ವಾಸ್ತವವಾಗಿ ಹೇಳುವುದಾದರೆ, ವಯಸ್ಸಾದಂತೆ ಮೂಳೆಗಳು ದುರ್ಬಲವಾಗುತ್ತವೆ. ಇವು ಸ್ನಾಯುಗಳನ್ನು ಸಡಿಲಗೊಳಿಸಿ, ಕೀಲುಗಳ ನಡುವೆ ಕಾರ್ಟಿಲೆಜ್ ಸವೆಯುವಂತೆ ಮಾಡುತ್ತದೆ. ಇದರಿಂದ ಸ್ನಾಯುಗಳಲ್ಲಿ ಉರಿಯೂತ, ಬಿಗಿತ ಮತ್ತು ನೋವನ್ನುಂಟು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ, ವಯಸ್ಸಾದವರು ಮಾತ್ರವಲ್ಲದೆ ಯುವಕರು ಸಹ ಕೀಲು ನೋವಿನ ಒಳಗಾಗುತ್ತಾರೆ. ಈ ಸಮಸ್ಯೆ ಚಳಿಗಾಲದಲ್ಲಿ ಇನ್ನಷ್ಟು ಹೆಚ್ಚಾಗಲು ಪ್ರಾರಂಭಿಸುತ್ತದೆ.