ಇಂದಿನ ದಿನಗಳಲ್ಲಿ ಆದಷ್ಟು ಜನರು ತರಕಾರಿಗಳನ್ನು ತಿನ್ನುವತ್ತ ಮುಖ ಮಾಡಿದ್ದಾರೆ
ಅನೇಕರು ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ವಿಭಿನ್ನ ಕಾರಣಕ್ಕೆ ತಿನ್ನುತ್ತಾರೆ
ಕೆಲವೊಂದು ಆಹಾರಗಳು ತಾಮಸಿಕ ಎಂದು ತಿಳಿದು ಅವುಗಳನ್ನು ತಪ್ಪಿಸುತ್ತಾರೆ
ಸಾಂಪ್ರದಾಯಿಕವಾಗಿ ಹೇಳುವುದಾದರೆ, ಈ ಆಹಾರಗಳು ರುಚಿ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ
Health benefits: ಇಂದಿನ ದಿನಗಳಲ್ಲಿ ಆದಷ್ಟು ಜನರು ತರಕಾರಿಗಳನ್ನು ತಿನ್ನುವತ್ತ ಮುಖ ಮಾಡಿದ್ದಾರೆ. ಇನ್ನು ಅನೇಕರು ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ವಿಭಿನ್ನ ಕಾರಣಕ್ಕೆ ತಿನ್ನುತ್ತಾರೆ. ಹಾಗೇ ಕೆಲವೊಂದು ಆಹಾರಗಳು ತಾಮಸಿಕ ಎಂದು ತಿಳಿದು ಅವುಗಳನ್ನು ತಪ್ಪಿಸುತ್ತಾರೆ. ಇನ್ನೂ ಕೆಲವರು ಬಾಯಲ್ಲಿ ದುರ್ವಾಸನೆ ಬರುತ್ತದೆ ಎಂದು ಸೇವಿಸುವುದನ್ನು ನಿಲ್ಲಿಸುತ್ತಾರೆ.
ಈ ಆಹಾರಗಳು ಸಾಂಪ್ರದಾಯಿಕವಾಗಿ ರುಚಿ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ. ಏಮ್ಸ್ ಮತ್ತು ಹಾರ್ವರ್ಡ್‌ನಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬಗ್ಗೆ ಮಾತನಾಡಿದ್ದಾರೆ.
ಈ ಆಹಾರಗಳನ್ನು ಸರಿಯಾಗಿ ಬಳಸಿದಾಗ ಜೀರ್ಣಾಂಗ ವ್ಯವಸ್ಥೆ, ರೋಗನಿರೋಧಕ ಶಕ್ತಿ ಮತ್ತು ದೀರ್ಘಾಯುಷ್ಯಕ್ಕೆ ವರದಾನವಾಗಬಹುದು. ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸೇವನೆಯು ದೇಹದಿಂದ ಹಾನಿಕಾರಕ ವಸ್ತುಗಳನ್ನು ಹೊರಹಾಕಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಂಯುಕ್ತಗಳನ್ನು ಹೊಂದಿರುತ್ತದೆ ಎಂದು ಡಾ. ಸೌರಭ್ ಸೇಥಿ ವಿವರಿಸಿದ್ದಾರೆ.
ಈ ಸಂಯುಕ್ತಗಳು ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ದೇಹದಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಿ, ಬ್ಯಾಕ್ಟೀರಿಯಾ, ವೈರಲ್ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತವೆ. ಇವೆರಡು ಪದಾರ್ಥಗಳ ಸೇವನೆಯು ಕೆಲವು ರೀತಿಯ ಕ್ಯಾನ್ಸ್ರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಕರುಳಿನ ಆರೋಗ್ಯಕ್ಕೆ ಉತ್ತೇಜನ ನೀಡುತ್ತದೆ
ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆಯು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು ಎಂದು ತಿಳಿದುಬಂದಿದೆ. ಇದು ನಿಮ್ಮ ಕರುಳಿನಲ್ಲಿ ಪ್ರೋಬಯಾಟಿಕ್‌ಗಳು ಎಂದು ಕರೆಯಲ್ಪಡುವ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೆಯೇ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನಲು ಸರಿಯಾದ ಮಾರ್ಗ ಯಾವುದು?
ಈರುಳ್ಳಿ ಮತ್ತು ಬೆಳ್ಳುಳ್ಳಿಯ ಪ್ರಯೋಜನಗಳು ಅವುಗಳ ಸಕ್ರಿಯ ಸಂಯುಕ್ತಗಳನ್ನು ಅವಲಂಬಿಸಿರುತ್ತದೆ. ಹಾಗಾಗಿ ಇವುಗಳ ಎಸಳನ್ನು ಕತ್ತರಿಸಿದ ನಂತರ ಬೇಯಿಸುವ ಮೊದಲು ಕನಿಷ್ಟ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಬೆಳ್ಳುಳ್ಳಿಯಲ್ಲಿರುವ ಅಲೈನೇಸ್ ಕಿಣ್ವವನ್ನು ಸಕ್ರಿಯಗೊಳಿಸಿ ಅಲಿಸಿನ್ನ್ನು ಉತ್ಪಾದಿಸುತ್ತದೆ. ಇದು ಕೋಶ ವಿರೋಧಿ, ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಪರಿಣಾಮಗಳನ್ನು ಒದಗಿಸುವ ಸಂಯುಕ್ತವಾಗಿದೆ. ಇದನ್ನು ತಕ್ಷಣಕ್ಕೆ ಬಿಸಿ ಎಣ್ಣೆಗೆ ಹಾಕುವುದರಿಂದ ಈ ಅಂಶಗಳು ಕಡಿಮೆಯಾಗಬಹುದು.
ನೀವು ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನಬೇಕೋ ಬೇಡವೋ?
ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಅವುಗಳ ಸೇವನೆಯಲ್ಲಿ ಮಿತವನ್ನು ಕಾಯ್ದುಕೊಳ್ಳಬೇಕು. ಗ್ಯಾಸ್, ಅಲರ್ಜಿ, ಆಮ್ಲೀಯತೆ ಅಥವಾ ಇತರ ಹೊಟ್ಟೆ ಸಮಸ್ಯೆಗಳು ಏನಾದರೂ ಇದ್ದರೆ, ಮೊದಲಿಗೆ ಪೌಷ್ಟಿಕತಜ್ಞರನ್ನು ಸಂಪರ್ಕಿಸಿ ನಂತರ ಸೇವಿಸಬೇಕು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.