ಯಕೃತ್ತಿನ ಹಾನಿ : ಈ ಚಿಹ್ನೆಗಳು ಕಣ್ಣುಗಳಲ್ಲಿ ಕಾಣಿಸಿದ್ರೆ ಜಾಗರೂಕರಾಗಿ! Liver failure

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Liver failure: ಮಾನವನ ದೇಹದ ರಚನೆಯಲ್ಲಿ ಎಲ್ಲಾ ಅಂಗಾಂಗಗಳು ಮುಖ್ಯವಾಗಿರುತ್ತದೆ. ಹಾಗೆಯೇ ಅದರಲ್ಲಿ ಯಕೃತ್​ ಕೂಡಾ ಒಂದು. ಇದು ಆಹಾರವನ್ನು ಜೀರ್ಣಿಸಿಕೊಳ್ಳುವುದರಿಂದ ಹಿಡಿದು ರಕ್ತವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತದೆ. ಈ ಅಂಗವು ಸುಮಾರು 500 ಕ್ಕೂ ಹೆಚ್ಚು ಕೆಲಸವನ್ನು ಮಾಡುತ್ತದೆ. ಆದರೆ, ಯಕೃತ್​ ಏನಾದರೂ ಸರಿಯಾಗಿ ಕೆಲಸವನ್ನು ಮಾಡದಿದ್ದರೆ, ಕೆಲವೊಂದು ಸೂಚನೆಗಳನ್ನು ದೇಹವು ಮುಂಚಿತವಾಗಿಯೇ ನೀಡುತ್ತದೆ. ಇವುಗಳನ್ನು ಗುರುತಿಸುವುದು ಬಹಳ ಕಷ್ಟವಾಗಿರುತ್ತದೆ.

ಕಣ್ಣುಗಳ ಬಿಳಿ ಭಾಗ ಹಳದಿಯಾಗುವುದು

ಯಕೃತ್ತಿನ ಸಮಸ್ಯೆಗಳ ಸಾಮಾನ್ಯ ಲಕ್ಷಣವೆಂದರೆ ಕಣ್ಣುಗಳ ಬಿಳಿ ಭಾಗ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದನ್ನು ಕಾಮಾಲೆ ಎಂದು ಕರೆಯಲಾಗುತ್ತದೆ. ಇದು ರಕ್ತದಲ್ಲಿ ಬಿಲಿರುಬಿನ್ ಹೆಚ್ಚಾದಾಗ ಈ ಸಮಸ್ಯೆ ಉಂಟಾಗುತ್ತದೆ. ನಿಮ್ಮ ದೇಹದಲ್ಲಿ ಯಕೃತ್​ ಬಿಲಿರುಬಿನ್​ ಸರಿಯಾಗಿ ಸಂಸ್ಕರಿಸಲು ಸಾಧ್ಯವಾಗುತ್ತಿದ್ದರೆ, ಅದು ಕಣ್ಣುಗಳ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. 

 ಕಣ್ಣುಗಳಲ್ಲಿ ತುರಿಕೆ ಮತ್ತು ಶುಷ್ಕತೆ

ಯಕೃತ್​ಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ಕಣ್ಣುಗಳಲ್ಲಿ ತುರಿಕೆ, ಶುಷ್ಕತೆ ಅಥವಾ ಕಿರಿಕಿರಿ ಉಂಟಾಗಬಹುದು. ಇದು ಧೂಳು ಅಥವಾ ಅಲರ್ಜಿ ಸಮಸ್ಯೆಗಳಿಲ್ಲದೆ ಈ ರೀತಿ ಆಗುತ್ತಿದ್ದರೆ ಜಾಗರೂಕರಾಗಿರಿ. ಯಕೃತ್​ ದುರ್ಬಲವಾಗಿದ್ದರೆ, ಪಿತ್ತರಸವು ರಕ್ತದೊಂದಿಗೆ ಬೆರೆತು, ಕಣ್ಣುಗಳು ಮತ್ತು ಚರ್ಮದಲ್ಲಿ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಇದರಿಂದ ಕಣ್ಣು ಬೇಗನೆ ಮಂಜಾಗುತ್ತದೆ.

ಕಣ್ಣುಗಳ ಕೆಳಗೆ ಕಪ್ಪು ಕಲೆ ಹಾಗೂ ಊತ

ನೀವು ದೇಹಕ್ಕೆ ಬೇಕಾದಷ್ಟು ನಿದ್ರೆಯನ್ನು ಮಾಡಿದಾಗಲೂ ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು, ಭಾರ ಅಥವಾ ಊತ ಉಂಟಾಗಿದ್ದರೆ, ಇದು ಯಕೃತ್ತಿನ ಸಮಸ್ಯೆಗಳ ಸಂಕೇತವಾಗಿರಬಹುದು. ಯಕೃತ್​ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ದೇಹದಲ್ಲಿ ನೀರು ಸಂಗ್ರಹವಾಗುತ್ತದೆ. ಇದು ಕಣ್ಣುಗಳ ಕೆಳಗಿರುವ ಸೂಕ್ಷ್ಮ ಚರ್ಮದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ಈ ರೀತಿಯ ಸಮಸ್ಯೆಗಳು ಏನಾದರೂ ಕಂಡು ಬಂದರೆ, ತಕ್ಷಣವೇ ವೈದ್ಯರ ಬಳಿ ಹೋಗುವುದು ಉತ್ತಮ. ಇಲ್ಲದಿದ್ದರೆ, ಸಮಸ್ಯೆ ಇನ್ನಷ್ಟು ಹದಗೆಡುತ್ತದೆ.
ಕಣ್ಣುಗಳಲ್ಲಿ ಕಂಡುಬರುವ ಈ ಸಣ್ಣ-ಪುಟ್ಟ ಬದಲಾವಣೆಗಳು ದೊಡ್ಡ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತವೆ. ಆದ್ದರಿಂದ, ಈ ರೋಗಲಕ್ಷಣಗಳನ್ನು ಹಗುರವಾಗಿ ಪರಿಗಣಿಸದೆ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮವಾಗಿರುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net