ಉಳಿದ ಅಥವಾ ಹಳಸಿದ ಅನ್ನ ತಿನ್ನುವುದು ಸರಿಯೋ ತಪ್ಪೋ? ತಜ್ಞರು ಹೇಳೋದೇನು..?

Stale Rice
Stale Rice
Published on
ಬೆಂಗಳೂರು: ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಅನ್ನವನ್ನು ಬಳಸುತ್ತೇವೆ. ಹೀಗಾಗಿ, ಮನೆ ಮಂದಿಗೆ ಸೇರಿದಂತೆ ಇತರರಿಗೂ ಉಣಬಡಿಸಲು ಅಧಿಕವಾಗಿ ಅನ್ನವನ್ನೇ ಬೇಯಿಸುತ್ತೇವೆ. ಆದಾಗ್ಯೂ, ಮುಂಜಾನೆ ಅಥವಾ ರಾತ್ರಿ ಒಂದಿಷ್ಟು ಅನ್ನ ಮಿಕ್ಕುತ್ತದೆ. ಅದು ಒಂದು ವೇಳೆ ಹಳಸಿದರೆ ಇಲ್ಲವೇ ತಣ್ಣಾಗಾದರೆ ತಿನ್ನಬೇಕೋ ಅಥವಾ ಬಿಸಾಡಬೇಕೋ ಎಂದು ತಿಳಿಯದು. ಹಳಿಸಿದ ಅನ್ನ ತಿನ್ನಬೇಕೋ? ಬೇಡ್ವಾ ಎಂಬ ಹಲವರ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳೋಣ..
ವಾಸ್ತವಾಗಿ, ಹಳಸಿದ ಅಥವಾ ತಣ್ಣಾಗದ ಅನ್ನಕ್ಕೆ ಹಲವರು ವಿಭಿನ್ನವಾಗಿ ವಿಶ್ಲೇಣೆ ಮಾಡುತ್ತಾರೆ. ಹೌದು, ಕೆಲವರು ಇದು ಹೊಟ್ಟೆ ಹುಬ್ಬರಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಇನ್ನು ಕೆಲವರು ಇದನ್ನು ತಣ್ಣಾದ ನಂತರ ತಿನ್ನುವುದು ಒಳ್ಳೆಯದು ಎಂದು ಹೇಳುತ್ತಾರೆ. ಉಳಿದ ಅನ್ನವು ನಿಜವಾಗಿಯೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ, ಆದರೆ ಅದನ್ನು ಸರಿಯಾಗಿ ಸಂಗ್ರಹಿಸುವುದು ಮತ್ತು ಮತ್ತೆ ಬಿಸಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳುವುದು ಮುಖ್ಯ. ಈ ಪ್ರಮುಖ ನಿಯಮಗಳನ್ನು ಪಾಲಿಸದಿದ್ದರೆ, ಉಳಿದ ಅನ್ನವನ್ನು ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ಮತ್ತು ಆಹಾರ ವಿಷದ ಅಪಾಯ ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಸಂಪೂರ್ಣ ಸುರಕ್ಷಿತವೇ ..?

ಹಳಸಿದ ಅಥವಾ ಉಳಿದ ಅನ್ನವನ್ನು ತಿನ್ನುವುದು ಸಂಪೂರ್ಣ ಸುರಕ್ಷಿತವೇ ಎಂಬ ಪ್ರಶ್ನೆಗೆ ತಜ್ಞರು ಸ್ಪಷ್ಟ ಉತ್ತರ ನೀಡಿದ್ದಾರೆ. ''ಸರಿಯಾದ ರೀತಿಯಲ್ಲಿ ಸಂಗ್ರಹಿಸಿದರೆ ಸುರಕ್ಷಿತ, ಇಲ್ಲದಿದ್ದರೆ ಅಪಾಯಕಾರಿ. ಅನ್ನದಲ್ಲಿ ಸಹಜವಾಗಿ 'ಬ್ಯಾಸಿಲಸ್ ಸೀರಿಯಸ್' (Bacillus cereus) ಎಂಬ ಬ್ಯಾಕ್ಟೀರಿಯಾ ಇರುತ್ತದೆ. ಬೇಯಿಸಿದ ನಂತರ ಅನ್ನವನ್ನು ಕೋಣೆಯ ಉಷ್ಣತೆಯಲ್ಲಿ (40°F-140°F ಅಂದರೆ 4°C-60°C ನಡುವೆ) ಹಲವು ಗಂಟೆಗಳ ಕಾಲ ಬಿಟ್ಟರೆ ಈ ಬ್ಯಾಕ್ಟೀರಿಯಾ ಬೆಳೆದು ವಿಷಕಾರಿ ಟಾಕ್ಸಿನ್ ಉತ್ಪಾದಿಸುತ್ತದೆ''. ಇದನ್ನು 'ಫ್ರೈಡ್ ರೈಸ್ ಸಿಂಡ್ರೋಮ್' ಎಂದು ಕರೆಯುತ್ತಾರೆ.
ಲಕ್ಷಣಗಳು: ವಾಂತಿ, ಭೇದಿ, ಹೊಟ್ಟೆ ನೋವು – ಸಾಮಾನ್ಯವಾಗಿ 24 ಗಂಟೆಗಳಲ್ಲಿ ಗುಣವಾಗುತ್ತದೆ, ಆದರೆ ದುರ್ಬಲರಿಗೆ ಇದು ಅಪಾಯಕಾರಿ.ಆಹಾರ ಸುರಕ್ಷತಾ ತಜ್ಞರ ಹೇಳುವ ಪ್ರಕಾರ, ಬೇಯಿಸಿದ ನಂತರ 1-2 ಗಂಟೆಗಳೊಳಗೆ ಅನ್ನವನ್ನು ತಣ್ಣಗಾಗಿಸಿ (ಶೀಟ್‌ನಲ್ಲಿ ಹರಡಿ ಅಥವಾ ಚಿಕ್ಕ ಪಾತ್ರೆಗಳಲ್ಲಿ) ಫ್ರಿಜ್‌ಗೆ ಹಾಕಿ.ಫ್ರಿಜ್‌ನಲ್ಲಿ 3-4 ದಿನಗಳವರೆಗೆ (ಕೆಲವರು 1 ದಿನ ಎನ್ನುತ್ತಾರೆ) ಸುರಕ್ಷಿತ. ಮರು ಬಿಸಿ ಮಾಡುವಾಗ 165°F (74°C) ವರೆಗೆ ಬಿಸಿ ಮಾಡಿ ತಿನ್ನಬಹುದು.
ಇದಲ್ಲದೆ, ತಣ್ಣಗಾದ ಅನ್ನದಲ್ಲಿ 'ರೆಸಿಸ್ಟಂಟ್ ಸ್ಟಾರ್ಚ್' ಹೆಚ್ಚಾಗಿ ರಕ್ತದ ಸಕ್ಕರೆ ನಿಯಂತ್ರಣಕ್ಕೆ, ಕರುಳಿನ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಶೋಧನೆಗಳೂ ಇವೆ. ಕೊನೆಯಲ್ಲಿ, ಉಳಿದ ಅನ್ನ ತಿನ್ನುವುದು ತಪ್ಪಲ್ಲ – ಆದರೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ತಜ್ಞರು ಸಲಹೆ ನನೀಡುತ್ತಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net