ತೂಕ ಇಳಿಸಿಕೊಳ್ಳಲು ಜಿಮ್-ಡಯಟ್​ ಬೇಡ, ಆರೋಗ್ಯ ತಜ್ಞರ ಈ ರಹಸ್ಯ ಟಿಪ್ಸ್ ಸಾಕು! Weight Loss

ಚಿತ್ರ AI
ಚಿತ್ರ AI
Published on
Weight Loss: ಉತ್ತಮ ಆರೋಗ್ಯವು ಒಂದು ದೊಡ್ಡ ಸಂಕೀರ್ಣ ಯೋಜನೆಯಂತೆ ಭಾಸವಾಗುತ್ತದೆ. ಇದರಲ್ಲಿ ಹೊಸ ಆಹಾರ ಕ್ರಮಗಳು, ವ್ಯಾಯಾಮಗಳು, ದಿನಚರಿ ಇದು ಬೇಗನೆ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.
ಆದರೆ ವಾಸ್ತವದಲ್ಲಿ ಹೇಳುವುದಾದರೆ, ಹೆಚ್ಚಿನ ಶಾಶ್ವತ ಬದಲಾವಣೆಗಳು ಒತ್ತಡವಿಲ್ಲದೇ, ನೀವು ಅನುಸರಿಸುವ ಸರಳ ಅಭ್ಯಾಸಗಳಿಂದಲೇ ಬರುತ್ತವೆ ಎಂದರೆ ತಪ್ಪಾಗದು. ನಿಮ್ಮ ಆಹಾರ ದಿನಚರಿ, ತಂತ್ರಜ್ಞಾನದ ಸುತ್ತ ಗಡಿಗಳನ್ನು ಸ್ಥಾಪಿಸಿಕೊಳ್ಳುವುದು ಮುಂತಾದ ವಿಷಯಗಳು ಅರಿತುಕೊಂಡು ಪಾಲಿಸುವುದರಿಂದ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ.
ಆದಾಗ್ಯೂ, ಕರೀನಾ ಕಪೂರ್, ಸೈಫ್ ಅಲಿ ಖಾನ್, ಆಲಿಯಾ ಭಟ್, ವರುಣ್ ಧವನ್ ಮತ್ತು ಶಾಹಿದ್ ಕಪೂರ್ ಅವರಂತಹ ತಾರೆಯರೊಂದಿಗೆ ಕೆಲಸ ಮಾಡುವ ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಅವರು ಸ್ಥಿರವಾದ ತೂಕ ಕಾಯ್ದುಕೊಳ್ಳುವುದು ಹಾಗೂ ಉತ್ತಮ ಆರೋಗ್ಯವನ್ನು ಹೊಂದಲು 3 ಸುಲಭ ಮಾರ್ಗಸೂಚಿಯನ್ನು ಹಂಚಿಕೊಂಡಿದ್ದಾರೆ.

1. ನಿಮ್ಮ ಆಹಾರದಲ್ಲಿ ಸಜ್ಜೆ ರೊಟ್ಟಿ ಸೇರಿಸಿಕೊಳ್ಳಿ

ರುಜುತಾ ದಿವೇಕರ್ ಹೇಳುವಂತೆ ಅವರು ವಾರಕ್ಕೊಮ್ಮೆ ಸಜ್ಜೆ ರೊಟ್ಟಿಯನ್ನು ಊಟದಲ್ಲಿ ಸೇರಿಸಿಕೊಳ್ಳಲು ತಿಳಿಸಿದ್ದಾರೆ. ಹಾಗೆಯೇ ಸಜ್ಜೆಯಲ್ಲಿ ರೊಟ್ಟಿ, ಪಾಯಸ, ಲಾಡುಗಳನ್ನು ಮಾಡಿಕೊಂಡು ಸೇವಿಸಲು ತಿಳಿಸಿದ್ದಾರೆ. ವಾರಕ್ಕೊಮ್ಮೆ ಸಜ್ಜೆ ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಶಕ್ತಿ ಸುಧಾರಿಸುತ್ತದೆ. ಹಾಗೆಯೇ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.
ಪೌಷ್ಟಿಕತಜ್ಞರ ಪ್ರಕಾರ, ಈ ಸಜ್ಜೆ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ಸಜ್ಜೆ ಭಾರವಾಗಿದ್ದರೆ, ಹೆಚ್ಚುವರಿಯಾಗಿ ಸ್ವಲ್ಪ ತುಪ್ಪವನ್ನು ಸೇರಿಸಿ ಸೇವಿಸಿ. ಇದು ಹೊಟ್ಟೆಯನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಆಹಾರದಲ್ಲಿ ಬೆಳ್ಳುಳ್ಳಿ ಚಟ್ನಿ ಅಥವಾ ಅರಿಶಿನ ಅಚಾರ್‌ನಂತಹ ಆಹಾರಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಎಂದು ತಿಳಿಸಿದ್ದಾರೆ.

2. ದೇಹವನ್ನು ಹಿಗ್ಗಿಸಿ, ಒತ್ತಡ ಹೇರಬೇಡಿ

ರುಜುತಾ ದಿವೇಕರ್ ಅವರ ಎರಡನೇ ಮಾರ್ಗಸೂಚಿ ಎಂದರೆ, ತೀವ್ರವಾದ ವ್ಯಾಯಾಮಗಳ ಬಗ್ಗೆ ಅಲ್ಲ. ಬದಲಿಗೆ ಚಲನೆಯ ಬಗ್ಗೆ ತಿಳಿಸಿದ್ದಾರೆ. ಗಾಯಗಳನ್ನು ತಡೆಗಟ್ಟಲು ಮತ್ತು ಉತ್ತಮ ಭಂಗಿಯನ್ನು ಮಾಡುವುದರಿಂದ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಕಾಲಿನಿಂದ ತಲೆಯ ಬುರಡೆಯ ವರೆಗೆ ನಿಯಮಿತವಾಗಿ ಹಿಗ್ಗಿಸುವುದರಿಂದ ಸ್ನಾಯುಗಳನ್ನು ಬಲಪಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

3. ಮನೆಯಲ್ಲಿ ಸ್ಕ್ರೀನ್​ಗಳ ಬಳಕೆ ಕಡಿಮೆ ಮಾಡುವುದು

ಪೌಷ್ಟಿಕತಜ್ಞರ ಪ್ರಕಾರ, ಸ್ಕ್ರೀನ್​ ಸಮಯವನ್ನು ನಿರ್ವಹಿಸುವುದರ ಮೇಲೆ ನಿಮ್ಮ ಆರೋಗ್ಯ ಕೇಂದ್ರೀಕರಿಸುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ ಮನೆಯಲ್ಲಿ ಹೆಚ್ಚು ಹೊತ್ತು ಮೊಬೈಲ್​ ಸ್ಕ್ರಾಲ್​ ಮಾಡುವುದು, ಊಟದ ಟೇಬಲ್, ಹಾಸಿಗೆ ಅಥವಾ ಸ್ನಾನಗೃಹದ ಮೇಲೆ ಫೋನ್‌ಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂದು ತಿಳಿಸಿದ್ದಾರೆ. ಅತಿಯಾದ ಫೋನ್​ಗಳ ಬಳಕೆಯು ಬುದ್ಧಿಹೀನತೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ನಿದ್ರೆ ಮತ್ತು ಗಮನವನ್ನು ಸುಧಾರಿಸುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net