ಅಧಿಕ ರಕ್ತದೊತ್ತಡವು ಒಂದು ರೀತಿ ಸೈಲೆಂಟ್ ಕಾಯಿಲೆ. ಏಕೆಂದರೆ, ಇದರ ಆರಂಭಿಕ ಲಕ್ಷಣಗಳು ಬಹುತೇಕರಿಗೆ ತಿಳಿಯೋದಿಲ್ಲ. ಅಂದರೆ, ಅಷ್ಟು ಸುಲಭವಾಗಿ ಗೊತ್ತಾಗಲು ಬಿಡುವುದಿಲ್ಲ. ಅನೇಕ ಸಂದರ್ಭಗಳಲ್ಲಿ, ಈ ರೋಗದ ಲಕ್ಷಣಗಳು ಕಾಣಿಸಿಕೊಂಡಾಗಲೂ, ಜನರಿಗೆ ಅವುಗಳ ಬಗ್ಗೆ ಯಾವ ಮುನ್ಸೂಚನೆಯು ಸಿಗೋದಿಲ್ಲ. ಕೆಲವರು ಮಾತ್ರ ಇದನ್ನು ಪತ್ತೆಹಚ್ಚಲು ಯಶಸ್ವಿಯಾಗುತ್ತಾರೆ. ಕಾರಣ, ಆಗಾಗ್ಗೆ ಮಾಡಿಸಿಕೊಳ್ಳುವ ಹೆಲ್ತ್ ಚೆಕಪ್ನಿಂದ.