ತೂಕದ ಜೊತೆ ಕೂದಲಿನ ಅಂದವೂ ಮುಖ್ಯ! ವೇಟ್ ಲಾಸ್ ಜರ್ನಿಗೆ ಇಲ್ಲಿದೆ ಪಕ್ಕಾ ಪ್ಲಾನ್.. Weight Loss
ಸಾಂದರ್ಭಿಕ ಚಿತ್ರ
Published on:
Copied
Follow Us
Weight Loss: ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡಬಹುದು. ಈ ವೇಳೆ ತೀವ್ರ ತೂಕ ನಷ್ಟವು ಕೂದಲು ಮತ್ತು ಚರ್ಮದ ಸಮಸ್ಯೆಗಳನ್ನು ಉಂಟು ಮಾಡುತ್ತಿವೆ ಎಂದು ನೀವೇ ನಾದರೂ ಒಪ್ಪುತ್ತೀರಾ? ಪೋಷಕಾಂಶಗಳ ಕೊರತೆ ಮತ್ತು ದೇಹದ ಮೇಲಿನ ಹೆಚ್ಚಿನ ದೈಹಿಕ ಒತ್ತಡದಿಂದ ಹಾಮೋನುಗಳಲ್ಲಿ ಬದಲಾವಣೆ ಕಂಡುಬರುವುದರಿಂದ ಕೂದಲು ಮತ್ತು ಚರ್ಮವು ಹಾನಿಯಾಗುತ್ತದೆ ಎಂದು ಆರೋಗ್ಯ ತಜ್ಞ ಗುರ್ವೀನ್ ವಾರಿಚ್ ಹೇಳುತ್ತಾರೆ.
ತೂಕ ಇಳಿಸಿಕೊಳ್ಳುವಾಗ ಚರ್ಮ ಮತ್ತು ಕೂದಲನ್ನು ಕಾಪಾಡಿಕೊಳ್ಳಲು ಇಲ್ಲಿವೆ ಸಲಹೆಗಳು
ಕೂದಲು ಮತ್ತು ಇತರ ಪೌಷ್ಟಿಕ ಪೂರಕಗಳು
ದೇಹಕ್ಕೆ ಯಾವುದೇ ರೀತಿಯ ಆಘಾತವಾದರೂ ಮೊದಲು ಏನಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಪ್ರಕ್ರಿಯೆಗಳು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಮೊದಲ ದಿನದಿಂದಲೇ ಕೂದಲಿನ ಪೂರಕವನ್ನು ಪ್ರಾರಂಭಿಸಿ ಎಂದು ವೈದ್ಯರು ಹೇಳುತ್ತಾರೆ.
ಈ ರೀತಿಯ ಸಮಸ್ಯೆಗಳು ಕಂಡುಬಂದರೆ ನಿಮ್ಮ ದೇಹದಲ್ಲಿ ವಿಟಮಿನ್ ಡಿ, ಬಿ 12, ಕ್ಯಾಲ್ಸಿಯಂ ಮತ್ತು ಫೆರಿಟಿನ್ ಮಟ್ಟವನ್ನು ಪರೀಕ್ಷಿಸಿಕೊಳ್ಳುವಂತೆ ಮತ್ತು ಕೊರತೆಯಿದ್ದರೆ ಪೂರಕವನ್ನು ತೆಗೆದುಕೊಳ್ಳುವಂತೆ ಅವರು ಶಿಫಾರಸು ಮಾಡುತ್ತಾರೆ.
ಪ್ರೋಟೀನ್ ಸೇವನೆ
ನೀವು ಆಹಾರ ಸೇವಿಸುವಾಗ ಸಾಕಷ್ಟು ಪ್ರೋಟೀನ್ ಇದೆ ಎಂದು ಖಚಿತಪಡಿಸಿಕೊಳ್ಳಿ. ಇವುಗಳ ಸೇವನೆಯು ನಿಮ್ಮ ಸ್ನಾಯುಗಳನ್ನು ನಷ್ಟವಾಗುವುದಿಲ್ಲ. ಜೊತೆಗೆ ಚರ್ಮವನ್ನು ಸೂಕ್ಷ್ಮತೆಯಿಂದ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಅವರ ಪ್ರಕಾರ, ಕನಿಷ್ಠ ಗುರಿ ದಿನಕ್ಕೆ ಪ್ರತಿ ಕೆಜಿ ದೇಹದ ತೂಕಕ್ಕೆ ಒಂದು ಗ್ರಾಂ ಆಗಿರಬೇಕು.
ಸ್ಟ್ರೆಚ್ ಮಾರ್ಕ್ಸ್ ಇರುವ ಪ್ರದೇಶಗಳನ್ನು ತೇವಗೊಳಿಸಿ
ತೂಕ ಇಳಿಸುವ ಪ್ರಯಾಣದಲ್ಲಿ ಜನರು ಮೊದಲು ಎದುರಿಸುವುದು ಸ್ಟ್ರೆಚ್ ಮಾರ್ಕ್ಸ್ . ಆದರಿಂದ ಪರಿಸ್ಥಿತಿಯನ್ನು ತಡೆಗಟ್ಟಲು ಪ್ರತಿದಿನ ಮಾಯಿಶ್ಚರೈಸರ್‌ಗೆ ಕೆಲವು ಹನಿ ಎಣ್ಣೆಯನ್ನು ಬೆರೆಸಿ ಸ್ಟ್ರೆಚ್ ಮಾರ್ಕ್ಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಇವುಗಳನ್ನು ತಡೆಯಬಹುದಾಗಿದೆ.
ಅತಿ ವೇಗದ ತೂಕ ನಷ್ಟವನ್ನು ತಪ್ಪಿಸಿ
ತ್ವರಿತ ತೂಕ ನಷ್ಟವು ಹಾರ್ಮೋನುಗಳ ಅಸಮತೋಲನ ಮತ್ತು ಕಾಲಜನ್ ಸ್ಥಗಿತಕ್ಕೆ ಸಮಾನವಾಗಿರುತ್ತದೆ. ಹಾಗಾಗಿ ವೇಗವಾಗಿ ತೂಕವನ್ನು ಇಳಿಸಿದರೆ, ಇದರಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಹಾಗಾಗಿ ತಜ್ಞರ ಪ್ರಕಾರ, ವಾರಕ್ಕೆ 0.5 ಕೆಜಿ ತೂಕ ನಷ್ಟ ಮಾಡಿದರೆ ದೇಹಕ್ಕಾಗುವ ಆಘಾತವನ್ನು ತಡೆಯುತ್ತದೆ.
ಸಾಮರ್ಥ್ಯ ತರಬೇತಿ
ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಶಕ್ತಿ ತರಬೇತಿ ಕೈಗೊಳ್ಳುವುದರಿಂದ ಲೀನ್ ಮಾಸ್, ಕಾಲಜನ್ ಬೆಂಬಲ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಕಾಪಾಡುತ್ತದೆ. ಜೊತೆಗೆ ಕೊಬ್ಬು ನಷ್ಟದ ಸಮಯದಲ್ಲಿ ಚರ್ಮದ ದೃಢತೆಯನ್ನು ಹೆಚ್ಚಿಸುತ್ತದೆ.
ಈ ಐದು ತತ್ವಗಳು ವ್ಯಕ್ತಿಗಳು ತಮ್ಮ ತೂಕ ಇಳಿಸುವ ಪ್ರಯಾಣದ ಸಮಯದಲ್ಲಿಯೂ ಸಹ ತಮ್ಮ ಕೂದಲು ಮತ್ತು ಚರ್ಮದ ಸರಿಯಾದ ಆರೈಕೆಯನ್ನು ಮಾಡಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.