ಪ್ರವೇಶ ಪರೀಕ್ಷೆಗಳಿಗೆ ಪೂರ್ವ ತಯಾರಿ ನಡೆಸುತ್ತಿರುವವರಿಗೆ ಸ್ಥಿರತೆ ಕಾಪಾಡಿಕೊಳ್ಳುವುದು ಕಷ್ಟ
ಪಠ್ಯಕ್ರಮಗಳು ಹೆಚ್ಚಾದಾಗ ವಿದ್ಯಾರ್ಥಿಗಳಿಗೆ ಒತ್ತಡ ಉಂಟಾಗೋದು ಸಹಜ
ನಿಮ್ಮ ಅಧ್ಯಯನ ಯೋಜನೆಗಳು ನೈಸರ್ಗಿಕ ವೇಗಕ್ಕೆ ಹೊಂದಿಕೊಳ್ಳಬೇಕು
ಸ್ಥಿರತೆ ಎಂದರೆ ಬಹಳ ಸಮಯ ಅಧ್ಯಯನ ಮಾಡುವುದು ಎಂದರ್ಥವಲ್ಲ
Study Smarter: ಪ್ರವೇಶ ಪರೀಕ್ಷೆಗಳಿಗೆ ಪೂರ್ವ ತಯಾರಿ ನಡೆಸುತ್ತಿರುವವರಿಗೆ ಸ್ಥಿರತೆ ಕಾಪಾಡಿಕೊಳ್ಳುವುದು ಕಷ್ಟಕರವೆನಿಸಬಹುದು. ವಿಶೇಷವಾಗಿ ಪಠ್ಯಕ್ರಮವು ದೊಡ್ಡದಾಗಿದ್ದಾಗ ಮತ್ತು ಒತ್ತಡವು ಪ್ರತಿದಿನ ಹೆಚ್ಚಾದಾಗ ಈ ರೀತಿಯ ಅನುಭವವಗಳು ಆಗುವುದು ಸಾಮಾನ್ಯ. ಅನೇಕ ವಿದ್ಯಾರ್ಥಿಗಳು ತಯಾರಿ ನಡೆಸಲು ಉತ್ಸಾಹದಿಂದ ಪ್ರಾರಂಭಿಸುತ್ತಾರೆ. ಆದರೆ, ಸಮಯ ಕಳೆದಂತೆ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಸೋತು ಹೋಗುತ್ತಾರೆ.
ನೀವೇನಾದರೂ, ವೈದ್ಯಕೀಯ, ಎಂಜಿನಿಯರಿಂಗ್ ಅಥವಾ JEE, CLAT ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರಿಯಾಗಿಸಿಕೊಂಡಿದ್ದು, ಓದಲು ಪ್ರಾರಂಭಿಸಿದರೆ, ಈ ರೀತಿಯ ಸ್ಮಾರ್ಟ್ ಯೋಜನೆಗಳನ್ನು ಅಳವಡಿಸಿಕೊಳ್ಳಿ. ಇವುಗಳ ಪ್ರಯತ್ನದಿಂದ ನಿಮ್ಮ ಗುರಿಯನ್ನು ಸಾಧಿಸಲು ಸಹಾಯವಾಗಬಹುದು.
ನಿಮ್ಮ ಅಧ್ಯಯನ ಯೋಜನೆಗಳು ನೈಸರ್ಗಿಕ ವೇಗಕ್ಕೆ ಹೊಂದಿಕೊಳ್ಳಬೇಕು. ಮೊದಲು ದೀರ್ಘವಾಗಿ ಅಭ್ಯಾಸ ಮಾಡಬೇಡಿ. ಬದಲಿಗೆ ನಿಧಾನವಾಗಿ ನಿಮ್ಮ ಸಮಯವನ್ನು ಹೆಚ್ಚಿಸಿಕೊಳ್ಳಿ. ಪ್ರತಿಯೊಂದು ವಿಷಯಕ್ಕೂ ಸಮಯವನ್ನು ನೀಡಿ. ಈ ರೀತಿ ಮಾಡುವುದರಿಂದ ನಿಮ್ಮ ಮನಸ್ಸು ಬೇರೆ ವಿಚಾರದ ಕಡೆಗೆ ಒಲವು ತೋರಿಸುವುದನ್ನು ತಪ್ಪಿಸುತ್ತದೆ.
2. ಪಠ್ಯಕ್ರಮವನ್ನು ಸಣ್ಣ ಕಾರ್ಯಗಳಾಗಿ ವಿಭಜಿಸಿ
ದೊಡ್ಡ ಅಧ್ಯಾಯಗಳು ನಿಮ್ಮನ್ನು ಹೆದುರಿಸುತ್ತಿದೆ ಎಂದು ಅನಿಸಬಹುದು. ಆದ್ದರಿಂದ ಅವುಗಳನ್ನು ಸಣ್ಣ ಭಾಗಗಳಾಗಿ ವಿಂಗಡಿಸಿಕೊಳ್ಳಿ. ಇದರಿಂದ ನೀವು ಬೇಗನೆ ಓದುವುದನ್ನು ಮುಗಿಸಬಹುದು. ಸಾಪ್ತಾಹಿಕ ಗುರಿಗಳನ್ನು ಹೊಂದಿಸುವುದು ನಿಮ್ಮ ಪ್ರಗತಿಯನ್ನು ಅಳೆಯುವಂತೆ ಮಾಡುತ್ತದೆ. ಇದು ಸುಲಭವಾಗಿ ನಿಮ್ಮನ್ನು ಒಳ್ಳೆಯ ದಿಕ್ಕಿಗೆ ಕರೆದುಕೊಂಡು ಹೋಗುತ್ತದೆ.
3. ಗುಣಮಟ್ಟದ ಮೇಲೆ ಕೇಂದ್ರೀಕರಿಸಿ
ಸ್ಥಿರತೆ ಎಂದರೆ ಬಹಳ ಸಮಯ ಅಧ್ಯಯನ ಮಾಡುವುದು ಎಂದರ್ಥವಲ್ಲ. ಬದಲಿಗೆ ಎಷ್ಟು ಸಮಯದಲ್ಲಿ ಯಾವ ವಿಚಾರವನ್ನು ತಿಳಿದುಕೊಂಡಿದ್ದೀರಿ. ಎಷ್ಟು ಅಭ್ಯಾಸ ಮಾಡಿದ್ದೀರಿ ಎಂಬುದು ಬರುತ್ತದೆ. ಹಾಗಾಗಿ ಸಣ್ಣ ಟಿಪ್ಪಣಿಗಳನ್ನು ಬರೆಯುವುದು ಮತ್ತು ಉದಾಹರಣೆಗಳನ್ನು ಪರಿಷ್ಕರಿಸುವುದು. ಕಲಿತುದನ್ನು ಮನನ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿ. ಇದು ಧಾರಣಶಕ್ತಿಯನ್ನು ಸುಧಾರಿಸುತ್ತದೆ.
4. ನಿಯಮಿತವಾಗಿ ಪರಿಷ್ಕರಿಸಿ
ದೀರ್ಘಾವಧಿಯ ಸ್ಮರಣೆಗೆ ಸಾಪ್ತಾಹಿಕ ಪರಿಷ್ಕರಣೆ ಅತ್ಯಗತ್ಯ. ಹಿಂದೆ ಅಧ್ಯಯನ ಮಾಡಿದ ವಿಷಯಗಳನ್ನು ಪುನಃ ಪರಿಶೀಲನೆ ನಡೆಸುವುದರಿಂದ ಇದು ಕೊನೆಯ ಕ್ಷಣದಲ್ಲಾಗುವ ಭಯವನ್ನು ತಡೆಯುತ್ತದೆ. ಓದಿದ ವಿಚಾರಗಳ ಮೇಲೆ ನಿಮ್ಮ ಗ್ರಹಿಕೆಯನ್ನು ಬಲಪಡಿಸುತ್ತದೆ. ಕೆಲವೊಂದು ವಿಷಯಗಳ ಬಗ್ಗೆ ಅಣುಕು ಪರೀಕ್ಷೆಗಳನ್ನು ತೆಗೆದುಕೊಳ್ಳುವುದರಿಂದ ಹೆಚ್ಚು ಗಮನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
5. ಗೊಂದಲಗಳನ್ನು ಮಿತಿಗೊಳಿಸಿ
ಓದುವ ಸಮಯದಲ್ಲಿ ಗೊಂದಲ ಉಂಟು ಮಾಡುವಂತಹ ವಿಚಾರಗಳ ಬಗ್ಗೆ ಗಮನ ಹರಿಸುವುದನ್ನು ಕಡಿಮೆ ಮಾಡಿ. ಹಾಗಾಗಿ ಅಧ್ಯಯನ ಮಾಡುವಂತಹ ಸಂದರ್ಭದಲ್ಲಿ ನಿಮ್ಮ ಮೊಬೈಲ್ಗಳನ್ನು ದೂರ ಇಡಿ. ಹಾಗೂ ನಿಮ್ಮ ಕೋಣೆಯನ್ನು ಶಾಂತವಾಗಿರಿಸಿ. ಇದು ನಿಮ್ಮ ಅಧ್ಯಯನದ ಕಡೆ ಗಮನ ಹರಿಸಲು ಸಹಾಯ ಮಾಡುತ್ತದೆ.
6. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಸರಿಯಾದ ನಿದ್ರೆ, ದೇಹಕ್ಕೆ ಬೇಕಾದಷ್ಟು ನೀರು ಕುಡಿಯುವುದು, ದೈಹಿಕ ಚಟುವಟಿಕೆಗಳನ್ನು ಮಾಡುವುದು ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಆರೋಗ್ಯ ದಿನಚರಿಯು ಅಭ್ಯಾಸದ ಮೇಲೆ ಉತ್ತಮ ಗಮನ ಕೊಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.