Gardening Tips : ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಅಡುಗೆ ಮನೆ ಹಾಗೂ ಬಾಲ್ಕನಿಗಳಲ್ಲಿ ತರಕಾರಿಗಳನ್ನು ಬೆಳೆಯಲು ಆರಂಭಿಸಿದ್ದಾರೆ. ಇದು ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಶುದ್ಧವಾದ ತರಕಾರಿಗಳನ್ನು ಪಡೆಯಲು ಸಹಾಯ ಮಾಡುತ್ತದೆ. ನಿಂಬೆ, ಮೆಣಸಿನಕಾಯಿ, ಟೊಮೆಟೊ, ಕರಿಬೇವು ಮತ್ತು ಬಿಳಿಬದನೆ ಸೇರಿದಂತೆ ಎಲ್ಲಾ ರೀತಿಯ ತರಕಾರಿಗಳನ್ನು ಅಡುಗೆಮನೆ ಅಥವಾ ಬಾಲ್ಕನಿಯಲ್ಲಿ ಬೆಳೆಸಬಹುದು ಎಂಬುದು ಹಲವಾರು ಜನರಿಗೆ ತಿಳಿದಿರುವುದಿಲ್ಲ. ನೀವೆನಾದರೂ ಅಡುಗೆ ಮನೆಯಲ್ಲಿ ಬದನೆಕಾಯಿ ಗಿಡವನ್ನು ನೆಡಬೇಕೆಂದರೆ, ನಿಮಗೆ ಸ್ವಲ್ಪ ಜಾಗ ಮತ್ತು ಸರಿಯಾದ ನಿಯಮಗಳು ಬೇಕಾಗುತ್ತದೆ. ಹಾಗಾಗಿ ಅದರ ಬಗ್ಗೆ ಮಾಹಿತಿಯನ್ನು ನಾವಿಂದು ನೀಡಲಿದ್ದೇವೆ.