ಎಸಿ, ಫ್ಯಾನ್​ ಅಗತ್ಯವೇ ಇಲ್ಲ... ಸ್ವಲ್ಪ ನೀರಿದ್ರೆ ಸಾಕು ನಿಮ್ಮ ಮನೆಯನ್ನು ಕೆಲವೇ ನಿಮಿಷಗಳಲ್ಲಿ ತಂಪಾಗಿಸಬಹುದು! Summer Season

ಎಸಿ, ಫ್ಯಾನ್​ ಅಗತ್ಯವೇ ಇಲ್ಲ... ಸ್ವಲ್ಪ ನೀರಿದ್ರೆ ಸಾಕು ನಿಮ್ಮ ಮನೆಯನ್ನು ಕೆಲವೇ ನಿಮಿಷಗಳಲ್ಲಿ ತಂಪಾಗಿಸಬಹುದು! Summer Season
ಎಸಿ, ಫ್ಯಾನ್​ ಅಗತ್ಯವೇ ಇಲ್ಲ... ಸ್ವಲ್ಪ ನೀರಿದ್ರೆ ಸಾಕು ನಿಮ್ಮ ಮನೆಯನ್ನು ಕೆಲವೇ ನಿಮಿಷಗಳಲ್ಲಿ ತಂಪಾಗಿಸಬಹುದು! Summer Season
Published on

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆ ಕಾಲ ಆರಂಭವಾಗಿದ್ದು ಉರಿಯುತ್ತಿರುವ ಸೂರ್ಯನಿಂದಾಗಿ ಮನೆಯಿಂದ ಹೊರಗೆ ಕಾಲಿಡಲು ಆಗುತ್ತಿಲ್ಲ
  • ಅಷ್ಟೇ ಅಲ್ಲ, ಮನೆಯ ಒಳಗಿದ್ದರು ಕೂಡ ಬೇಸಿಗೆಯ ಬಿಸಿ ಕಾಡುತ್ತಿದೆ
  • ವಿಪರೀತ ಸೆಕೆಯಿಂದ ಮನೆಯ ಒಳಗೆ ಆರಾಮಾಗಿ ಕೂರಲು ಸಾದ್ಯವಾಗುತ್ತಿಲ್ಲ
  • ಬೇಸಿಗೆಯ ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಜನರು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ
Summer Season : ದೇಶದೆಲ್ಲೆಡೆ ಬೇಸಿಗೆ ಕಾಲ ಆರಂಭವಾಗಿದೆ. ಉರಿಯುತ್ತಿರುವ ಸೂರ್ಯನಿಂದಾಗಿ ಮನೆಯಿಂದ ಹೊರಗೆ ಕಾಲಿಡಲು ಆಗುತ್ತಿಲ್ಲ. ಅಷ್ಟೇ ಅಲ್ಲ, ಮನೆಯ ಒಳಗಿದ್ದರು ಕೂಡ ಬೇಸಿಗೆಯ ಬಿಸಿ ಕಾಡುತ್ತಿದೆ. ವಿಪರೀತ ಸೆಕೆಯಿಂದ ಮನೆಯ ಒಳಗೆ ಆರಾಮಾಗಿ ಕೂರಲು ಸಾದ್ಯವಾಗುತ್ತಿಲ್ಲ. ದೇಹವೂ ಅಗ್ನಿ ಕುಂಡದಲ್ಲಿ ಕುಳಿತಿರುವಂತೆ ಭಾಸವಾಗುತ್ತಿದೆ.
ಬೇಸಿಗೆಯ ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಜನರು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಕೆಲವರು ತಂಪು ಪಾನೀಯಗಳ ಮೊರೆ ಹೋದರೆ, ಇನ್ನು ಕೆಲವರು ಮಡಿಕೆ ನೀರನ್ನು ಹೆಚ್ಚು ಆಶ್ರಯಿಸುತ್ತಿದ್ದಾರೆ. ಹೆಚ್ಚಿನ ಜನರು ಎಸಿ ಮತ್ತು ಫ್ಯಾನ್‌ಗಳನ್ನು ಅವಲಂಬಿಸಿದ್ದಾರೆ. ಆದರೆ, ಈ ಎಲೆಕ್ಟ್ರಾನಿಕ್ಸ್​ ಉತ್ಪನ್ನಗಳು ವಿದ್ಯುತ್ ಬಿಲ್​ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ, ಎಲೆಕ್ಟ್ರಾನಿಕ್ಸ್​ ವಸ್ತುಗಳನ್ನು ಬಳಸದೇ ನಿಮ್ಮ ಮನೆಯನ್ನು ತಂಪಾಗಿಸಲು ಕೆಲವು ಮಾರ್ಗಗಳಿವೆ. ಅವುಗಳನ್ನು ತಿಳಿಯಲು ಬಯಸುವುದಾದರೆ ಮುಂದೆ ಓದಿ.

ಈ ಕೆಳಗಿನ ಟಿಪ್ಸ್​ ಅನುಸರಿಸಿ...

* ಬಿಸಿ ವಾತಾವರಣದಲ್ಲಿ ದಪ್ಪ ಬಟ್ಟೆಯ ಪರದೆಗಳನ್ನು ಬಳಸುವುದು ಉತ್ತಮ. ಇದು ನೇರ ಸೂರ್ಯನ ಬೆಳಕು ಮನೆಗೆ ಪ್ರವೇಶಿಸುವುದನ್ನು ತಡೆಯುತ್ತದೆ ಮತ್ತು ಶಾಖವನ್ನು ಕಡಿಮೆ ಮಾಡುತ್ತದೆ.
* ನಿಮ್ಮ ಮನೆಯಲ್ಲಿ ಗೋಡೆಗಳು, ಪರದೆಗಳು ಮತ್ತು ಬೆಡ್‌ಶೀಟ್‌ಗಳಿಗೆ ಬಿಳಿ ಮತ್ತು ಕ್ರೀಮ್‌ನಂತಹ ತಿಳಿ ಬಣ್ಣಗಳನ್ನು ಬಳಸಿ. ಇವು ಶಾಖವನ್ನು ಕಡಿಮೆ ಮಾಡುತ್ತದೆ.
* ಟೆರೇಸ್ ಮೇಲೆ ನೀರು ಸಿಂಪಡಿಸುವುದರಿಂದ ಶಾಖವನ್ನು ಕಡಿಮೆ ಮಾಡಬಹುದು. ನೀವು ಮಧ್ಯಾಹ್ನ ಅಥವಾ ಬಿಸಿಲಿನ ದಿನದಲ್ಲಿ ಟೆರೆಸ್​ ಮೇಲೆ ನೀರು ಹಾಕಬಹುದು.
* ಫ್ಯಾನ್‌ನ ಮುಂದೆ ಐಸ್ ಅಥವಾ ತಣ್ಣೀರಿನ ಬಟ್ಟಲು ಇರಿಸಿ. ಇದು ಕೋಣೆಯನ್ನು ತಂಪಾಗಿಸಲು ಸಹಾಯ ಮಾಡುತ್ತದೆ.
* ತುಳಸಿ ಮತ್ತು ಮನಿ ಪ್ಲಾಂಟ್‌ನಂತಹ ಸಸ್ಯಗಳು ಮನೆಯೊಳಗೆ ಶಾಖವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಾಲ್ಕನಿಯಲ್ಲಿ ಅಥವಾ ಕಿಟಕಿಯ ಬಳಿ ಈ ಸಸ್ಯಗಳನ್ನು ಬೆಳೆಸಿ.
* ಹಗಲು ಮತ್ತು ರಾತ್ರಿಗಳಲ್ಲಿ ಕಿಟಕಿಗಳನ್ನು ತೆರೆದಿಡಲು ಪ್ರಯತ್ನಿಸಿ. ಇದು ತಂಪಾದ ಗಾಳಿಯನ್ನು ಮನೆಗೆ ಪ್ರವೇಶಿಸಲು ಸಹಾಯ ಮಾಡುತ್ತದೆ.
* ಟೆರೇಸ್‌ನಲ್ಲಿ ತರಕಾರಿಗಳು ಅಥವಾ ಇತರ ವಸ್ತುಗಳನ್ನು ಬೆಳೆಸುವುದರಿಂದ ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಟೆರೇಸ್ ಮೇಲೆ ದೊಡ್ಡ ಪ್ಲಾಸ್ಟಿಕ್ ಹಾಳೆಯನ್ನು ಇರಿಸಿ. ಅದರ ಮೇಲೆ ನೀವು ಒಣಹುಲ್ಲನ್ನು ಹಾಕಿ, ಸಾಂದರ್ಭಿಕವಾಗಿ ನೀರು ಹಾಕಬೇಕು. ಇದು ಕೋಣೆಯೊಳಗಿನ ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಮಧ್ಯಾಹ್ನ 11 ರಿಂದ ಸಂಜೆ 5 ರವರೆಗೆ, ಸೂರ್ಯನ ನೇರ ಕಿರಣಗಳು ಬೀಳುವ ಕಿಟಕಿಗಳನ್ನು ಮುಚ್ಚಿಡಿ. ದಪ್ಪನೆ ಅಥವಾ ತಿಳಿ ಬಣ್ಣದ ಥರ್ಮಲ್ ಪರದೆ ಬಳಸಿ. ಇದು ಹೊರಗಿನ ಶಾಖ ಮನೆಯೊಳಗೆ ಬರದಂತೆ ತಡೆಯುತ್ತದೆ.
* ಬಲ್ಬ್‌ಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಚಾಲನೆಯಲ್ಲಿದ್ದಾಗ ಶಾಖವನ್ನು ಹೊರಸೂಸುತ್ತವೆ. ಹಳೆಯ ಇನ್ಕ್ಯಾಂಡಿಸೆಂಟ್ ಬಲ್ಬ್‌ಗಳ ಬದಲಿಗೆ LED ಬಲ್ಬ್‌ಗಳನ್ನು ಬಳಸಿ. ಅನಗತ್ಯವಾಗಿ ಟಿವಿ, ಕಂಪ್ಯೂಟರ್ ಅಥವಾ ಓವನ್ ಬಳಸಬೇಡಿ.
* ಬೇಸಿಗೆಯಲ್ಲಿ ನೆಲದ ಮೇಲೆ ದಪ್ಪನೆಯ ಕಾರ್ಪೆಟ್‌ಗಳಿದ್ದರೆ ಅವುಗಳನ್ನು ತೆಗೆದಿಡಿ. ಬರಿ ನೆಲವು ತಂಪಾಗಿರುತ್ತದೆ. ಸಾಧ್ಯವಾದರೆ, ಸಂಜೆ ಹೊತ್ತು ನೆಲವನ್ನು ಹಸಿ ಬಟ್ಟೆಯಿಂದ ಒರೆಸುವುದರಿಂದ ಮನೆಯ ತಾಪಮಾನ ತಕ್ಷಣ ಕಡಿಮೆಯಾಗುತ್ತದೆ.
* ಮನೆಯಲ್ಲಿ ಸೋಫಾ ಕವರ್‌ಗಳು, ಬೆಡ್ ಶೀಟ್ ಹಾಗೂ ದಿಂಬಿನ ಕವರ್‌ಗಳಿಗೆ ಹತ್ತಿ ಬಟ್ಟೆಯನ್ನೇ ಬಳಸಿ. ಸಿಂಥೆಟಿಕ್ ಅಥವಾ ರೇಷ್ಮೆ ಬಟ್ಟೆಗಳು ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ, ಆದರೆ ಹತ್ತಿ ಬಟ್ಟೆ ಗಾಳಿಯಾಡಲು ಬಿಡುತ್ತದೆ.
ಈ ಮೇಲಿನ ಎಲ್ಲ ಟಿಪ್ಟ್​ಗಳನ್ನು ಬಳಸುವ ಮೂಲಕ ನೀವು ಬೇಸಿಗೆ ಬಿಸಿಯನ್ನೂ ತಂಪಾಗಿಸಬಹುದು. ಇದರಿಂದ ಯಾವುದೇ ಕಿರಿಕಿರಿಯಿಲ್ಲದೇ ಆರಾಮವಾಗಿ ಇರಬಹುದು. ಅಲ್ಲದೆ, ರಾತ್ರಿ ನಿದ್ರೆ ಬಾರದೇ ಒದ್ದಾಡುವಂತಹ ಸ್ಥಿತಿಯು ಕೂಡ ನಿರ್ಮಾಣವಾಗುವುದಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net