ಪನೀರ್ ಅಥವಾ ದಾಲ್ ಪ್ರೋಟೀನ್ ರೇಟಿಂಗ್‌ನಲ್ಲಿ ಯಾವುದು ಫಸ್ಟ್? ಫಿಟ್‌ನೆಸ್ ಟ್ರೈನರ್ ಬಿಚ್ಚಿಟ್ಟ ರಹಸ್ಯ! Protein ranking

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Protein ranking: ಆರೋಗ್ಯಕರ ಸದೃಢ ಹೃದಯಕ್ಕೆ ಪ್ರೊಟೀನ್​ ಅತ್ಯಗತ್ಯ ಎಂದು ಹೇಳಲಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರಿಂದ ಹಿಡಿದು ಸ್ನಾಯುಗಳನ್ನು ನಿರ್ಮಿಸುವುದು, ಹಸಿವನ್ನು ನಿಯಂತ್ರಿಸುವುದು ಮತ್ತು ತೂಕವನ್ನು ನಿರ್ವಹಿಸುವುದರ ವರೆಗೂ ಪ್ರೊಟೀನ್​ ಪ್ರಮುಖ ಪಾತ್ರ ವಹಿಸುತ್ತದೆ.
ವಿವಿಧ ಮೂಲಗಳಿಂದ ಪ್ರೋಟೀನ್‌ನ ಗುಣಮಟ್ಟ ಮತ್ತು ಪರಿಣಾಮಕಾರಿತತ್ವವು ಬದಲಾಗುತ್ತಿರುತ್ತದೆ. ಹಾಗಾಗಿ ಜನರು ತಾವು ಸೇವಿಸುವ ಆಹಾರದಲ್ಲಿ ಗುಣಮಟ್ಟದ ಪ್ರೊಟೀನ್​ ಪಡೆಯುತ್ತಿದ್ದೇವೆ ಎಂಬುದರ ಬಗ್ಗೆ ಗೊಂದಲಕ್ಕೀಡಾಗಿರುತ್ತಾರೆ.
ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರ ಫಿಟ್ನೆಸ್ ತರಬೇತುದಾರ ಸಿದ್ಧಾರ್ಥ್ ಸಿಂಗ್ ಅವರು ಇತ್ತೀಚೆಗೆ ಆಹಾರದಲ್ಲಿನ ಪ್ರೋಟೀನ್ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಿದ್ದಾರೆ. ಅವರು ವಿವಿಧ ಪ್ರೋಟೀನ್ ಮೂಲಗಳನ್ನು ಅವುಗಳ ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ವಿವರಿಸಿದ್ದಾರೆ.
ಈ ಪಟ್ಟಿಯನ್ನು S, A, B, C, ಮತ್ತು D ವರ್ಗಗಳಾಗಿ ವಿಂಗಡಿಸಲಾಗಿದೆ. S ಅತ್ಯುತ್ತಮ ಪ್ರೋಟೀನ್ ವರ್ಗವಾಗಿದ್ದರೆ, D ಕಡಿಮೆ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಹಾಗಿದ್ದರೆ, ಯಾವ ಪ್ರೊಟೀನ್​ಗಳು ಉತ್ತಮವಾಗಿವೆ ಯಾವುದು ಕಡಿಮೆ ಎಂದು ನೋಡೋಣ ಬನ್ನಿ...

1. ದ್ವಿದಳ ಧಾನ್ಯಗಳು

ಬಹುತೇಕ ಎಲ್ಲಾ ಭಾರತೀಯ ಮನೆಗಳಲ್ಲಿಯೂ ದ್ವಿದಳ ಧಾನ್ಯಗಳನ್ನು ಪ್ರತಿದಿನ ಸೇವಿಸಲಾಗುತ್ತದೆ. ಇದು ವಿಶೇಷವಾಗಿ ಇವು ಒದಗಿಸುವ ಪ್ರೊಟೀನ್​ಗಳನ್ನು ಬಳಸಿಕೊಳ್ಳಲು ಸಾಧ್ಯವಿರುವುದಿಲ್ಲ. ಹಾಗಾಗಿ ಇದು ಬಿ ವರ್ಗಕ್ಕೆ ಸೇರಿದೆ ಎಂದು ಸಿದ್ದಾರ್ಥ್​ ಸೂಚಿಸಿದ್ದಾರೆ.

2. ಒಣ ಹಣ್ಣುಗಳು

ಒಣ ಹಣ್ಣುಗಳನ್ನು ಸಾಮಾನ್ಯವಾಗಿ ಆರೋಗ್ಯಕರವೆಂದು ಅತಿ ಹೆಚ್ಚಿನ ಜನರು ನಂಬುತ್ತಾರೆ. ಆದರೆ, ಅವುಗಳಲ್ಲಿ ಕಡಿಮೆ ಪ್ರೊಟೀನ್​ಗಳಿಂದ ಸಮೃದ್ಧವಾಗಿದೆ ಎಂದು ಫಿಟ್ನೆಸ್ ತರಬೇತುದಾರರು ಹಂಚಿಕೊಳ್ಳುತ್ತಾರೆ. ಇದರ ಸೇವನೆಯು ದೇಹಕ್ಕೆ ಕಡಿಮೆ ಮಟ್ಟದಲ್ಲಿ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಪ್ರೋಟೀನ್‌ನ ಒಂದು ಸಣ್ಣ ಭಾಗವನ್ನು ಮಾತ್ರ ಸರಿಯಾಗಿ ಜೀರ್ಣಿಸಿಕೊಳ್ಳಬಲ್ಲದರಿಂದ, ಇದನ್ನು ಸಿ ಎಂದು ವರ್ಗೀಕರಿಸಲಾಗಿದೆ.

3. ಮೊಸರು

ಸಿದ್ಧಾರ್ಥ ಮೊಸರನ್ನು ಪ್ರೋಟೀನ್‌ನ ಅತ್ಯುತ್ತಮ ಮೂಲವೆಂದು ಪರಿಗಣಿಸುತ್ತಾರೆ. ಇದು 100 ಗ್ರಾಂ ಮೊಸರಿನಲ್ಲಿ ಸುಮಾರು 8 ಗ್ರಾಂ ಪ್ರೋಟೀನ್ ಕಂಡುಬರುತ್ತದೆ. ಇದರಿಂದ ಇವುಗಳ ಸೇವನೆಯು ದೇಹಕ್ಕೆ ಅತಿ ಹೆಚ್ಚಿನ ಪೌಷ್ಟಿಕಾಂಶಗಳನ್ನು ನೀಡುತ್ತದೆ. ಇದನ್ನು ಎ ವರ್ಗಕ್ಕೆ ಸೇರಿಸಲಾಗಿದೆ.

4. ಪ್ರೋಟೀನ್ ಬಿಸ್ಕತ್ತುಗಳು

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ "ಪ್ರೋಟೀನ್" ಎಂದು ಹೇಳಿಕೊಳ್ಳುವ ಅನೇಕ ಬಿಸ್ಕತ್ತುಗಳು ಲಭ್ಯವಿರುತ್ತದೆ. ಸಿದ್ಧಾರ್ಥ ಅವರ ಪ್ರಕಾರ, ಯಾವುದೇ ಬಿಸ್ಕತ್​ಗಳಲ್ಲಿ ಪ್ರೊಟೀನ್​ಗಳು ಇರುವುದಿಲ್ಲ. ಯಾರೇ ಹೇಳಿದರು ಅವುಗಳಿಂದ ದೂರವಿರಬೇಕು ಎಂದು ಹೇಳುತ್ತಾರೆ. ಇದನ್ನು ಉತ್ಪನ್ನಗಳನ್ನು "D" ಎಂದು ವರ್ಗೀಕರಿಸುತ್ತಾರೆ.

5. ಪನೀರ್ 

ತರಬೇತುದಾರರು ಪನೀರ್ ಮತ್ತು ಟೋಫುವನ್ನು ಪ್ರೋಟೀನ್‌ನ ಅತ್ಯುತ್ತಮ ಮೂಲಗಳೆಂದು ವರ್ಗೀಕರಿಸುತ್ತಾರೆ. ಅವು ದೇಹಕ್ಕೆ ಉತ್ತಮ ಪ್ರೊಟೀನ್​ ನೀಡುವುದರ ಜೊತೆಗೆ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಅವರು ಕಡಿಮೆ ಕೊಬ್ಬಿನ ಪನೀರ್​ ಅನ್ನು ಸೇವಿಸಲು ಶಿಫಾರಸ್ಸು ಮಾಡುತ್ತಾರೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net