ಚಳಿಗಾಲದಲ್ಲಿ ಮಗುವಿನ ಆರೋಗ್ಯ ಹದಗೆಡುತ್ತಿದೆಯೇ..? ಈ ಸಲಹೆ ಪಾಲಿಸಿ ಉತ್ತಮ ಫಲಿತಾಂಶ ಪಡೆಯಿರಿ Baby winter care
ಸಾಂದರ್ಭಿಕ ಚಿತ್ರ
Published on:
Copied
Follow Us
Baby winter care: ಚಳಿಗಾಲದಲ್ಲಿ ಶಿಶುಗಳ ಆರೈಕೆಯು ಪೋಷಕರಿಗೆ ಬಹಳ ಕಷ್ಟಕರವೆನಿಸಬಹುದು. ಈ ಸಮಯದಲ್ಲಿ ಬೀಸುವ ತಂಪಾದ ಗಾಳಿ, ಕಡಿಮೆ ಆರ್ದ್ರತೆ ಮತ್ತು ಆಗಾಗ್ಗೆ ತಾಪಮಾನ ಬದಲಾವಣೆಗಳು ಮಗುವಿಗೆ ತೊಂದರೆಯನ್ನು ನೀಡಬಹುದು. ಇದು ಮಗುವಿನ ನಿದ್ರೆ, ಚರ್ಮ ಮತ್ತು ಆಹಾರ ಪದ್ಧತಿಯ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು.
ನವಜಾತ ಶಿಶುಗಳು ಸೂಕ್ಷ್ಮ ಚರ್ಮ, ಅಪಕ್ವ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಹಾಗೆಯೇ ಇವರು ತಾಪಮಾನ ಬದಲಾವಣೆಗಳಿಗೆ ಹೆಚ್ಚು ಸಂವೇದನಾಶೀಲವಾಗಿರುತ್ತವೆ. ಹಾಗಾಗಿ ಪೋಷಕರು ಈ ಶಿಶುಗಳ ರಕ್ಷಣೆ ಕಡೆಗೆ ಗಮನ ಹರಿಸಬೇಕಾಗಿರುತ್ತದೆ.
ಶೀತ ವಾತಾವರಣದಲ್ಲಿ ನವಜಾತ ಶಿಶುಗಳನ್ನು ರಕ್ಷಿಸಲು ಸಲಹೆಗಳು
ನೋಯ್ಡಾದ ಮದರ್‌ಹುಡ್ ಆಸ್ಪತ್ರೆಯ ಮಕ್ಕಳ ತಜ್ಞ ಮತ್ತು ನವಜಾತ ಶಿಶುವೈದ್ಯ ಡಾ. ನಿಶಾಂತ್ ಬನ್ಸಾಲ್ ಅವರು ಕೆಲವೊಂದು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ನಿಮ್ಮ ಮಕ್ಕಳ ಪಾಲನೆಯನ್ನು ಅವರ ಸಲಹೆಗಳನ್ನು ಅಭ್ಯಾಸ ಮಾಡಿಕೊಳ್ಳಿ.
ಸುರಕ್ಷಿತ ನಿದ್ರೆ
ರಾತ್ರಿ ವೇಳೆಯಲ್ಲಿ ನಿಮ್ಮ ಮಗುವನ್ನು ಆದಷ್ಟು ಬೆಚ್ಚಗಿಡುವುದನ್ನು ಅಭ್ಯಾಸ ಮಾಡಿರಿ. ಆದರೆ, ಅತಿಯಾಗಿ ಬಿಸಿಯಾಗಿಸುವುದು SIDS (ಹಠಾತ್ ಶಿಶು ಮರಣ ಸಿಂಡ್ರೋಮ್) ಅಪಾಯ ಹೆಚ್ಚಿಸುತ್ತದೆ. ನೀವು ಬಳಸುವುದಕ್ಕಿಂತ ಹೆಚ್ಚಿನ ಬೆಡ್ಶೀಟ್ಗಳನ್ನು ನಿಮ್ಮ ಮಗುವಿಗೆ ನೀಡಿ. ಕೋಣೆಯ ಉಷ್ಣತೆಯು 22–24°C ಆಗಿರಬೇಕು. ಕೋಣೆಯ ಉಷ್ಣತೆಯು 22–24°C ಆಗಿರಬೇಕು. ನಿಮ್ಮ ಮಗುವಿನ ಮುಖವನ್ನು ಮುಚ್ಚಬೇಡಿ. ಆಟಿಕೆಗಳು ದಿಂಬುಗಳಿಲ್ಲದೇ ನಿಮ್ಮ ಮಗುವನ್ನು ಬೆನ್ನಿನ ಮೇಲೆ ಮಲಗಿಸಿ.
ಆಹಾರ ನೀಡುವುದು
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಚಳಿಗಾಲದ ಸೋಂಕುಗಳಿಂದ ರಕ್ಷಿಸುವ ಗುಣ ಹೊಂದಿರುವುದರಿಂದ ಆಹಾರ ನೀಡುವುದು ಅತ್ಯಗತ್ಯ. ನಿರ್ಜಲೀಕರಣವನ್ನು ತಡೆಗಟ್ಟಲು ಆಗಾಗ್ಗೆ ನಿಮ್ಮ ಮಗುವಿಗೆ ಆಹಾರವನ್ನು ನೀಡಿ. ನಿಮ್ಮ ಮಗು 6 ತಿಂಗಳು ಮೇಲ್ಪಟ್ಟಿದ್ದರೆ, ಬೇಳೆ ನೀರು, ಹಣ್ಣಿನ ಪ್ಯೂರಿ ಅಥವಾ ಬೆಚ್ಚಗಿನ ಸೂಪ್‌ಳನ್ನು ನೀಡಿ. ಹಾಗೆಯೇ ಹಾಲನ್ನು ಕೊಡಿ.
ಬೆಚ್ಚಗಿನ ಬಟ್ಟೆಗಳನ್ನು ಹಾಕುವುದು
ಚಳಿಗಾಲದಲ್ಲಿ, ನಿಮ್ಮ ಮಗುವಿಗೆ ಬೆಚ್ಚಗಿನ ಬಟ್ಟೆಗಳನ್ನು ತೊಡಿಸುವುದು, ಬಿಗಿಯಾದ ಅಥವಾ ತುಂಬಾ ಸಡಿಲವಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿರಿ. ಅದರ ಬದಲಿಗೆ ಜಾಕೆಟ್‌ಗಳು, ಸ್ವೆಟರ್‌ಗಳು, ಕೈಗವಸುಗಳು ಮತ್ತು ಕ್ಯಾಪ್‌ಗಳನ್ನು ಬಳಸಿರಿ ಶೀತವಾಗುವುದನ್ನು ತಡೆಯಿರಿ.
ಚರ್ಮದ ಆರೈಕೆ
ಚಳಿಗಾಲವು ಮಗುವಿನ ಚರ್ಮದ ಮೇಲೆ ಕಠಿಣವಾಗಿರುತ್ತದೆ. ಮಗುವಿಗೆ ಒಣ, ಚಕ್ಕೆಗಳುಳ್ಳ, ಸೂಕ್ಷ್ಮ ಚರ್ಮದಂತಹ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಮಗುವಿಗೆ ದೀರ್ಘ ಸ್ನಾನ ಮಾಡಿಸುವುದನ್ನು ತಪ್ಪಿಸಿ. ವೈದ್ಯರು ಹೇಳಿದ ಉತ್ಪನ್ನಗಳನ್ನು ಬಳಸಿರಿ. ಅನೇಕ ಶಿಶುಗಳು ಒಣ ಚರ್ಮ, ಎಸ್ಜಿಮಾ ಮತ್ತು ಡಯಾಪರ್ ರಾಶ್ ಅನ್ನು ಅನುಭವಿಸಬಹುದು. ಆದರಿಂದ ವೈದ್ಯರನ್ನು ಭೇಟಿ ಮಾಡಿ.
ಉಸಿರಾಟದ ಸಮಸ್ಯೆಗಳು
ಚಳಿಗಾಲದಲ್ಲಿ ಶೀತ ಮತ್ತು ಕೆಮ್ಮು ವೈರಸ್ಗಳನ್ನು ಉಂಟು ಮಾಡುತ್ತದೆ. ಹಾಗಾಗಿ ನೀರಿನ ಅಂಶ ಮತ್ತು ಕೋಣೆಯ ಸರಿಯಾದ ಆದ್ರತೆಯನ್ನು ಖಚಿತಪಡಿಸಿಕೊಳ್ಳಿ. ಬ್ರಾಂಕಿಯೋಲೈಟಿಸ್ ಶಿಶುಗಳಲ್ಲಿ ವೇಗವಾಗಿ ಉಸಿರಾಡುವುದು ಮತ್ತು ಕೆಮ್ಮನ್ನು ಉಂಟುಮಾಡುತ್ತದೆ. ಹಾಗಾಗಿ ವೈದ್ಯರಲ್ಲಿ ಪರೀಕ್ಷಿಸಿ. ಉಸಿರನ್ನು ಎಳೆದುಕೊಳ್ಳುವುದು, ವೇಗವಾಗಿ ಉಸಿರಾಡುವುದನ್ನು ನೋಡಿ ಸೂಕ್ತ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿ.
ಲಸಿಕೆ ಪರಿಶೀಲನಾಪಟ್ಟಿ ಪರಿಶೀಲಿಸಿ
ತಿಂಗಳಿನ ಮಟ್ಟದಲ್ಲಿ ನಿಮ್ಮ ಮಗುವಿಗೆ ಯಾವ ಲಸಿಕೆ ಇದೆ ಎಂದು ಖಚಿತಪಡಿಸಿಕೊಳ್ಳಿ. ಇದು 6 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ವೈದ್ಯರು ಸೂಚಿಸಿದಂತೆ ಪೊಲಿಯೋ ಲಸಿಕೆಯನ್ನು ಕೊಡಿಸಿ. ಇದು ನಿಮ್ಮ ಮಗುವಿನ ರಕ್ಷಣೆಗೆ ಬಹಳ ಅಗತ್ಯವಾಗಿದೆ.
ಸುರಕ್ಷಿತ ತಾಪನ ಪದ್ಧತಿಗಳು
ಯಾವುದೇ ಕಾರಣಕ್ಕೂ ಮಗುವಿನ ತೊಟ್ಟಿಲಿನ ಹತ್ತಿರ ಹೀಟರ್ಗಳನ್ನು ಇಡುವುದನ್ನ ತಪ್ಪಿಸಿರಿ. ಇದು ಮಗುವಿನ ಚರ್ಮ ಮತ್ತು ಮೂಗಿನ ಮಾರ್ಗಗಳನ್ನು ಒಣಗಿಸುತ್ತವೆ. ಆಯಿಲ್ ಹೀಟರ್‌ಗಳು ಅಥವಾ ರೇಡಿಯಂಟ್ ಹೀಟರ್‌ಗಳು ಮಕ್ಕಳಿಗೆ ಸುರಕ್ಷಿತ ಆಯ್ಕೆಗಳಾಗಿವೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.