ನೀವು ಎಷ್ಟು ಬಾರಿ ಸಾಕ್ಸ್ ಬದಲಾಯಿಸಬೇಕು? ಈ ಒಂದು ತಪ್ಪು ಮಾಡಿದ್ರೆ ಪಾದದ ಸೋಂಕು ಶಾಶ್ವತ! Foot Infection

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಅನೇಕರು ಜೀನ್ಸ್​, ಟೀ ಶರ್ಟ್‌ಗಳು ಅಥವಾ ಜಾಕೆಟ್‌ಗಳನ್ನು ಹೆಚ್ಚಾಗಿ ಮರುಬಳಕೆ ಮಾಡುತ್ತಾರೆ.
  • ನೀವು ನಡೆಯುವಾಗ ಸಾಕ್ಸ್​ ಒಳಗೆ ಬೆವರು, ಧೂಳು, ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತದೆ
  • ಪಾದಗಳು ಬೆವರು ಮತ್ತು ಬ್ಯಾಕ್ಟೀರಿಯಾದ ಸಂಪರ್ಕವನ್ನು ಮಾಡಿದಾಗ, ವಾಸನೆ ಬರುವುದು ಸಹಜ
Foot Infection: ಪ್ರತಿಯೊಬ್ಬ ಮನುಷ್ಯನು ಕೂಡಾ ತಾವು ಧರಿಸಿದ ಜೀನ್ಸ್​, ಟೀ ಶರ್ಟ್‌ಗಳು ಅಥವಾ ಜಾಕೆಟ್‌ಗಳನ್ನು ಹೆಚ್ಚಾಗಿ ಮರುಬಳಕೆ ಮಾಡುತ್ತಾರೆ. ಏಕೆಂದರೆ ಅವು ಅಷ್ಟೊಂದು ಕೊಳಕಾಗಿರುವುದಿಲ್ಲ. ಆದರೆ, ಈ ಒಂದು ವಸ್ತುವನ್ನು ಧರಿಸಿದ ನಂತರ ಮತ್ತೊಮ್ಮೆ ಎಂದಿಗೂ ಮರು ಬಳಕೆ ಮಾಡಬಾರದು ಅದ್ಯಾವುದು ಗೊತ್ತಾ? ನೀವು ಪ್ರತಿನಿತ್ಯ ಬಳಸುವ ಸಾಕ್ಸ್​ಗಳು.
ಪಾದಗಳು ದಿನವಿಡೀ ಶೂಗಳ ಒಳಗೆ ಸಿಲುಕಿಕೊಂಡಿರುತ್ತವೆ. ನೀವು ನಡೆಯುವಾಗ ಸಾಕ್ಸ್​ ಒಳಗೆ ಬೆವರು, ಧೂಳು, ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತದೆ. ಕೆಲವೊಮ್ಮೆ ಸಾಕ್ಸ್​ ನೋಡಲು ಸ್ವಚ್ಛವಾಗಿ ಕಂಡರೂ, ಅದರಲ್ಲಿ ಸೂಕ್ಷ್ಮ ಜೀವಿಗಳು, ಶಿಲೀಂಧ್ರಗಳು ಮತ್ತು ಸತ್ತ ಚರ್ಮದ ಕೋಶಗಳು ಇರುತ್ತದೆ. ಇದರಿಂದ ದುರ್ವಾಸನೆ ಬರುವುದು ಖಚಿತ ಎಂದು ಸಂಶೋಧನೆಗಳು ತಿಳಿಸಿವೆ.

ಬಹಳ ಬೇಗ ಸಾಕ್ಸ್​ಗಳು ವಾಸನೆ ಬರಲು ಕಾರಣ ಏನು?

ನಮ್ಮ ಪಾದಗಳಲ್ಲಿ ಬಹಳಷ್ಟು ಬೆವರು ಗ್ರಂಥಿಗಳಿವೆ. ಇವು ಬೆವರು ಮತ್ತು ಬ್ಯಾಕ್ಟೀರಿಯಾದ ಸಂಪರ್ಕವನ್ನು ಮಾಡಿದಾಗ, ವಾಸನೆ ಬರುವುದು ಸಹಜ. ಸಾಕ್ಸ್​ ಬೆವರನ್ನು ಹೀರಿಕೊಳ್ಳುತ್ತದೆ ಮತ್ತು ತೇವಾಂಶವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಸೃಷ್ಟಿಸುತ್ತದೆ. ಹಾಗೆಯೇ ನೀವು ನಡೆಯುವಾಗ ಧೂಳು, ಮಣ್ಣು ಮತ್ತು ಸೂಕ್ಷ್ಮ ಜೀವಿಗಳು ನಿಮ್ಮ ಸಾಕ್ಸ್​ಗೆ ಅಂಟಿಕೊಳ್ಳುತ್ತವೆ.
ಅಧ್ಯಯನಗಳು ತೋರಿಸಿರುವ ಪ್ರಕಾರ, ಸಾಕ್ಸ್‌ಗಳು ಟಿ-ಶರ್ಟ್‌ಗಳಿಗಿಂತ ಹೆಚ್ಚಿನ ಬ್ಯಾಕ್ಟೀರಿಯಾಗಳನ್ನು ಹೊಂದಬಹುದು, ಆದ್ದರಿಂದ ಅವು ಎಷ್ಟೇ ಸ್ವಚ್ಛವಾಗಿದ್ದರೂ, ಅವುಗಳನ್ನು ಮರುಬಳಕೆ ಮಾಡುವುದು ಅಪಾಯಕಾರಿ ಹಾಗಾಗಿ ಅವುಗಳನ್ನು ಸ್ವಚ್ಛಗೊಳಿಸಿದ ನಂತರ ಬಳಸಿರಿ.

ಕೊಳಕು ಸಾಕ್ಸ್ ಧರಿಸುವುದರಿಂದ ಆಗುವ ಹಾನಿಗಳೇನು?

ಸೂಕ್ಷ್ಮಜೀವಿಗಳು ಪಾದಗಳಿಗೆ ಮಾತ್ರ ಸೀಮಿತವಾಗಿಲ್ಲ, ಅವು ಹಾಸಿಗೆ, ಸೋಫಾ, ನೆಲ ಮತ್ತು ಬೂಟುಗಳಿಗೂ ಸೋಂಕನ್ನು ಹರಡುತ್ತವೆ. ಈ ವೇಳೆ ಕೊಳಕು ಸಾಕ್ಸ್​ಗಳನ್ನು ಧರಿಸುವುದರಿಂದ ಪಾದಗಳಿಗೆ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಈಗಾಗಲೇ ನಿಮ್ಮ ಪಾದಗಳು ಸೋಂಕನ್ನು ಹೊಂದಿದ್ದರೆ, ಸಾಕ್ಸ್​ ಅದನ್ನು ಉಲ್ಬಣಗೊಳಿಸಿ, ಸೋಂಕು ಮತ್ತು ವಾಸನೆ ಬರುವಂತೆ ಮಾಡುತ್ತದೆ.

ನಿಮ್ಮ ಪಾದಗಳು ಮತ್ತು ಸಾಕ್ಸ್‌ಗಳನ್ನು ಸ್ವಚ್ಛವಾಗಿಡಲು ಈ ಮಾರ್ಗ ಬಳಸಿ

ಪ್ರತಿದಿನ ಶುದ್ಧವಾದ ಹೊಸ ಸಾಕ್ಸ್​ಗಳನ್ನು ಬಳಸಿ. ಹಳೆಯ ಸಾಕ್ಸ್​ಗಳನ್ನು ಮರುಬಳಕೆ ಮಾಡಬೇಡಿ. ದಿನಕ್ಕೆ ಎರಡು ಬಾರಿ ನಿಮ್ಮ ಪಾದಗಳನ್ನು ಸೋಪಿನಿಂದ ಸ್ವಚ್ಛವಾಗಿ ತೊಳೆಯಿರಿ. ಸಾಕ್ಸ್​ಗಳನ್ನು ಕೂಡಾ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಇದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾಗಳು ಸಾಯಿಸುತ್ತವೆ.

ಸಾಕ್ಸ್ ತೊಳೆಯುವುದು ಹೇಗೆ?

ಪಾದ ಮತ್ತು ಸಾಕ್ಸಿನಲ್ಲಿರುವ ಕೊಳಕು ಮತ್ತು ಬೆವರನ್ನು ತೆಗೆದುಹಾಕಲು ಅವುಗಳನ್ನು ಬಿಸಿ ನೀರಿನಿಂದ ಚನ್ನಾಗಿ ತೊಳೆಯಿರಿ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಒಂದು ವೇಳೆ ನೀವೇನಾದರೂ, ತಣ್ಣೀರಿನಲ್ಲಿ ತೊಳೆದರೆ, ಅದನ್ನು ಬಿಸಿಲಿನಲ್ಲಿ ಒಣಗಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net