ಮಧ್ಯಂತರ ಉಪವಾಸ ಮಾಡುವುದು ಆರೋಗ್ಯಕ್ಕೆ ವರದಾನವೇ ಅಥವಾ ಶಾಪವೇ? ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ! Intermittent Fasting

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಂತರ ಉಪವಾಸವು ಕೆಲವು ಸಮಯದಿಂದ ಜನರಲ್ಲಿ ಒಂದು ಪ್ರವೃತ್ತಿಯಾಗಿ ಮಾರ್ಪಾಟ್ಟಿದೆ
  • ಅನೇಕ ಸೆಲಿಬ್ರಿಟಿಗಳು ಕೂಡಾ ಈ ಅಭ್ಯಾಸವನ್ನು ಅಳವಡಿಸಿಕೊಂಡಿದ್ದಾರೆ
  • ಮಧ್ಯಂತರ ಉಪವಾಸವು ಆರೋಗ್ಯಕ್ಕೆ ವರದಾನವೇ ಅಥವಾ ಶಾಪವೇ?
  • ಮಧ್ಯಂತರ ಉಪವಾಸವನ್ನು ಸ್ವಲ್ಪ ಸಮಯದವರೆಗೆ ಮಾತ್ರ ಮಾಡಬಹುದು
Intermittent Fasting: ಮಧ್ಯಂತರ ಉಪವಾಸವು ಕೆಲವು ಸಮಯದಿಂದ ಜನರಲ್ಲಿ ಒಂದು ಪ್ರವೃತ್ತಿಯಾಗಿ ಮಾರ್ಪಾಟ್ಟಿದೆ. ಇದು ಅನೇಕ ಸೆಲಿಬ್ರಿಟಿಗಳು ಕೂಡಾ ಈ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ, ಮಧ್ಯಂತರ ಉಪವಾಸವು ನಿಜವಾಗಿಯೂ ಪ್ರಯೋಜನಕಾರಿಯೇ ಎಂಬುದು ಹಲವಾರು ಜನರಿಗೆ ತಿಳಿದಿರುವುದಿಲ್ಲ. ಹಾಗಾಗಿ ಈ ವಿಷಯದ ಬಗ್ಗೆ ಡಾ. ಶಿವಕುಮಾರ್ ಸರಿನ್ ಏನು ಹೇಳುತ್ತಾರೆ ಎಂದು ನೋಡೋಣ ಬನ್ನಿ...

ಮಧ್ಯಂತರ ಉಪವಾಸ ಎಷ್ಟು ಪ್ರಯೋಜನಕಾರಿ?

ಮಧ್ಯಂತರ ಉಪವಾಸವನ್ನು ಸ್ವಲ್ಪ ಸಮಯದವರೆಗೆ ಮಾತ್ರ ಮಾಡಬಹುದು. ಅಂದರೆ, ಮೂರು ತಿಂಗಳು ಅಥವಾ ಆರು ತಿಂಗಳವರೆಗೆ ಮಾತ್ರ. ಜೀವಿತಾವಧಿ ಪೂರ್ತಿ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ವಿವರಿಸುತ್ತಾರೆ.

ಮಧ್ಯಂತರ ಉಪವಾಸ ಹೇಗೆ ಸಹಾಯ ಮಾಡುತ್ತದೆ?

ಮಧ್ಯಂತರ ಉಪವಾಸವು ತೂಕ ಇಳಿಸಿಕೊಳ್ಳಲು ಸಹಾಯ ಮಾಡುವುದರ ಜೊತೆಗೆ ನಿಮ್ಮ ಹಾರ್ಮೋನುಗಳ ಮೇಲೂ ಪರಿಣಾಮ ಬೀರುತ್ತದೆ. ಏಕೆಂದರೆ ದೇಹದಲ್ಲಿರುವ ಹೆಚ್ಚುವರಿ ಕೊಬ್ಬು ಶಕ್ತಿಯನ್ನು ಸಂಗ್ರಹಿಸುವ ಮಾರ್ಗವಾಗಿರುತ್ತದೆ. ನೀವು ಏನನ್ನೂ ತಿನ್ನದೆಯೇ, ದೇಹವು ಸಂಗ್ರಹವಾಗಿರುವ ಶಕ್ತಿಯನ್ನು ಬಳಸಲು ಪ್ರಾರಂಭಿಸುತ್ತದೆ. ಇದರಿಂದ ನಿಮ್ಮ ನರಮಂಡಲದಲ್ಲಿ ಚಟುವಟಿಕೆಗಳು ಬದಲಾಗುತ್ತವೆ. ಮತ್ತು ಹಾರ್ಮೋನುಗಳನ್ನು ಬದಲಾಯಿಸಲು ಪ್ರಾರಂಭಿಸುತ್ತದೆ.

ಮಧ್ಯಂತರ ಉಪವಾಸವು ಕೆಲವು ಅನುಕೂಲ ಹಾಗೂ ಅನಾನುಕೂಲಗಳನ್ನು ಹೊಂದಿದೆ!

* ಮಧ್ಯಂತರ ಉಪವಾಸ (Intermittent Fasting) ತೂಕ ನಷ್ಟ, ಇನ್ಸುಲಿನ್ ಸಂವೇದನೆ ಸುಧಾರಣೆ, ಹೃದಯ ಆರೋಗ್ಯ ಮತ್ತು ಕೋಶ ಶುದ್ಧೀಕರಣಕ್ಕೆ ಪ್ರಯೋಜನಕಾರಿಯಾಗಿದೆ
* ಈ ಅಭ್ಯಾಸವು ದೇಹವು ಶಕ್ತಿಗಾಗಿ ಸಂಗ್ರಹವಾದ ಕೊಬ್ಬನ್ನು ಬಳಸಲು ಪ್ರಾರಂಭಿಸುತ್ತದೆ. ಇದರಿಂದ ದೇಹದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ
* ಮಧ್ಯಂತರ ಉಪವಾಸವು ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ
* ಮಧ್ಯಂತರ ಉಪವಾಸವು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಮಧ್ಯಂತರ ಉಪವಾಸವು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
* ಮಧ್ಯಂತರ ಉಪವಾಸವು ದೇಹವು ತನ್ನ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೊಸ ಕೋಶಗಳನ್ನು ಸೃಷ್ಟಿಸುತ್ತದೆ
* ಮಧ್ಯಂತರ ಉಪವಾಸವು ಮೆದುಳಿನ ಕಾರ್ಯವನ್ನು ಸುಧಾರಿಸಿ, ಆಲ್ಝೈಮರ್ನಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ

ಇದರಿಂದ ಆಗುವ ಹಾನಿಗಳೇನು?

* ಮಧ್ಯಂತರ ಉಪವಾಸದ ಮೊದಲ ಕೆಲವು ದಿನಗಳು ದೇಹವು ಈ ಪ್ರಕ್ರಿಯೆಗೆ ಒಡ್ಡಿಕೊಳ್ಳಲಾಗದೆ, ತಲೆತಿರುಗುವುದು, ತಲೆನೋವು ಮತ್ತು ದೌರ್ಬಲ್ಯದ ಭಾವನೆಗಳನ್ನು ಉಂಟು ಮಾಡುತ್ತದೆ
* ಈ ಅಭ್ಯಾಸದಿಂದ ತಿನ್ನುವ ಸಮಯದಲ್ಲಿ ಹಠಾತ್ ಬದಲಾವಣೆ ಆಗುವುದರಿಂದ ಮಲಬದ್ಧತೆ, ಅನಿಲ ಅಥವಾ ಉಬ್ಬುವಿಕೆಯಂತಹ ಸಮಸ್ಯೆಗಳು ಉಂಟಾಗುತ್ತವೆ.
* ಉಪವಾಸದ ಅವಧಿ ಮುಗಿದ ನಂತರ ಕೆಲವರು ಅತಿಯಾಗಿ ತಿನ್ನಲು ಪ್ರಾರಂಭಿಸುವುದರಿಂದ, ಇದು ಅಸ್ವಸ್ಥತೆ ಅಪಾಯವನ್ನು ಹೆಚ್ಚಿಸುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net