Fridge smell: ಬೇಸಿಗೆ ಹತ್ತಿರ ಬರುತ್ತಿದ್ದಂತೆಯೇ ಮನೆಯ ಫ್ರಿಜ್ಡ್ಗಳ ಬಳಕೆ ಹೆಚ್ಚಾಗುತ್ತದೆ. ಹಣ್ಣು, ತರಕಾರಿ, ಹಾಲು ಹಾಗೂ ಉಳಿದ ಆಹಾರ ಪದಾರ್ಥಗಳನ್ನು ಕೆಡದಂತೆ ಇಡಲು ನಾವು ಫ್ರಿಡ್ಜ್ ಅನ್ನು ಅವಲಂಬಿಸುತ್ತೇವೆ. ಆದರೆ, ಪದೇ ಪದೇ ಫ್ರಿಡ್ಜ್ ತೆರೆಯುವುದು ಮತ್ತು ವಿವಿಧ ರೀತಿಯ ಆಹಾರಗಳನ್ನು ಒಟ್ಟಿಗೆ ಇಡುವುದರಿಂದ ಕೆಲವೊಮ್ಮೆ ವಿಚಿತ್ರ ವಾಸನೆ ಬರಲಾರಂಭಿಸುತ್ತದೆ. ಆದಾಗ್ಯೂ, ಮನೆಗೆ ಅತಿಥಿಗಳು ಬಂದಾಗ ಫ್ರಿಡ್ಜ್ ತೆರೆದ ಕೂಡಲೇ ಬರುವ ಈ ದುರ್ಗಂಧ ನಿಮ್ಮನ್ನು ಮುಜುಗರಕ್ಕೀಡು ಮಾಡಬಹುದು.