತ್ತದೆ. ಈ ವಿಷಕಾರಿ ಸೊಳ್ಳೆಗಳು ಕಡಿಯುವುದರಿಂದ ಇದು ಮೊದ ಮೊದಲು ಜ್ವರದಂತಹ ಲಕ್ಷಣಗಳಲ್ಲಿ ಪ್ರಾರಂಭವಾಗಿ ನಂತರ, ರೋಗಿಗಳಲ್ಲಿ ತೀವ್ರವಾಗಿ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.
ಡೆಂಗ್ಯೂ ಹೇಗೆ ಬರುತ್ತದೆ?
ಡೆಂಗ್ಯೂ ಜ್ವರವು ವೈರಸ್ ಸೋಂಕಿತ ಸೊಳ್ಳೆ ಕಡಿಯುವುದರಿಂದ ಬರುತ್ತದೆ. ಇದು ಮೊದಲು ಜ್ವರ, ಆಯಾಸ, ಹೊಟ್ಟೆನೋವು, ತಲೆನೋವು, ವಾಂತಿ, ವಾಕರಿಕೆಯಲ್ಲಿ ಕಾಣಿಸಿಕೊಳ್ಳುತ್ತದೆ. ಇದಾದ ಬಳಿಕ 2 ದಿನಗಳ ನಂತರ ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
ಡೆಂಗ್ಯೂ ಜ್ವರದ ಲಕ್ಷಣಗಳು ಕಂಡುಬಂದರೆ, ಈ ಆಹಾರಗಳನ್ನು ಸೇವಿಸಿ...
1. ಗ್ರೀನ್ ಟೀ
ಈ ಟೀಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದನ್ನು ಪ್ರತಿನಿತ್ಯ ಕುಡಿಯುವುದರಿಂದ ದೇಹವನ್ನು ಜೀವಕೋಶದ ಹಾನಿಯಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೃದಯ, ಮೂಳೆ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸಿ ಜೀರ್ಣಾಂಗ ಕ್ರಿಯೆಯನ್ನು ಹೆಚ್ಚಿಸುತ್ತದೆ.
2. ದಾಳಿಂಬೆ ಹಣ್ಣು
ದಾಳಿಂಬೆ ಹಣ್ಣಿನಲ್ಲಿ ಕಬ್ಬಿಣ, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಸಮೃದ್ಧವಾಗಿವೆ. ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಆಯಾಸವನ್ನು ಕಡಿಮೆ ಮಾಡಿ, ಮೊದಲಿನ ಸ್ಥಿತಿಗೆ ತಲುಪುವಂತೆ ಮಾಡುತ್ತದೆ.
3. ಎಳನೀರು
ಎಳನೀರು ಖನಿಜಾಂಶಗಳಿಂದ ಸಮೃದ್ಧವಾಗಿರುತ್ತದೆ. ಇದು ಡೆಂಗ್ಯೂ ಬಂದ ರೋಗಿಗಳು ಕುಡಿಯುವುದರಿಂದ ದೇಹದ ನಿರ್ಜಲೀಕರಣವನ್ನು ತಡೆಗಟ್ಟಿ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶವನ್ನು ಒದಗಿಸಿ ಡೆಂಗ್ಯೂ ತಡೆಗಟ್ಟುತ್ತದೆ.
4. ವಿಟಮಿನ್ ಸಿ ಇರುವಂತಹ ಆಹಾರ
ಕಿತ್ತಳೆ, ನಿಂಬೆ, ಮೂಸಂಬಿ, ನೆಲ್ಲಿಕಾಯಿ ಮತ್ತು ಕಿವಿ ಹಣ್ಣುಗಳಲ್ಲಿ ವಿಟಮಿನ್ ಸಿ ಇದ್ದು, ಇವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ದೀರ್ಘಕಾಲಿಕ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಈ ಹಣ್ಣುಗಳು ಡೆಂಗ್ಯೂ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
5. ಪಪಾಯಿ ಎಲೆಗಳ ರಸ
ಪಪಾಯಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಕಿಣ್ವವನ್ನು ಹೊಂದಿರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಜೊತೆಗೆ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಿನಕ್ಕೊಮ್ಮೆ ಈ ರಸವನ್ನು ಸೇವಿಸುವುದರಿಂದ ಡೆಂಗ್ಯೂ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು.
6. ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ರೋಗ ನೀರೋಧಕ ಶಕ್ತಿ ಹೆಚ್ಚಿರುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಈ ಬೆಳ್ಳುಳ್ಳಿ ಸೇವನೆಯು ಡೆಂಗ್ಯೂ ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
7. ಹಸಿರು ತರಕಾರಿಗಳು
ಹಸಿರು ತರಕಾರಿಗಳಲ್ಲಿ ವಿಟಮಿನ್ ಎ,ಸಿ,ಕೆ, ಕಬ್ಬಿಣ, ಮೆಗ್ನೀಶಿಯಂನಂತಹ ಅನೇಕ ಪೌಷ್ಟಿಕಾಂಶಗಳಿರುವುದರಿಂದ ಇದು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.