ಅಮ್ಮನಾಗುವ ಸಂಭ್ರಮಕ್ಕೆ ಮೊದಲ ಸಾಕ್ಷಿ: ಗರ್ಭಧಾರಣೆಯ ಕಿಟ್ ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ! Pregnancy test kits

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ತಾಯ್ತನ ಎಂಬುದು ಕೇವಲ ಒಂದು ಪದವಲ್ಲ, ಅದು ಈ ಜಗತ್ತಿನ ಅತ್ಯಂತ ಪವಿತ್ರವಾದ ಭಾವನೆ
  • ತಾಯಿಯ ಪ್ರೀತಿ, ತ್ಯಾಗ ಮತ್ತು ಮಮತೆಯನ್ನು ವರ್ಣಿಸಲು ಪದಗಳೇ ಸಾಲದು
  • ಹಿಂದೆ ಮಹಿಳೆಯರು ತಾವು ಗರ್ಭಿಣಿಯರಾಗಿದ್ದಾರೆಯೇ ಎಂಬುದನ್ನು ತಿಳಿಯಲು ವೈದ್ಯಕೀಯ ಚಿಕಿತ್ಸೆಗಳಿಗೆ ಒಳಗಾಗುತ್ತಿದ್ದರು
  • ತಂತ್ರಜ್ಞಾನ ಮುಂದುವರೆದಂತೆ ಈ ರೀತಿಯ ಟೆಸ್ಟ್​ಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು
Pregnancy test kits: ತಾಯ್ತನ ಎಂಬುದು ಕೇವಲ ಒಂದು ಪದವಲ್ಲ, ಅದು ಈ ಜಗತ್ತಿನ ಅತ್ಯಂತ ಪವಿತ್ರವಾದ ಭಾವನೆ. ತಾಯಿಯ ಪ್ರೀತಿ, ತ್ಯಾಗ ಮತ್ತು ಮಮತೆಯನ್ನು ವರ್ಣಿಸಲು ಪದಗಳೇ ಸಾಲದು ಎಂಬ ಮಾತಿದೆ. ಆದಾಗ್ಯೂ, ಈ ಹಿಂದೆ ಮಹಿಳೆಯರು ತಾವು ಗರ್ಭಿಣಿಯರಾಗಿದ್ದಾರೆಯೇ ಎಂಬುದನ್ನು ತಿಳಿಯಲು ವೈದ್ಯಕೀಯ ಚಿಕಿತ್ಸೆಗಳಿಗೆ ಒಳಗಾಗುತ್ತಿದ್ದರು. ಆದರೆ, ಇಂದು ತಂತ್ರಜ್ಞಾನ ಮುಂದುವರೆದಂತೆ ಈ ರೀತಿಯ ಟೆಸ್ಟ್​ಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಪರೀಕ್ಷಾ ಕಿಟ್​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಮಾರುಕಟ್ಟೆಯಲ್ಲಿ ಸಿಗುವ ಗರ್ಭಧಾರಣೆಯ ಪರೀಕ್ಷಾ ಕಿಟ್‌ಗಳು ಲಭ್ಯತೆಯ ವಿಷಯಗಳನ್ನು ತುಂಬಾ ಸುಲಭಗೊಳಿಸಿದೆ. ಈ ಮೊದಲು ಮುಟ್ಟಿನ ಕೊರತೆ, ಸ್ತನ ನೋವು ಅಥವಾ ಊತ, ದಿನವಿಡೀ ಆಲಸ್ಯ, ಆಯಾಸ ಇತ್ಯಾದಿಗಳ ಮೂಲಕ ಗರ್ಭಧಾರಣೆಯನ್ನು ಪತ್ತೆ ಹಚ್ಚಿಸಬಹುದಾಗಿತ್ತು. ಆದರೆ, ಈಗ ಗರ್ಭಧಾರಣೆಯ ಪರೀಕ್ಷಾ ಕಿಟ್​ಗಳು ವಿಷಯಗಳನ್ನು ತುಂಬಾ ಸುಲಭಗೊಳಿಸಿವೆ.
ಈ ಕಿಟ್​ಗಳ ಸಹಾಯದಿಂದ ಗರ್ಭಧಾರಣೆಯನ್ನು ಬಹುತೇಕ ಸಂಪೂರ್ಣ ನಿಖರತೆಯೊಂದಿಗೆ ಪತ್ತೆ ಹಚ್ಚಬಹುದಾಗಿದೆ. ಹಾಗಾದ್ರೆ, 50 ರೂ. ಬೆಲೆಯ ಈ ಗರ್ಭದಾರಣೆಯ ಪರೀಕ್ಷಾ ಕಿಟ್​ನಲ್ಲಿ ವಿಶೇಷ ಏನಿದೆ ಎಂದು ಯೋಚಿಸ್ತಾ ಇದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಉತ್ತಮ ಮಾಹಿತಿ.
ಗರ್ಭಧಾರಣೆಯ ಪರೀಕ್ಷಾ ಕಿಟ್‌ಗಳು ಹಾರ್ಮೋನ್ hCG ಅನ್ನು ಪತ್ತೆ ಮಾಡುತ್ತವೆ. ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹವು ಗರ್ಭಧಾರಣೆಯನ್ನು ಕಾಪಾಡಿಕೊಳ್ಳಲು hCG ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ಕಾಣುವ ಪಟ್ಟಿಗಳು hCG ಯೊಂದಿಗೆ ಪ್ರತಿಕ್ರಿಯಿಸುವ ರಾಸಾಯನಿಕಗಳನ್ನು ಹೊಂದಿರುತ್ತವೆ. ಇವು ಹಾರ್ಮೋನುಗಳೊಂದಿಗೆ ಪ್ರತಿಕ್ರಿಯಿಸುತ್ತವೆ. ಇದು ಮಹಿಳೆಯು ಗರ್ಭಧರಿಸಲು ಸಿದ್ಧವಾಗಿದ್ದರೆ, ರೇಖೆಗಳು ಬಣ್ಣವನ್ನು ಬದಲಾಯಿಸುತ್ತದೆ.
ಈ ಪಟ್ಟಿಯು hCG ಯನ್ನು ಗುರುತಿಸುವ ಪ್ರತಿಕಾಯಗಳಿಂದ ಲೇಪಿತವಾಗಿದೆ. ಇದರ ಒಂದು ಬದಿಯು ನಿಯಂತ್ರಣ ರೇಖೆ (C) ಆಗಿದ್ದು, ಇದು ಕಿಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸುತ್ತದೆ. ಇನ್ನೊಂದು ಬದಿಯು ಪರೀಕ್ಷಾ ರೇಖೆ (T) ಆಗಿದೆ. ಇದು ಗರ್ಭಧಾರಣೆಯ ಸಂದರ್ಭದಲ್ಲಿ ಬಣ್ಣದ ರೇಖೆಯನ್ನು ತೋರಿಸುತ್ತದೆ.
ಯಾವುದೇ ಮಹಿಳೆಯು ಈ ಕಿಟ್​ ಬಳಸಿ ಪರೀಕ್ಷೆ ಮಾಡಿದಾಗ ಮೂತ್ರವು ಪಟ್ಟಿಯ ಮೂಲಕ ಹಾದುಹೋದಾಗ, ಮೂತ್ರದಲ್ಲಿರುವ hCG ಪಟ್ಟಿಯಲ್ಲಿರುವ ಪ್ರತಿಕಾಯಗಳಿಗೆ ಬಂಧಿಸುತ್ತದೆ. ಈ ಸಮಯದಲ್ಲಿ ಬಣ್ಣದ ರೇಖೆಗಳನ್ನು ಸೃಷ್ಟಿಸುವ ರಾಸಾಯನಿಕ ಕ್ರಿಯೆಯನ್ನು ಉಂಟು ಮಾಡುತ್ತದೆ. ಸಾಕಷ್ಟು hCG ಇದ್ದರೆ, C ಮತ್ತು T ಎರಡರಲ್ಲೂ ಒಂದು ರೇಖೆ ಕಾಣಸಿಗುತ್ತದೆ. ಇದು ಇಲ್ಲದಿದ್ದರೆ, C ರೇಖೆ ಮಾತ್ರ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ತಿಳಿ ಬಣ್ಣದಲ್ಲಿ ರೇಖೆ ಕಾಣಿಸಿಕೊಳ್ಳಬಹುದು. ಈ ರೀತಿಯಾಗಿ ಕಂಡುಬಂದರೆ, ನೀವು ಗರ್ಭಧರಿಸಿದ್ದೀರಿ ಎಂದು ತಿಳಿದು ಬರುತ್ತದೆ.

ಗರ್ಭಧಾರಣೆಯ ಪರೀಕ್ಷೆಯ ಫಲಿತಾಂಶಗಳನ್ನು ಹೇಗೆ ಓದುವುದು?

ಗರ್ಭಧಾರಣೆ ಕಿಟ್​ಗೆ ಮೂತ್ರವನ್ನು ಹಾಕಿದಾಗ ಸಿ ಗೆರೆಯು ಗಾಢವಾಗಿದ್ದರೆ ಮತ್ತು ಟಿ ಲೈನ್​ನಲ್ಲಿ ಏನು ಇಲ್ಲದಿದ್ದರೆ, ಗರ್ಭಧಾರಣೆಯಾಗಿಲ್ಲ ಎಂದು ತಿಳಿದು ಬರುತ್ತದೆ. ಹಾಗೆಯೇ ಸಿ ಮತ್ತು ಟಿ ಲೈನ್‌ಗಳು ಎರಡೂ ಕಾಣಿಸಿಕೊಂಡಾಗ ಮಹಿಳೆ ಗರ್ಭಧರಿಸಿದ್ದಾಳೆ ಎಂದು ಪರಿಗಣಿಸಲಾಗುತ್ತದೆ. ಸಿ ಲೈನ್ ಕಾಣಿಸದಿದ್ದರೆ, ಕಿಟ್​ನ್ನು ಬದಲಾಯಿಸಿ ಮತ್ತೊಮ್ಮೆ ಪರೀಕ್ಷೆ ಮಾಡಿಕೊಳ್ಳಿ.

ಗರ್ಭಧಾರಣೆಯ ಪರೀಕ್ಷೆಯಲ್ಲಿ ಮಾಡಬೇಕಾದ ವಿಷಯಗಳು!

ಮೂತ್ರದಲ್ಲಿ ಸಾಕಷ್ಟು ಎಚ್‌ಸಿಜಿ ಇದೆಯೇ ಎಂದು ಖಚಿತಪಡಿಸಿಕೊಳ್ಳಲು, ನಿಮ್ಮ ಮುಟ್ಟು ನಿಂತ ಮೊದಲ ದಿನ ಅಥವಾ ಸಂಭೋಗದ ನಂತರ 21 ದಿನಗಳನ್ನು ಬಿಟ್ಟು ಪರೀಕ್ಷಿಸಿಕೊಳ್ಳಿ. ಪರೀಕ್ಷೆಯನ್ನು ಆದಷ್ಟು ಬೆಳಿಗ್ಗೆ ಸಮಯದಲ್ಲಿ ಮಾಡಿಕೊಳ್ಳಿ. ಏಕೆಂದರೆ, ಈ ಸಮಯದಲ್ಲಿ ಎಚ್‌ಸಿಜಿ ಹೆಚ್ಚು ಕೇಂದ್ರೀಕೃತವಾಗಿರುತ್ತದೆ.
ನೀವು ತುಂಬಾ ಬೇಗನೆ ಪರೀಕ್ಷೆ ಮಾಡಿದರೆ, ಕಡಿಮೆ ಗುಣಮಟ್ಟದ hCG ಯಿಂದಾಗಿ ಫಲಿತಾಂಶ ಕಂಡುಬರುವುದಿಲ್ಲ. ಹಾಗಾಗಿ ಕಿಟ್​ ಬಳಸುವ ಮುನ್ನ ಕಿಟ್​ನಲ್ಲಿರುವ ಸೂಚನೆಗಳನ್ನು ಒಮ್ಮೆ ಓದುವುದು ಮುಖ್ಯ. ನೀವು ಗೊಂದಲಕ್ಕೊಳಗಾಗಿದ್ದರೆ ಅಥವಾ ವಿಭಿನ್ನ ಫಲಿತಾಂಶಗಳನ್ನು ಹೊಂದಿದ್ದರೆ ಸ್ತ್ರೀರೋಗತಜ್ಞರನ್ನು ಸಂಪರ್ಕಿಸುವುದು ಮುಖ್ಯ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net