ಕೆಲಸದ ಒತ್ತಡದಿಂದ ಸಾಕಾಗಿದೆಯಾ..? ಕುರ್ಚಿಯನ್ನು ಬಿಡದೆಯೇ ಒತ್ತಡವನ್ನು ನಿವಾರಿಸಲು ಈ ಮಾರ್ಗಗಳನ್ನು ಅನುಸರಿಸಿ..Stress relief

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ಹೆಚ್ಚಿನ ಜನರು ದೈಹಿಕ ನಿಷ್ಕ್ರಿಯತೆಯ ಜೀವನವನ್ನು ನಡೆಸುತ್ತಿದ್ದಾರೆ
  • ಕಾರ್ಪೊರೇಟ್ ಜೀವನಶೈಲಿಯಲ್ಲಿ 8 ರಿಂದ 10 ಗಂಟೆಗಳ ದೀರ್ಘ ಅವಧಿ ಕೆಲಸ ಮಾಡುತ್ತಾರೆ
  • ಈ ಅಭ್ಯಾಸವು ದೈಹಿಕ ಚಟುವಟಿಕೆಯ ಮಟ್ಟವನ್ನು ಕುಸಿಯುವಂತೆ ಮಾಡುತ್ತದೆ
Stress relief: ಭಾರತದಲ್ಲಿ ಹೆಚ್ಚಿನ ಜನರು ದೈಹಿಕ ನಿಷ್ಕ್ರಿಯತೆಯ ಜೀವನವನ್ನು ನಡೆಸುತ್ತಿದ್ದಾರೆ. ಏಕೆಂದರೆ ಅನೇಕರು ಕಾರ್ಪೊರೇಟ್ ಅಥವಾ ಡೆಸ್ಕ್ ಕೆಲಸಗಳಿಗಾಗಿ 8 ರಿಂದ 10 ಗಂಟೆಗಳ ದೀರ್ಘ ಅವಧಿಯಲ್ಲಿ ಕುರ್ಚಿಯ ಮೇಲೆ ಕುಳಿತೇ ಕೆಲಸವನ್ನು ಮಾಡುತ್ತಾರೆ. ಈ ಅಭ್ಯಾಸವು ದೈಹಿಕ ಚಟುವಟಿಕೆಯ ಮಟ್ಟವನ್ನು ಕುಸಿಯುವಂತೆ ಮಾಡುತ್ತದೆ. ಹೀಗಾಗಿ ಜನರಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಲು ಪ್ರಾರಂಭವಾಗುತ್ತದೆ.
ಹೆಚ್ಚಿನ ಆದಾಯಗಳಿಸುವ ನಿಟ್ಟಿನಲ್ಲಿ ಜನರು ತಮ್ಮ ಯೋಗ ಕ್ಷೇಮವನ್ನು ಕಾಯ್ದುಕೊಳ್ಳುವ ಪ್ರಕ್ರಿಯೆಯನ್ನು ಕಡೆಗಣಿಸುತ್ತಿದ್ದಾರೆ. ಹಾಗಾಗಿ ದಿನನಿತ್ಯದ ಜೀವನದಲ್ಲಿ ಕಡಿಮೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುವ ಸರಳ ಮಾರ್ಗಗಳನ್ನು ನಾವಿಂದು ತಿಳಸಲಿದ್ದೇವೆ.

ನಿಮ್ಮ ಕುರ್ಚಿಯನ್ನು ಬಿಡದೆಯೇ ಒತ್ತಡವನ್ನು ನಿವಾರಿಸಲು 5 ಮಾರ್ಗಗಳು

1. ಆಳವಾದ ಉಸಿರಾಟದ ವ್ಯಾಯಾಮಗಳು

ಮನಸ್ಸನ್ನು ಕೇಂದ್ರೀಕರಿಸಲು ಒಂದು ಸರಳ ಮಾರ್ಗವೆಂದರೆ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದು. ಇದಕ್ಕಾಗಿ, 4-4-4 ಉಸಿರಾಟದ ತಂತ್ರವನ್ನು ಬಳಸಿ. ಇದರಲ್ಲಿ 4 ಸೆಕೆಂಡುಗಳ ಕಾಲ ಸಂಕ್ಷಿಪ್ತ ವಿರಾಮ ತೆಗೆದುಕೊಂಡು, ನಂತರ ನಾಲ್ಕು ಸೆಕೆಂಡುಗಳ ಕಾಲ ಉಸಿರನ್ನು ಎಳೆದುಕೊಳ್ಳಿ. ನಂತರ 4 ಸೆಕೆಂಡುಗಳ ಕಾಲ ಉಸಿರನ್ನು ಹೊರಹಾಕಿ.
ಈ ವ್ಯಾಯಾಮವು ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಆದರಿಂದ ಕೆಲಸದಲ್ಲಿ ಭಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಚೇರ್ ಯೋಗವನ್ನು ಒಮ್ಮೆ ಪ್ರಯತ್ನಿಸಿ

ಕಚೇರಿ ಕುರ್ಚಿಯಲ್ಲಿ ಕುಳಿತಾಗ ಸರಳವಾದ ಸ್ಟ್ರೆಚಿಂಗ್ ವ್ಯಾಯಾಮಗಳು ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ದೇಹವನ್ನು ಪುನರ್ಭರ್ತಿ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ದೇಹದ ಮೇಲೆ ಬೀಳುತ್ತಿರುವ ಒತ್ತಡವನ್ನು ಕಡಿಮೆ ಮಾಡಿ, ಭಂಗಿಯನ್ನು ಸರಿಪಡಿಸಲು ಸಹಾಯಕವಾಗಬಹುದು.
ದೀರ್ಘಕಾಲ ಕುಳಿತುಕೊಳ್ಳುವುದರಿಂದ ಬೆನ್ನು ಮತ್ತು ಭುಜದ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸ್ನಾಯುಗಳನ್ನು ಹಿಗ್ಗಿಸುವುದನ್ನು ಅಭ್ಯಾಸ ಮಾಡಿದಾಗ ಈ ರೀತಿಯ ವ್ಯಾಯಾಮಗಳು ಸಹಾಯಕವಾಗಬಹುದು.

3. ಮೈಂಡ್‌ಫುಲ್‌ನೆಸ್ ವಿರಾಮಗಳನ್ನು ತೆಗೆದುಕೊಳ್ಳಿ

ಕೆಲಸ ಮಾಡುವಾಗ ಜಾಗರೂಕತೆಯಿಂದ ಮಾಡಿದ್ದರೆ, ಕೆಲಸದಲ್ಲಿ ವ್ಯತ್ಯಾಸ ಆಗುವುದು ಸಹಜವಾಗಿರುತ್ತದೆ. ಹಾಗಾಗಿ ಮೈಂಡ್​ಫುಲ್​ನೆಸ್​ ವ್ಯಾಯಾಮ ಉಸಿರಾಟದ ಮೇಲೆ ಕೇಂದ್ರೀಕರಿಸುವುದರಿಂದ ನರಮಂಡಲವನ್ನು ಶಾಂತವಾಗಿರುವಂತೆ ಮಾಡುತ್ತದೆ. ಇದು ಕೆಲಸದ ಸ್ಥಳದಲ್ಲಿ ಆಂತರಿಕ ಶಾಂತಿಯು ಪ್ರಾಥಮಿಕ ಗುರಿಯಾಗಿದೆ.

4. ಸಂಗೀತ ಕೇಳುವುದು

ಕೆಲಸದ ಸ್ಥಳದಲ್ಲಿ ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿರುತ್ತದೆ. ಹಾಗೆಯೇ ನರಮಂಡಲವನ್ನು ಶಾಂತವಾಗಿರಿಸಲು ಹಿತವಾದ ಸಂಗೀತವನ್ನು ಕೇಳುವ ಅಭ್ಯಾಸವನ್ನು ಮಾಡುವುದು ಒಳ್ಳೆಯ ಸಲಹೆಯಾಗಿದೆ. ಇದು ಮನಸ್ಸನ್ನು ಹಗುರವಾಗಿಸಿ, ಪ್ಯಾನಿಕ್​ ಅಟ್ಯಾಕ್​ನಂತಹ ಸಮಸ್ಯೆಯನ್ನು ತಡೆಯುತ್ತದೆ.

5. ದೃಶ್ಯೀಕರಣ

ಈ ತಂತ್ರವನ್ನು ಬಳಸುವುದರಿಂದ ಶಾಂತಿಯುತ ಸ್ಥಿತಿಯನ್ನು ರಚಿಸಲು ಸಹಾಯವಾಗುತ್ತದೆ. ಹಾಗಾಗಿ ನಿಮಗೆ ಅಧಿಕವಾದ ಒತ್ತಡ ಅನುಭವಿಸುತ್ತಿದ್ದರೆ, ನೀವು ನಿಶಬ್ಧವಾಗಿರುವ ಬೀಚ್​, ಇಲ್ಲವೇ ಕಾಡಿನ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಕಲ್ಪನೆ ಮಾಡಿಕೊಳ್ಳಿ. ಈ ಸರಳ ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡುತ್ತದೆ. ಆ ಸ್ಥಳದಲ್ಲಿರುವ ಆತಂಕ ಮತ್ತು ಭಯವನ್ನು ಕಡಿಮೆ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net