ಆರೋಗ್ಯಕ್ಕೆ ಕುಂಬಳಕಾಯಿ ಬೀಜ ವರದಾನವೇ? ಅತಿಯಾದ ಸೇವನೆಯಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ಎಚ್ಚರ! Pumpkin Seeds

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Pumpkin Seeds: ಕುಂಬಳಕಾಯಿ ಬೀಜಗಳು ನೋಡಲು ತುಂಬಾ ಚಿಕ್ಕದಾಗಿ ಕಂಡರೂ, ಅವು ಹೆಚ್ಚಿನ ಪೋಷಕಾಂಶಗಳಿಂದ ಕೂಡಿರುತ್ತದೆ. ಇದು ಫೈಬರ್, ಪ್ರೋಟೀನ್, ವಿಟಮಿನ್‌ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಉತ್ತಮ ಆರೋಗ್ಯವನ್ನು ನೀಡುತ್ತದೆ.
ಆದಾಗ್ಯೂ, ಸತು, ಕಬ್ಬಿಣ, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಎ ನಂತಹ ಅಗತ್ಯ ಪೋಷಕಾಂಶಗಳನ್ನು ಸಹ ಇದು ಹೊಂದಿದ್ದು, ಇದು ಕೆಲವರಿಗೆ ಪ್ರಯೋಜನಗಳನ್ನು ನೀಡಬಹುದು. ಜೊತೆಗೆ ಅತಿಯಾಗಿ ತಿನ್ನುವುದನ್ನು ಹಾನಿಕಾರಕ ಎಂದು ತಿಳಿಸುತ್ತದೆ.

ಜೀರ್ಣಕ್ರಿಯೆಯ ಮೇಲೆ ನೇರ ಪರಿಣಾಮ

ಕುಂಬಳಕಾಯಿ ಬೀಜಗಳನ್ನು ಹೆಚ್ಚಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ಗ್ಯಾಸ್​, ಅಸಿಡಿಟಿ, ಉಬ್ಬುವುದು ಮತ್ತು ಹೊಟ್ಟೆ ನೋವನ್ನು ಉಂಟುಮಾಡಬಹುದು.

ಅಲರ್ಜಿ ಸಮಸ್ಯೆ

ಅತಿಯಾಗಿ ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ಗಂಟಲು ನೋವು, ಕೆಮ್ಮು ಮತ್ತು ತಲೆನೋವು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದಾಗ್ಯೂ, ನೀವೇನಾದರೂ ಮೊದಲ ಬಾರಿಗೆ ಪ್ರಯತ್ನಿಸುತ್ತಿದ್ದರೆ, ಸಣ್ಣ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಹೆಚ್ಚಿನ ಕ್ಯಾಲೋರಿ

ಕುಂಬಳಕಾಯಿ ಬೀಜದಲ್ಲಿ ಹೆಚ್ಚಿನ ಕ್ಯಾಲೋರಿಗಳಿರುವುದರಿಂದ ಅತಿಯಾದ ಸೇವನೆಯು ತೂಕವನ್ನು ಹೆಚ್ಚಿಸಬಹುದು. ಇದರಿಂದ ಬೊಜ್ಜು ಬರುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ನೀವೇನಾದರೂ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ

ಕುಂಬಳಕಾಯಿ ಬೀಜಗಳು ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ನಂತಹ ಅಂಶಗಳನ್ನು ಹೊಂದಿರುತ್ತದೆಯಾದರೂ, ಮಿತಿ ಮೀರಿ ಸೇವಿಸುವುದರಿಂದ ಕೆಲವು ಸಂದರ್ಭಗಳಲ್ಲಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರಬಹುದು. ಆದರಿಂದ ಈ ಸಮಸ್ಯೆ ಇರುವಂತವರು ಆದಷ್ಟು ವೈದ್ಯರನ್ನು ಸಂಪರ್ಕಿಸಿ ನಂತರ ಇವುಗಳನ್ನು ಸೇವಿಸಿ..

ಎಷ್ಟು ತಿಂದರೆ ಉತ್ತಮ?

ಆರೋಗ್ಯ ತಜ್ಞರು ಸೂಚಿಸುವಂತೆ ದಿನಕ್ಕೆ 30 ಗ್ರಾಂ ಕುಂಬಳಕಾಯಿ ಬೀಜಗಳನ್ನು ಸೇವಿಸುವುದನ್ನು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಕಡಿಮೆ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ ಮತ್ತು ಯಾವುದೇ ಆರೋಗ್ಯದ ಅಪಾಯವನ್ನುಂಟುಮಾಡುವುದಿಲ್ಲ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net