ಬೆಳಿಗ್ಗೆ vs ಸಂಜೆ: ಮಲ ವಿಸರ್ಜನೆಯ ಸಮಯವು ನಿಮ್ಮ ಕರುಳಿನ ಆರೋಗ್ಯವನ್ನು ಬಲಪಡಿಸುತ್ತದೆ! Gut health

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Gut health: ಮಲವಿಸರ್ಜನೆಗೆ ಸರಿಯಾದ ಸಮಯವಿದೆಯೇ ಎಂದು ಅನೇಕ ಜನರು ಆಶ್ಚರ್ಯ ಪಡುತ್ತಾರೆ. ಇದು ನಿಮಗೆ ತಿಳಿದಿದೆಯೇ? ನಿಮ್ಮ ಮಲವಿಸರ್ಜನೆಯ ಸಮಯಗಳು ಕರುಳಿನ ಆರೋಗ್ಯದ ಬಗ್ಗೆ ಬಹಳಷ್ಟು ಗಮನವನ್ನು ವಹಿಸುತ್ತವೆ. ಇದು ವ್ಯಕ್ತಿಯ ಕರುಳಿನ ಆರೋಗ್ಯ, ಆರೋಗ್ಯ ಪದ್ಧತಿ ಹಾಗೂ ಜೀವನಶೈಲಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಿದ್ದರೆ, ನಿಮ್ಮ ಕರುಳನ್ನು ಆರೋಗ್ಯವಾಗಿರಿಸಲು ಹಾಗೂ ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಮಲವಿಸರ್ಜನೆಯ ಸಮಯ ಯಾವುದು ಎಂದು ತಿಳಿಯಿರಿ.
ಹೆಚ್ಚಿನ ಜನರು ಮಲವಿಸರ್ಜನೆಯ ಸಮಯಕ್ಕೆ ಹೆಚ್ಚಿನ ಗಮನ ಕೊಡುವುದಿಲ್ಲ. ಆದಾಗ್ಯೂ, ಮಲವಿಸರ್ಜನೆಯ ಸಮಯವು ನಿಮ್ಮ ಜೀರ್ಣಕಾರಿ ಆರೋಗ್ಯದ ಬಗ್ಗೆ ಅರ್ಥಪೂರ್ಣ ಸುಳಿವುಗಳನ್ನು ನೀಡುತ್ತದೆ. ದೇಹವು ಬೆಳಿಗ್ಗೆ ನೈಸರ್ಗಿಕವಾಗಿ ಮಲವಿಸರ್ಜನೆಗೆ ಒಗ್ಗಿಕೊಂಡಿದ್ದರೆ, ಅನಿಯಮಿತ ವೇಳಾಪಟ್ಟಿ, ನಿದ್ರೆಯ ಕೊರತೆ ಅಥವಾ ಕಡಿಮೆ ಫೈಬರ್​ ಆಹಾರದಿಂದ ಅನೇಕ ಜನರು ಸಂಜೆ ಮಲವಿಸರ್ಜನೆಯನ್ನು ಮಾಡುತ್ತಾರೆ.
ಈ ಅಭ್ಯಾಸವು ಚಿಂತೆಗೆ ಕಾರಣವಾಗುವುದಲ್ಲದೆ, ಮಲವಿಸರ್ಜನೆಯ ಸಮಯದಲ್ಲಿ ಅನೇಕ ಬದಲಾವಣೆಗಳು ಮತ್ತು ತೊಂದರೆಗಳನ್ನು ಕರುಳಿನ ಒತ್ತಡವನ್ನು ಉಂಟು ಮಾಡುತ್ತದೆ. ಹಾಗಾಗಿ ಈ ವಿಷಯದ ಬಗ್ಗೆ ಗಮನ ಕೊಡುವುದು ಬಹಳ ಉತ್ತಮ ಎಂದು ವೈದ್ಯರು ತಿಳಿಸುತ್ತಾರೆ.

ಕರುಳಿನ ಆರೋಗ್ಯ ಬೆಂಬಲಿಸಲು ಮಲವಿಸರ್ಜನೆಯ ಸಮಯ ಏಕೆ ಮುಖ್ಯ?

 ಕರುಳು ಮೆದುಳಿಗೆ ಹೋಲುವ ತನ್ನದೇ ಆದ ಆಂತರಿಕ ಗಡಿಯಾರವನ್ನು ಹೊಂದಿದೆ. ಇದು ಸರಿಯಾದ ಜೀರ್ಣಕ್ರಿಯೆ, ನಿದ್ರೆ ಮತ್ತು ಊಟದ ಸಮಯವನ್ನು ಅನುಸರಿಸುವುದರಿಂದ ಕರುಳು ದೇಹದಲ್ಲಿ ತನ್ನ ಕೆಲಸವನ್ನು ಮಾಡುತ್ತದೆ. ಇದರಿಂದ ಬೆಳಿಗ್ಗೆ ಮಲವಿಸರ್ಜನೆ ಸ್ವಾಭಾವಿಕವಾಗಿರುತ್ತದೆ. ಆದರೆ, ರಾತ್ರಿ ವೇಳೆಯಲ್ಲಿ ಆಹಾರ ಸೇವನೆ, ಮೊಬೈಲ್​ಗಳ ಬಳಕೆ, ಒತ್ತಡದಿಂದ ಮಲಬದ್ಧತೆಗೆ ಕಾರಣವಾಗುತ್ತದೆ.
ಪ್ರತಿ ದಿನ ಮಲವಿಸರ್ಜನೆಯಲ್ಲಿ ತೊಂದರೆ ಉಂಟಾದರೆ, ಇದು ಕರುಳಿನ ಆರೋಗ್ಯದಲ್ಲಿ ಏರುಪೇರು ಮಾಡುತ್ತದೆ. ಇದರಿಂದ ಕರುಳಿಗೆ ಅಗತ್ಯವಾದ ವಿಶ್ರಾಂತಿ, ಜಲಸಂಚಯನ ಅಥವಾ ನಾರು ಸಿಗುವುದಿಲ್ಲ. ಹಾಗಾಗಿ ಸಂಜೆ ವೇಳೆಯಲ್ಲಿ ಮಲವಿಸರ್ಜನೆ ಮಾಡುವುದರಿಂದ ಕರುಳಿನಲ್ಲಿ ಸಮಸ್ಯೆ ಉಂಟಾಗುತ್ತದೆ. ಇದರಿಂದ ದೇಹದಲ್ಲಿ ತ್ಯಾಜ್ಯ, ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು ಅನುಭವಿಸಬೇಕಾಗುತ್ತದೆ.

ಕರುಳಿನ ಚಲನೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಲು ತಜ್ಞರ ಸಲಹೆಗಳು

ನವಿ ಮುಂಬೈನ ವಾಶಿಯಲ್ಲಿರುವ ನ್ಯೂಇರಾ ಆಸ್ಪತ್ರೆಗಳ ಕನ್ಸಲ್ಟೆಂಟ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಓಸ್ಮಾನ್ ಮಾಪ್ಕರ್ ಅವರ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ನಿಯಮಿತವಾಗಿ ಮಲವಿಸರ್ಜನೆ ಮಾಡಿ, ನಂತರ ನೀರನ್ನು ಕುಡಿಯಿರಿ ಇದು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಹಾಗೆಯೇ ಫೈಬರ್​ನಿಂದ  ಸಮೃದ್ಧವಾಗಿರುವ ಆಹಾರಗಳಾದ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಬೀಜಗಳನ್ನು ಸೇವಿಸಲು ಪ್ರಯತ್ನಿಸಿ. ಇದು ನಿದ್ರೆಯನ್ನು ಬಲಪಡಿಸುವುದರ ಜೊತೆಗೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ತಿಳಿಸಿದ್ದಾರೆ.
ರಾತ್ರಿ ಸಮಯದಲ್ಲಿ ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಯ ಮೇಲೆ ಪರಿಣಾಮ ಬೀರುವಂತಹ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಬೇಕು. ಪ್ರತಿದಿನ 45 ನಿಮಿಷಗಳ ಕಾಲ ತಪ್ಪದೆ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇದು ಯೋಗ ಮತ್ತು ಧ್ಯಾನ ಮಾಡುವ ಮೂಲಕ ಒತ್ತಡವನ್ನು ನಿಯಂತ್ರಿಸಿಕೊಳ್ಳಬಹುದು. ನಿಮ್ಮ ಮಲವಿಸರ್ಜನೆಯ ಸಮಯವು ಇದ್ದಕ್ಕಿದ್ದಂತೆ ಬದಲಾದರೆ, ನೋವಿನಿಂದ ಕೂಡಿದ್ದರೆ ಅಥವಾ ಮಲಬದ್ಧತೆ, ಉಬ್ಬುವುದು ಅಥವಾ ರಕ್ತದೊಂದಿಗೆ ಇದ್ದರೆ, ತಕ್ಷಣ ತಜ್ಞರನ್ನು ಭೇಟಿ ಮಾಡಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net