ಮತ್ತಿನ ಅಮಲು ಕಡಿಮೆ ಮಾಡಲು ಸಹಾಯ ಮಾಡುವ ಸರಳ ಪಾನೀಯಗಳು! Alcohol hangover

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Alcohol hangover: ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಅನೇಕರು ಪಾರ್ಟಿ ಮಾಡುವುದಂತೂ ಸತ್ಯ. ಈ ವೇಳೆ ಮದ್ಯಪಾನ ಮಾಡುವುದು ಹೇಗೆ ಮಾಡುತ್ತಾರೋ, ಅದೇ ರೀತಿ ಆ ಹ್ಯಾಂಗ್​ ಓವರ್​ನಿಂದ ಹೊರ ಬರಲು ಅಷ್ಟೇ ಪ್ರಯತ್ನಿಸುತ್ತಾರೆ. ಹಾಗಾಗಿ ನೀವೇನಾದರೂ ಹ್ಯಾಂಗ್ ಓವರ್​ನಿಂದ ಹೊರ ಬರಲು ಪ್ರಯತ್ನಿಸುತ್ತಿದ್ದರೆ, ನಿಮಗೆ ಈ ಪಾನೀಯಗಳು ಸಹಾಯ ಮಾಡಬಹುದು.

ಹ್ಯಾಂಗೊವರ್ ಅನ್ನು ತೊಡೆದುಹಾಕುವುದು ಹೇಗೆ?

ಮದ್ಯಪಾನವು ದೇಹಕ್ಕೆ ತುಂಬಾ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿರುವಂತಹ ಮಾಹಿತಿ. ಇದಲ್ಲದೇ ಇದು ಯಕೃತ್​ನ್ನು ಹಾನಿಗೊಳಿಸುತ್ತದೆ. ಹಾಗಾಗಿ ಆದಷ್ಟು ಮದ್ಯಪಾನದಿಂದ ದೂರ ಇರುವುದು ಉತ್ತಮ. ಆದಾಗ್ಯೂ, ಆದಷ್ಟು ಜನರು ಕ್ರಿಸ್​ಮಸ್​ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯಪಾನ ಮಾಡೇ ಮಾಡುತ್ತಾರೆ. ಈ ಸಂದರ್ಭದಲ್ಲಿ ಅದರ ಹ್ಯಾಂಗೊವರ್​ನಿಂದಾಗಿ ಹೊರ ಬರಲು ಈ ಪಾನೀಯಗಳನ್ನು ಕುಡಿಯಿರಿ.

ತೆಂಗಿನ ನೀರು ಅತ್ಯಗತ್ಯ

ಹ್ಯಾಂಗ್​ ಓವರ್​ ಹೆಚ್ಚಾದಾಗ ತೆಂಗಿನ ನೀರನ್ನು ಕುಡಿಯುವುದು ಉತ್ತಮವಾಗಿದೆ. ಈ ಪಾನೀಯವು ಆರೋಗ್ಯವಾಗಿಡಲು ಸಹಾಯ ಮಾಡುವುದರ ಜೊತೆಗೆ ಹ್ಯಾಂಗ್​ ಓವರ್​ನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುವುದರಿಂದ ಇದು ದೇಹದಲ್ಲಿ ಖನಿಜ ಸಮತೋಲನವು ಪುನಃಸ್ಥಾಪನೆಯಾಗುತ್ತದೆ.

ಪೇರಳೆ ಹಣ್ಣಿನ ರಸ ಸೇವಿಸಿ

ಮತ್ತಿನ ಅಮಲಿನಲ್ಲಿದ್ದರೆ, ನೀವು ಪೇರಳೆ ರಸವನ್ನು ಕುಡಿಯಿರಿ. ಇದು ದೇಹಕ್ಕೆ ಪ್ರಯೋಜನ ನೀಡುವುದರ ಜೊತೆಗೆ ಹ್ಯಾಂಗ್​ ಓವರ್​ನಿಂದ ಹೊರ ಬರಲು ಸಹಾಯ ಮಾಡುತ್ತದೆ. ಹಾಗಾಗಿ ಅತಿಯಾಗಿ ಮದ್ಯಪಾನ ಮಾಡಿದ ನಂತರ ಸೇವಿಸುವುದು ಉತ್ತಮವಾಗಿದೆ.

ಹೆಚ್ಚು ನೀರನ್ನು ಕುಡಿಯಿರಿ

ಪೌಷ್ಟಿಕ ತಜ್ಞೆ ಸೂಚಿಸುವಂತೆ ಮದ್ಯಪಾನ ಮಾಡುವುದರಿಂದ ದೇಹದಲ್ಲಿ ನಿರ್ಜಲೀಕರಣದ ಅಪಾಯ ಹೆಚ್ಚಾಗುತ್ತದೆ. ಇದರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಹಾಗಾಗಿ ಈ ಸಮಸ್ಯೆಯನ್ನು ಪರಿಹರಿಸಲು ಅತಿಯಾಗಿ ನೀರು ಕುಡಿಯುವುದನ್ನು ಮಾಡಿರಿ. ಹ್ಯಾಂಗ್​ ಓವರ್​ನಲ್ಲಿದ್ದಾಗ ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ದೇಹ ಮತ್ತೆ ಸಹಜ ಸ್ಥಿತಿಗೆ ಮರಳುತ್ತದೆ. ಜೊತೆಗೆ ಹ್ಯಾಂಗ್​ ಓವರ್​ನಿಂದ ದೂರಾಗುತ್ತದೆ.

ನಿಂಬೆ ಪಾನಕ ಕುಡಿಯಬೇಡಿ

ಅನೇಕ ಜನರು ಹ್ಯಾಂಗ್​ ಓವರ್​ನಿಂದ ಹೊರಬರಲು ನಿಂಬೆ ನೀರನ್ನು ಕುಡಿಯುತ್ತಾರೆ. ಇದು ತಪ್ಪಾದ ಹಂತ. ಏಕೆಂದರೆ, ನಿಂಬೆಯಲ್ಲಿ ಸಿಟ್ರಿಕ ಆಮ್ಲವಿರುತ್ತದೆ. ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಸಮಸ್ಯೆಗಳಾಗುವುದು ಹೆಚ್ಚಾಗುತ್ತದೆ. ಇದರಿಂದ ವಾಂತಿ ಬರುವುದು, ಹೊಟ್ಟೆ ನೋವಿನ ಅನುಭವವನ್ನು ಹೆಚ್ಚಾಗುತ್ತದೆ. ಹಾಗಾಗಿ ಹ್ಯಾಂಗ್​ ಓವರ್​ ಹೆಚ್ಚಾದಾಗ ನಿಂಬೆ ರಸದ ಬದಲಿಗೆ ಮೇಲಿನ ಪಾನೀಯಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net