ಈ ಕುರಿತು ಮಣಿಪಾಲ್ ಹಾಸ್ಪಿಟಲ್ ವೈಟ್ ಫೀಲ್ಡ್ ಕನ್ಸಲ್ಟೆಂಟ್ ಎಂಡೋಕ್ರಿನಾಲಜಿಸ್ಟ್ ಮತ್ತು ಡಬಾಬಿಟಾಲಜಿಸ್ಟ್ ಡಾ.ಅನೂಶಾ ಹಂದ್ರಾಳ್ , “ಇಂದು ಯುವ ವಯಸ್ಕರು ಆನ್ಲೈನ್ ನಲ್ಲಿ ದೊರೆಯುವ ತಪ್ಪು ಮಾಹಿತಿಯಲ್ಲಿ ಕಳೆದು ಹೋಗಿದ್ದಾರೆ. ಅವರಿಗೆ ನಾನು ಸದಾ ಟ್ರೆಂಡ್ ಗಳಿಂದ ದೂರವಿರ ಮತ್ತು ವೈದ್ಯರೊಂದಿಗೆ ಮಾತನಾಡಿ ಎಂದು ಸಲಹೆ ನೀಡುತ್ತೇನೆ. ನಮಗೆ ಅನುಕೂಕರ, ಪರಿಣಾಮಕಾರಿ ಮತ್ತು ವಿಜ್ಞಾನದ ಬೆಂಬಲದ ಚಿಕಿತ್ಸೆಗಳು ಲಭ್ಯವಿವೆ. ಸೆಮಾಗ್ಲುಟೈಡ್ ನಂತಹ ವಾರಕ್ಕೊಮ್ಮೆ ಸೇವಿಸುವ ಆಯ್ಕೆಗಳು ನಿತ್ಯ ಔಷಧ ಸ್ವೀಕರಿಸುವ ಹೊರೆಯನ್ನು ನಿವಾರಿಸುತ್ತವೆ ಮತ್ತು ಜೀವನಶೈಲಿ ಬದಲಾವಣೆಗಳೊಂದಿಎ ಸಂಯೋಜಿಸಿದಾಗ ಅವರಿಗೆ ತಮ್ಮ ಆರೋಗ್ಯದ ಅರ್ಥಪೂರ್ಣ, ದೀರ್ಘಾವಧಿ ನಿಯಂತ್ರಣ ತೆಗೆದುಕೊಳ್ಳುವ ಅವಕಾಶ ನೀಡುತ್ತವೆ” ಎಂದರು.