ಚಳಿಗಾಲದಲ್ಲಾಗುವ ಕೀಲು ನೋವಿಗೆ ಗುಡ್‌ಬೈ ಹೇಳಿ! ಪ್ರತಿನಿತ್ಯ ಈ ವ್ಯಾಯಾಮಗಳನ್ನು ಅಭ್ಯಾಸ ಮಾಡಿ....Joint Pain

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Joint Pain: ಚಳಿಗಾಲ ಆರಂಭವಾಗುತ್ತಿದ್ದಂತಲೇ ಹಲವಾರು ಜನರು ಕೀಲು ಸಮಸ್ಯೆಗಳಿಂದ ಬಳಲಲು ಆರಂಭಿಸುತ್ತಾರೆ. ಇದು ಶೀತದಿಂದ ಉಂಟಾಗುವ ರಕ್ತನಾಳಗಳ ಸಂಕೋಚನ, ಕಡಿಮೆ ಚಟುವಟಿಕೆ, ನರಗಳ ಸೂಕ್ಷ್ಮತೆ ಮತ್ತು ವಾಯುಭಾರದ ಒತ್ತಡವೇ ಇದಕ್ಕೆ ಕಾರಣ. ಈ ಎಲ್ಲಾ ಅಂಶಗಳು ಅಂಗಾಂಶವನ್ನು ಗಟ್ಟಿಯಾಗಿಸುವುದರ ಜೊತೆಗೆ ಉರಿಯೂತವನ್ನು ಹೆಚ್ಚಿಸುತ್ತದೆ. ಕೊನೆಯದಾಗಿ ಇದು ಅಸ್ವಸ್ಥತೆ ಮತ್ತು ನೋವನ್ನು ಹೆಚ್ಚಿಸುತ್ತದೆ. ಹಾಗಾಗಿ ನೀವೇನಾದರೂ, ಕೀಲು ನೋವು ಮತ್ತು ಅಸ್ವಸ್ಥತೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ವ್ಯಾಯಾಮಗಳ ಅಭ್ಯಾಸ ಮಾಡಿ. ಇವು ತ್ವರಿತವಾಗಿ ಪ್ರತಿಕ್ರಿಯೆಯನ್ನು ನೀಡುತ್ತದೆ.

ಚಳಿಗಾಲದಲ್ಲಿ ಕೀಲು ನೋವು ನಿವಾರಿಸಲು ವ್ಯಾಯಾಮಗಳು

1. ಕುಳಿತಿರುವ ಮೊಣಕಾಲು ವಿಸ್ತರಣೆಗಳು (Seated Knee Extensions)

ಈ ವ್ಯಾಯಾಮವು ತೊಡೆಯ ಮುಂಭಾಗದ ಸ್ನಾಯುಗಳನ್ನು ಬಲಪಡಿಸುವ ಉತ್ತಮ ವ್ಯಾಯಾಮವಾಗಿದೆ. ಇದು ಮೊಣಕಾಲಿನ ಸ್ಥಿರತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ನಡಿಗೆ ಮತ್ತು ಎದ್ದು ನಿಲ್ಲುವುದನ್ನು ಸುಲಭಗೊಳಿಸುತ್ತದೆ. ಪ್ರತಿದಿನ 10-15 ಪುನರಾವರ್ತನೆಗಳನ್ನು ಮಾಡಿರಿ. ಇದು ಶೀತ ತಿಂಗಳುಗಳಲ್ಲಿ ಸ್ನಾಯು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಸೊಂಟ ಸೇತುವೆಗಳು (Hip Bridges)

ಸೊಂಟ ಸೇತುವೆಗಳು ಗ್ಲೂಟ್ಸ್ , ಹ್ಯಾಮ್‌ಸ್ಟ್ರಿಂಗ್ಸ್ ಮತ್ತು ಕೋರ್ ಸ್ನಾಯುಗಳನ್ನು ಬಲಪಡಿಸುವ ಅದ್ಭುತ ವ್ಯಾಯಾಮವಾಗಿದೆ. ಇದು ಸೊಂಟದ ಆಕಾರವನ್ನು ಸುಧಾರಿಸುತ್ತದೆ, ಬೆನ್ನು ನೋವು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಕೆಳಗಿನ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರಿಂದ ಪ್ರತಿನಿತ್ಯ ಈ ವ್ಯಾಯಾಮವನ್ನು 10-15 ನಿಮಿಷಗಳ ಕಾಲ ಅಭ್ಯಾಸ ಮಾಡಿರಿ.

3. ಭುಜದ ಬ್ಲೇಡ್ ಸ್ಕ್ವೀಝ್‌ಗಳು (Shoulder Blade Squeezes)

ಭುಜದ ಬ್ಲೇಡ್ ಸ್ಕ್ವೀಝ್‌ಗಳು ಮಾಡುವುದರಿಂದ ಹಲವಾರು ಲಾಭಗಳಿವೆ. ಇದು ಮುಖ್ಯವಾಗಿ ಭುಜದ ಬ್ಲೇಡ್‌ಗಳ ನಡುವಿನ ಸ್ನಾಯುಗಳಾದ ರೋಂಬಾಯ್ಡ್ಸ್ , ಮಧ್ಯ ಮತ್ತು ಕೆಳಗಿನ ಟ್ರ್ಯಾಪೀಜಿಯಸ್ ಸ್ನಾಯುಗಳನ್ನು ಬಲಪಡಿಸುತ್ತದೆ. ಈ ವ್ಯಾಯಾಮವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಭುಜಗಳನ್ನು ಹಿಂದಕ್ಕೆ ಎಳೆದು ನೇರ ಭಂಗಿಯನ್ನು ಸುಧಾರಿಸುತ್ತದೆ ಮತ್ತು ಮುಂದಕ್ಕೆ ಬಾಗುವಿಕೆಯನ್ನು ತಡೆಯುತ್ತದೆ. ದಿನಕ್ಕೆ 2 ರಿಂದ 3 ಬಾರಿ 10 ರಿಂದ 12 ಪುನರಾವರ್ತನೆಗಳಿಗಾಗಿ ಮಾಡಿ. ಈ ಸರಳ ಕ್ರಿಯೆಯು ಭುಜಗಳಲ್ಲಿನ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ.

4. ಪಾದದ ಪಂಪ್‌ಗಳು (Ankle Pumps)

ಪಾದದ ಪಂಪ್‌ಗಳು ವ್ಯಾಯಾಮವು ಮಾಡಲು ಬಹಳ ಸರಳವಾಗಿದೆ. ಇದು ಕಾಲಿನ ಕೆಳಭಾಗದ ಸ್ನಾಯುಗಳ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ವ್ಯಾಯಾಮವನ್ನು ಪ್ರತಿದಿನ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ, ರಕ್ತ ಹೆಪ್ಪುಗಟ್ಟುವಿಕೆ ತಡೆಯುವುದು, ಕಾಲುಗಳ ಊತ ಕಡಿಮೆ ಮಾಡುತ್ತದೆ. ಹಾಗಾಗಿ ಈ ವ್ಯಾಯಾಮವನ್ನು ಪ್ರತಿದಿನ ಅಭ್ಯಾಸ ಮಾಡಿಕೊಳ್ಳಿ.

5. ಬೆಕ್ಕು-ಹಸುವಿನ ಹಿಗ್ಗುವಿಕೆ (Cat-Cow Stretch)

ಬೆಕ್ಕು-ಹಸುವಿನ ಹಿಗ್ಗುವಿಕೆ ಯೋಗವು ಸರಳ ವ್ಯಾಯಾಮವಾಗಿದೆ. ಇದು ಬೆನ್ನು ಹುರಿಯನ್ನು ಹಿಗ್ಗಿಸುತ್ತದೆ. ಬೆನ್ನು ನೋವನ್ನು ಕಡಿಮೆ ಮಾಡುತ್ತದೆ. ಈ ವ್ಯಾಯಾಮವನ್ನು ಉಸಿರಾಟವನ್ನು ಜೊತೆಗೂಡಿಸಿ ಮಾಡುವುದರಿಂದ ಮನಸ್ಸು ಹಗುರವಾಗುತ್ತದೆ. ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಹಾಗಾಗಿ ಪ್ರತಿನಿತ್ಯ 10 ನಿಮಿಷಗಳ ಕಾಲ ಈ ವ್ಯಾಯಾಮವನ್ನು ಅಭ್ಯಾಸ ಮಾಡಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net