ಬ್ರೇಕ್ ಫಾಸ್ಟ್ ತಡವಾದಷ್ಟು ಶುಗರ್ ಹೆಚ್ಚಾಗುತ್ತೆ ಎಚ್ಚರ! ಡಾಕ್ಟರ್ ಹೇಳೋದೇನು ಗೊತ್ತಾ? Sugar levels

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇಂದಿನ ದಿನಗಳಲ್ಲಿ ಮಧುಮೇಹ ಎಂಬುದು ಸಾಮಾನ್ಯ ಸಮಸ್ಯೆಯಾಗಿ ಕಾಣಲು ಪ್ರಾರಂಭಿಸಿದೆ
  • ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿಯೇ ಜನರು ಮಧುಮೇಹಕ್ಕೆ ತುತ್ತಾಗುವುದು ಸಹಜವಾಗಿದೆ
  • ಮಧುಮೇಹಿ ರೋಗಿಗಳು ಈ ರೋಗದಿಂದ ಪಾರಾಗಲು ಹಲವಾರು ನಿಯಮಗಳನ್ನು ಪಾಲಿಸುವುದು ಮುಖ್ಯ
  • ಅನೇಕ ಮಧುಮೇಹಿಗಳು ಸಾಮಾನ್ಯವಾಗಿ ಬೆಳಗಿನ ಉಪಾಹಾರ ಸೇವಿಸುವುದಿಲ್ಲ, ತಡವಾಗಿ ಆಹಾರವನ್ನು ಸೇವಿಸುತ್ತಾರೆ
Sugar levels: ಇಂದಿನ ದಿನಗಳಲ್ಲಿ ಮಧುಮೇಹ ಎಂಬುದು ಸಾಮಾನ್ಯ ಸಮಸ್ಯೆಯಾಗಿ ಕಾಣಲು ಪ್ರಾರಂಭಿಸಿದೆ. ಈ ಹಿಂದೆ ಈ ಕಾಯಿಲೆಯು ಹೆಚ್ಚಾಗಿ ವಯಸ್ಸಾದವರಲ್ಲಿ ಕಂಡುಬರುತ್ತಿತ್ತು. ಆದರೆ, ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿಯೇ ಈ ರೋಗಕ್ಕೆ ತುತ್ತಾಗುವುದು ಸಹಜವಾಗಿದೆ. ಹಾಗಾಗಿ ಮಧುಮೇಹಿ ರೋಗಿಗಳು ಈ ರೋಗದಿಂದ ಪಾರಾಗಲು ಹಲವಾರು ನಿಯಮಗಳನ್ನು ಪಾಲಿಸುವುದು ಮುಖ್ಯ. ನಿರ್ದಿಷ್ಟವಾಗಿ ಹೇಳುವುದಾದರೆ, ಪ್ರತಿದಿನ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಬೇಕು. ಇಲ್ಲದಿದ್ದರೆ, ದೇಹದ ಸ್ಥಿತಿ ಹದಗೆಟ್ಟುವುದು ಸಹಜವಾಗಿರುತ್ತದೆ.
ಅನೇಕ ಮಧುಮೇಹಿಗಳು ಸಾಮಾನ್ಯವಾಗಿ ಬೆಳಗಿನ ಉಪಾಹಾರ ಸೇವಿಸುವುದಿಲ್ಲ. ಇನ್ನೂ ಕೆಲವರು ತಡವಾಗಿ ಆಹಾರವನ್ನು ಸೇವಿಸುತ್ತಾರೆ. ಈ ರೀತಿಯ ತಪ್ಪಿನಿಂದಾಗಿ ದೇಹದಲ್ಲಿ ಹೆಚ್ಚಿನ ಮಟ್ಟದ ಸಕ್ಕರೆ ಉತ್ಪತ್ತಿಯಾಗುತ್ತದೆ. ಇದು ಹೃದಯ, ಕಣ್ಣು ಮತ್ತು ಮೂತ್ರಪಿಂಡಗಳ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಹಾಗಾಗಿ ಆಹಾರವನ್ನು ಸೇವಿಸುವುದು ಬಹಳ ಮುಖ್ಯವಾಗಿದೆ.

ಬೆಳಗಿನ ಉಪಾಹಾರ ಏಕೆ ಮುಖ್ಯ?

ವಾಸ್ತವವಾಗಿ, ಮಧುಮೇಹ ರೋಗಿಗಳು ದೀರ್ಘಕಾಲ ಊಟ ಮಾಡದೆ ಇರಬಾರದು. ಹೀಗೆ ಮಾಡುವುದರಿಂದ ದೇಹದಲ್ಲಿ ಹೆಚ್ಚಿನ ಇನ್ಸುಲಿನ್​ ಹಾರ್ಮೋನುಗಳು ದುರ್ಬಲ ಸ್ಥಿತಿಗೆ ತಲುಪುತ್ತವೆ. ಇದರಿಂದ ಸಕ್ಕರೆ ಪ್ರಮಾಣವು ದೇಹದಲ್ಲಿ ಹೆಚ್ಚಾಗುತ್ತದೆ.
ಆದಾಗ್ಯೂ, ಬೆಳಿಗ್ಗೆ ಇನ್ಸುಲಿನ್ ಅಥವಾ ಔಷಧಿ ತೆಗೆದುಕೊಳ್ಳುವವರು ಊಟ ಮಾಡದಿದ್ದರೆ, ಮಧುಮೇಹ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ನೀವು ಗಂಭೀರ ಸಮಸ್ಯೆಯನ್ನು ಕೂಡಾ ಅನುಭವಿಸಬೇಕಾಗುತ್ತದೆ. ಹಾಗಾಗಿ ನೀವೇನಾದರೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಉಪಹಾರವನ್ನು ಸೇವಿಸಲೇಬೇಕು.

ಬೆಳಗಿನ ಉಪಾಹಾರವು ಸಕ್ಕರೆಯನ್ನು ಯಾವಾಗ ನಿಯಂತ್ರಣದಲ್ಲಿಡುತ್ತದೆ?

ಮಧುಮೇಹ ರೋಗಿಗಳು ಬೆಳಿಗ್ಗೆ 8-9 ಗಂಟೆಯೊಳಗೆ ಉಪಾಹಾರ ಸೇವಿಸುವುದು ಉತ್ತಮ. ಇದರ ನಂತರ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗಬಹುದು. ರಾತ್ರಿ 7-8 ಗಂಟೆಯೊಳಗೆ ಸೇವಿಸಿ ಸ್ವಲ್ಪ ಓಡಾಡುವ ಅಭ್ಯಾಸವನ್ನು ಮಾಡಬೇಕು. ಜೊತೆಗೆ ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.

ಬೆಳಗಿನ ಉಪಾಹಾರದಲ್ಲಿ ಏನು ಸೇರಿಸಬೇಕು?

ನೀವು ಮಧುಮೇಹದಿಂದ ಬಳಲುತ್ತಿದ್ದರೆ, ಉಪಹಾರದ ಆಹಾರ ಪಟ್ಟಿಯಲ್ಲಿ ಜಾಗರೂಕರಾಗಿರಿ. ಪರಾಠ ಮತ್ತು ಬ್ರೆಡ್​ ಸೇವಿಸುವ ಬದಲಿಗೆ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾದ ಆಹಾರಗಳಾದ ರಾಗಿ, ನವಣೆ, ಸಾಮೆ, ಓಟ್ಸ್ , ಕೆಂಪಕ್ಕಿ ಸೇರಿಸುವುದು ಉತ್ತಮ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಈ ಸಮಯದಲ್ಲಿ ಹೆಚ್ಚು ಪ್ರೋಟೀನ್ ಸೇವಿಸಬೇಕು. ಮೊಟ್ಟೆ, ಮೀನು ಮತ್ತು ಕೋಳಿ ಮಾಂಸವನ್ನು ನಿಯಮಿತವಾಗಿ ಸೇವಿಸಿ. ಈ ಆಹಾರದಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಇರುತ್ತದೆ. ಈ ಎಲ್ಲಾ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಸಕ್ಕರೆಯನ್ನು ಸುಲಭವಾಗಿ ನಿಯಂತ್ರಣದಲ್ಲಿಡಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net