ಈ ಸಂದರ್ಭದಲ್ಲಿ ಒಂದು ಅಥವಾ ಎರಡು ಉಗುರುಗಳಲ್ಲಿ ಈ ಚಿಹ್ನೆ ಕಾಣಿಸಿಕೊಳ್ಳದೇ, ಎಲ್ಲಾ ಉಗುರುಗಳಲ್ಲಿಯೂ ಇದು ಸಂಪೂರ್ಣವಾಗಿ ಕಾಣಿಸಲು ಪ್ರಾರಂಭವಾಗುತ್ತದೆ. ನಿಮ್ಮ ಉಗುರುಗಳ ಮೇಲೆ ಅಂತಹ ಬಿಳಿ ಚುಕ್ಕೆಗಳು ಕಾಣಿಸಿಕೊಂಡರೆ, ಶನಿ ದೇವರನ್ನು ದೂಷಿಸಬೇಡಿ. ಬದಲಾಗಿ, ನಿಮ್ಮ ಆಹಾರದಲ್ಲಿ ಪಾಲಕ್, ಬಾದಾಮಿ, ದ್ವಿದಳ ಧಾನ್ಯಗಳು, ಮೊಟ್ಟೆ, ಮೀನುಗಳನ್ನು ಸೇವಿಸಲು ಆರಂಭಿಸಿ.