ತೂಕ ಇಳಿಕೆಗೆ, ಪ್ರೋಟೀನ್​ಗಾಗಿ ತಿನ್ನುವ ಹಸಿ ಮೊಳಕೆ ಕಾಳಗಳನ್ನು ಈ ರೀತಿ ಸೇವಿಸಲೇಬೇಡಿ...Raw Sprouts

ತೂಕ ಇಳಿಕೆಗೆ, ಪ್ರೋಟೀನ್​ಗಾಗಿ ತಿನ್ನುವ ಹಸಿ ಮೊಳಕೆ ಕಾಳಗಳನ್ನು ಈ ರೀತಿ ಸೇವಿಸಲೇಬೇಡಿ...Raw Sprouts
ತೂಕ ಇಳಿಕೆಗೆ, ಪ್ರೋಟೀನ್​ಗಾಗಿ ತಿನ್ನುವ ಹಸಿ ಮೊಳಕೆ ಕಾಳಗಳನ್ನು ಈ ರೀತಿ ಸೇವಿಸಲೇಬೇಡಿ...Raw Sprouts
Published on

ಪ್ರಮುಖ ಮುಖ್ಯಾಂಶಗಳು

  • ನೆನೆಸಿದ ಮೊಳಕೆಕಾಳು ತಿನ್ನುವುದರಿಂದಾಗುವ ಲಾಭಗಳೇನು?
  • 100 ಗ್ರಾಂ ಮೊಳಕೆ ಕಾಳು ಸೇವನೆಯಿಂದ ಸಿಗುವ ಪ್ರೋಟೀನ್ 8 ಗ್ರಾಂ
  • ಪನ್ನೀರ್​, ಮೊಟ್ಟೆ, ದ್ವಿದಳ ಧಾನ್ಯಗಳು ಮೊಳಕೆ ಕಾಳಿನಷ್ಟೇ ಪ್ರೋಟೀನ್​ ಉಳ್ಳಂತದ್ದು
Raw Sprouts : ಕಡಲೆ ಕಾಳು, ಹೆಸರು ಕಾಳು, ಹಲಸಂದೆ ಕಾಳುಗಳನ್ನು ನೆನೆಸಿಟ್ಟು ಬಟ್ಟೆಯಲ್ಲಿ ಕಟ್ಟಿ ಮೊಳಕೆ ಒಡೆಯಲು ಇಡೋದು ವಾಡಿಕೆ.  ಆದರೆ, ಈಗ ಅವುಗಳು ತರಕಾರಿ ಅಂಗಡಿಯಲ್ಲಿ ಸಿಕ್ಕಿ ಬಿಡುತ್ತವೆ. ಇವು ಹೆಚ್ಚು ಪ್ರೋಟೀನ್​ವುಳ್ಳದ್ದು ಎನ್ನುವುದು ಗೊತ್ತಿರುವ ವಿಚಾರ. ಆದರೆ, ಇದು ದೇಹಕ್ಕೆ ಎಷ್ಟು ಸುರಕ್ಷಿತ ಅನ್ನೋದರ ಬಗ್ಗೆ ಗಮನವೂ ಹರಿಸಿರೋದಿಲ್ಲ.  ಈ ಸಣ್ಣಪುಟ್ಟ ಕಾಳುಗಳನನ್ನು ನಿಯಮಿತವಾಗಿ ತಿನ್ನೋದರಿಂದ ಶರೀರಕ್ಕಾಗುವ ಲಾಭ ಮತ್ತು ದುಷ್ಪರಿಣಾಮದ ಬಗ್ಗೆ ಪೌಷ್ಠಿಕಾಂಶದ ತಜ್ಞ ವೈದ್ಯೆಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಹಸಿ ಮೊಳಕೆ ಕಾಳು ಹೆಚ್ಚು ತಿನ್ನುವುದೆಷ್ಟು ಸರಿ?‘

 ಮೊಳಕೆ ಕಟ್ಟಿದ ಹಸಿ ಕಾಳುಗಳು ಜೀರ್ಣಕ್ರಿಯೆಗೆ ಸಮಸ್ಯೆಯನ್ನುಂಟು ಮಾಡುತ್ತದೆ ಎಂದು ಪೌಷ್ಠಿಕಾಂಶ ತಜ್ಞ ವೈದ್ಯೆ ಡಾ. ಲೀಮಾ ಮಹಾಜನ್​ ಹೇಳಿಕೊಂಡಿದ್ದಾರೆ. ಹಾಗಾದರೆ, ಇದನ್ನು ಸರಿಯಾಗಿ ಸೇವಿಸುವ ವಿಧಾನ ಯಾವುದು ಎಂಬುದನ್ನು ಅವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ರೀಲ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ಹಸಿ ಮೊಳಕೆಕಾಳು ನಿಯಮಿತವಾಗಿ ತಿನ್ನಬಾರದೇಕೆ?

ಪೌಷ್ಠಿಕಾಂಶವುಳ್ಳ ಮೊಳಕೆ ಕಾಳುಗಳನ್ನು ತಿನ್ನುವುದು ಒಳ್ಳೆಯದೇ. ಆದರೆ, ಅದನ್ನು ದಿನನಿತ್ಯ ಸೇವನೆ ಮಾಡಿಕೊಳ್ಳುವುದು ತಪ್ಪು ನಿರ್ಧಾರ. ನೆನಸಿದ ಹಸಿ ಕಾಳು ತೇವಾಂಶ ಮತ್ತು ಬೆಚ್ಚಗೆ ಇರುತ್ತವೆ. ಇವು ಬ್ಯಾಕ್ಟೀರಿಯಾ ಬೆಳೆವಣಿಗೆಗೆ ಸಹಾಯ ಮಾಡುತ್ತವೆ. ಕಾಳುಗಳು ಮೊಳಕೆಯೊಡೆಯುವ ಸಂದರ್ಭದಲ್ಲಿ ಸ್ವಚ್ಛತೆ ಇರದಿದ್ದರೆ ಇ. ಕೋಲಿ ಮತ್ತು ಸಾಲ್ಮೊನೆಲ್ಲಾದಂತಹ ಕೆಟ್ಟ ಬ್ಯಾಕ್ಟೀರಿಯಾಗಳು ಹೊಕ್ಕುತ್ತವೆ. ತರಕಾರಿ ಅಥವಾ ಕಾಳುಗಳನ್ನು ತೊಳೆದ ತಕ್ಷಣ ಬ್ಯಾಕ್ಟೀರಿಯಾಗಳ ನಿರ್ಮೂಲನೆಯಾಗೋದಿಲ್ಲ.  ಹೀಗಾಗಿ ಪ್ರೋಟೀನ್ ಎಂದು ನಿತ್ಯವೂ ಇವುಗಳ ಸೇವನೆ ಸರಿಯಾದ ಕ್ರಮವಲ್ಲ ಎನ್ನುತ್ತಾರೆ ತಜ್ಞ ವೈದ್ಯೆ ಲೀಮಾ.

ಮೊಳಕೆಕಾಳು ಎಷ್ಟು ಪ್ರೋಟೀನ್  ನೀಡುತ್ತೆ?

ದಿನದಲ್ಲಿ  100 ಗ್ರಾಂ.  ಕಾಳು ಸೇವಿಸಿದರೆ ದೇಹಕ್ಕೆ 6ರಿಂದ ಎಂಟು ಗ್ರಾಂ  ಪ್ರೋಟೀನ್ ಮಾತ್ರ ದೇಹಕ್ಕೆ ಪೂರೈಕೆಯಾಗುತ್ತದೆ. ಇದು ಇತರ ಪ್ರೋಟೀನ್  ಆಹಾರಕ್ಕಿಂತ ಕಡಿಮೆ. ಈ ಹಿನ್ನೆಲೆ ಮೊಳಕೆ ಕಾಳುಗಳನ್ನೇ ಮೂಲ ಪ್ರೊಟೀನ್​ ಆಹಾರ ಎಂದು ಅವಲಂಬಿತರಾಗದಿರಿ ಎಂದಿದ್ದಾರೆ ಲೀಮಾ ಮಹಾರಾಜನ್.

ಮೊಳಕೆ ಕಾಲಿನ ಬದಲಿಗೆ ಬೇರೆ ಯಾವುದು ಬೆಸ್ಟ್?

ದಾಲ್​, ದ್ವಿದಳ ಧಾನ್ಯ, ಪನ್ನೀರ್​, ಮೊಟ್ಟೆ, ಕಡಳೆ ಕಾಳು, ಸೋಯಾ ಪನ್ನೀರಿನಿಂತಹ ಆಹಾರ ಪದಾರ್ಥಗಳು ಮೊಳಕೆ ಕಾಳಿನಷ್ಟೇ  ಪ್ರೋಟೀನ್​ವುಳ್ಳಂತಹ ಆಹಾರ. ಆದರೆ, ಇದರಲ್ಲಿ ಫೈಬರ್ ಮತ್ತು ಕಾರ್ಬೊಹೈಡ್ರೇಟ್ ಇರುವ ಕಾರಣ, ಜೀರ್ಣಕ್ರಿಯೆಗೆ ತೊಡಕುಂಟು ಮಾಡಬಹುದು  ನೀರಿನ ಆವಿಯಲ್ಲಿ  ಕಾಳುಗಳನ್ನು ಬೇಯಿಸಿದರೆ, ಬ್ಯಾಕ್ಟೀರಿಯಾಗಳು ಸತ್ತಿರುತ್ತವೆ. ಹೀಗಾಗಿ ಅವುಗಳನ್ನು ತಿನ್ನುವುದರಿಂದ  ಹೊಟ್ಟೆ ಕೆಡುವ ಪ್ರಸಂಗಗಳು ಕಡಿಮೆಯಾಗುತ್ತದೆ ಎಂದು ರೀಲ್ಸ್​ನಲ್ಲಿ ಹೇಳಿಕೊಂಡಿದ್ದಾರೆ.
ಮೊಳಕೆ ಕಟ್ಟುವ ಸರಿಯಾದ ವಿಧಾನ ಯಾವುದು?
ಮೊಳಕೆ ಕಾಳುಗಳನ್ನು ಖರೀದಿಸಿದ ನಂತರ ಅಥವಾ ಅದನ್ನು ನೆನಸಿಟ್ಟು ಮೊಳೆಕೆಯೊಡೆಯಲು ಇಟ್ಟ ನಂತರ ಅದನ್ನು ಫ್ರಿಡ್ಜ್​ನಲ್ಲಿಡುವುದು ಸರಿಯಾದದ್ದು. ಏಕೆಂದರೆ, ಅತಿಯಾದ ಶೀತದ ವಾತಾವರಣ ಬ್ಯಾಕ್ಟೀರಿಯವನ್ನು ವೃದ್ಧಿಸೋದನ್ನ ಕಡಿಮೆ ಮಾಡುತ್ತದೆ. ಮೊಳಕೆ ಕಾಳುಗಳು ದೇಹಕ್ಕೆ ಪ್ರೊಟೀನ್ ನೀಡುತ್ತದೆ ಹೌದು. ಆದರೆ, ಪ್ರತಿಯೊಂದು ಆಹಾರವನ್ನು ನಾವು ಹೇಗೆ ಸೇವಿಸುತ್ತೇವೆ. ಯಾವ ಕ್ರಮದಲ್ಲಿ ದೇಹಕ್ಕೆ ಸೇರಿಸಿಕೊಳ್ಳುತ್ತೇವೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು ಎಂದು ಲೀಮಾ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net