ಅತಿಯಾಗಿ ಆಲೂಗಡ್ಡೆ ತಿಂತಿದ್ದೀರಾ? ಹಾಗಿದ್ರೆ, ಈ ಸಮಸ್ಯೆಗಳು ಕಾಡುತ್ತಿರಬಹುದು ಇರಲಿ ಎಚ್ಚರ!

ಆಲೂಗಡ್ಡೆ
ಆಲೂಗಡ್ಡೆ
Published on

ಪ್ರಮುಖ ಮುಖ್ಯಾಂಶಗಳು

  • ಅತಿಯಾಗಿ ಆಲೂಗಡ್ಡೆ ತಿನ್ನುವುದು ತುಂಬಾ ಅಪಾಯಕಾರಿ
  • ಜೀರ್ಣಕ್ರಿಯೆ, ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್​ ಸಮಸ್ಯೆ
ಬೆಂಗಳೂರು: ಅತಿಯಾಗಿ ಆಲೂಗಡ್ಡೆ ತಿನ್ನುವುದು ತುಂಬಾ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಅಭಿಪ್ರಾಯಿಸುತ್ತಾರೆ. ಇದರ ಅಡ್ಡಪರಿಣಾಮಗಳು ದೊಡ್ಡ ಪರಿಣಾಮ ಬೀರುವ ಸಾಧ್ಯತೆಗಳಿವೆ. ಬಟಾಟೆಯಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಅಧಿಕವಾಗಿವೆ. ಇವುಗಳಲ್ಲಿ ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ6 ನಂತಹ ಇತರ ಪೋಷಕಾಂಶಗಳಿವೆ. ಸಮೋಸ, ದಹಿ ಪುರಿ ಸೇರಿದಂತೆ ಇತರೆ ಹೊರಗಡೆ ತಿಂಡಿ ತಿನಿಸುಗಳ ಮೂಲಕ ಹೆಚ್ಚಾಗಿ ಸೇವಿಸುವುದು ಆರೋಗ್ಯಕ್ಕೆ ಕುತ್ತು ತಂದಿಡಲಿದೆ ಎಂಬುದರಲ್ಲಿ ಅನುಮಾನವೇ ಬೇಡ.
ಆಲೂಗಡ್ಡೆಯನ್ನು ಸಾಂಬರ್​, ಪಲ್ಯಗಳಲ್ಲಿ ಹೊರತುಪಡಿಸಿದರೆ, ಹೆಚ್ಚಾಗಿ ಜಂಕ್​ ಫುಡ್​ಗಳಲ್ಲಿ ಬಳಸಲಾಗುತ್ತದೆ. ಇದನ್ನೇ ಇಂದಿನ ಯುವಜನತೆ ಅಧಿಕವಾಗಿ ಸೇವಿಸುವುದರಿಂದ ಅನಾರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಆಲೂಗಡ್ಡೆ ತಿನ್ನುವುದರಿಂದ ಜೀರ್ಣಕ್ರಿಯೆ, ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್​ ಸಮಸ್ಯೆಗಳು ಉಂಟಾಗುತ್ತವೆ. ಆದಾಗ್ಯೂ, ಫ್ರೈಸ್ ಅಥವಾ ಚಿಪ್ಸ್​ನಂತ ಬೇಯಿಸಿದ ಆಲೂಗಡ್ಡೆ ಸೇವನೆ ಒಳ್ಳೆಯದಲ್ಲ. ಇದು ಅಧಿಕ ರಕ್ತದೊತ್ತಡ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಅತಿ ಮುಖ್ಯವಾಗಿ, ಹೊಟ್ಟೆಯ ಸುತ್ತಲೂ ಕೊಬ್ಬಿರುವವರು ಆಲೂ ಪದಾರ್ಥಗಳಿಂದ ಆದಷ್ಟು ದೂರವಿರುವುದು ಒಳಿತು.
ಸಕ್ಕರೆ ಮತ್ತು ಬಿಪಿಯಂತಹ ಸಮಸ್ಯೆಗಳಿರುವ ಜನರು ಆಲೂಗಡ್ಡೆಯನ್ನು ಸಂಪೂರ್ಣವಾಗಿ ಬಿಡುವುದು ಉತ್ತಮ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಅತಿಯಾಗಿ ಆಲೂಗಡ್ಡೆ ಸೇವನೆಯಿಂದ ಹೊಟ್ಟೆ ಮತ್ತು ಕಾಲು ನೋವು ಉಂಟಾಗುತ್ತದೆ. ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುವುದರಿಂದ, ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಹೀಗಾಗಿ, ಮಧುಮೇಹಿಗಳು ಇದರ ಸೇವನೆಯನ್ನು ಆದಷ್ಟು ತಪ್ಪಿಸುವುದು ಉತ್ತಮ.
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net