ನಡಿಗೆಯಲ್ಲಿ ಅಸ್ಥಿರತೆ ಕಾಣಿಸಿಕೊಳ್ಳುತ್ತಿದೆಯೇ? ನಿರ್ಲಕ್ಷ್ಯ ಬೇಡ, ಇದು ಗಂಭೀರ ಅನಾರೋಗ್ಯದ ಮುನ್ಸೂಚನೆ ಇರಬಹುದು! Walking

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Walking: ನಡೆಯುವುದನ್ನು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ, ಕ್ರಮೇಣ ನಡೆದಂತೆ ಕಾಲುಗಳು ಅಲುಗಾಡುವುದು, ದಣಿದಂತೆ ಭಾಸವಾಗಲು ಪ್ರಾರಂಭಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ವಯಸ್ಸಾದವರಿಗಿಂತಲೂ ವಯಸ್ಕರಲ್ಲಿ ಈ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಿದ್ದರೆ, ಆ ಕಾರಣಗಳು ಏನು ಎಂದು ನೋಡೋಣ ಬನ್ನಿ...

1.ವಿಟಮಿನ್ ಬಿ 12 ಕೊರತೆ

ವಿಟಮಿನ್ ಬಿ12 ಕೊರತೆ ಎಂದರೆ ದೇಹದಲ್ಲಿ ವಿಟಮಿನ್ ಬಿ12 ಅಗತ್ಯ ಪ್ರಮಾಣಕ್ಕಿಂತ ಕಡಿಮೆಯಾಗಿರುವ ಸ್ಥಿತಿ. ಇದು ರಕ್ತಹೀನತೆ , ನರಗಳ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದಾಗ್ಯೂ, ನೀವು ನಡೆಯಲು ಪ್ರಾರಂಭಿಸಿದಾಗ ಕಾಲುಗಳು ಆಯಾಸವನ್ನು ಹೊಂದಿದರೆ, ಅದು ವಿಟಮಿನ್ ಬಿ 12 ಕೊರತೆಯು ಕಾಲುಗಳಲ್ಲಿನ ನರಗಳಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ. ಇದರಿಂದ ಕಾಲುಗಳಲ್ಲಿ ನೋವುಂಟಾಗುತ್ತದೆ.

2. ಪೆರಿಫೆರಲ್ ಆರ್ಟರಿ ಡಿಸೀಸ್ (PAD)

ಈ ತೊಂದರೆಯು ಕಾಲುಗಳಲ್ಲಿರುವ ಅಪಧಮನಿಗಳಲ್ಲಿ ಕೊಬ್ಬಿನ ನಿಕ್ಷೇಪಗಳು ನಿರ್ಮಾಣವಾಗಿ ರಕ್ತ ಹರಿವನ್ನು ತಡೆಯುತ್ತದೆ. ಇದರಿಂದ ನೀವು ಓಡಾಡುವಾಗ ಸ್ನಾಯುಗಳಿಗೆ ಸಾಕಷ್ಟು ರಕ್ತ ಸಿಗದಿದ್ದಾಗ, ನಿಮ್ಮ ಕಾಲುಗಳಲ್ಲಿ ನೋವಾಗುವುದು, ಊದುವುದು, ಜುಮ್ಮೆನಿಸುವುದು ಅನುಭವಿಸುತ್ತಾರೆ. ನೀವು ವಿಶ್ರಾಂತಿ ಪಡೆದಾಗ ಈ ನೋವು ಮಾಯವಾಗುತ್ತದೆ.

3. ಮಧುಮೇಹ ಮತ್ತು ನರಗಳ ಕಾಯಿಲೆ

ದೀರ್ಘಕಾಲದವರೆಗೆ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಸ್ವಲ್ಪ ದೂರ ನಡೆದರೂ ಕೂಡಾ ನರಗಳ ನೋವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಇದು ಅವರ ಪಾದಗಳಲ್ಲಿ ನರಗಳಿಗೆ ಹಾನಿಯಾಗುವ ಅಪಾಯವನ್ನು ಹೊಂದಿರುತ್ತಾರೆ. ಇದರಿಂದ ನಡೆಯುವಾಗ ಅವರ ಕಾಲುಗಳು ಸಮತೋಲನವನ್ನು ಕಳೆದುಕೊಳ್ಳುತ್ತವೆ. ಇದರಿಂದ ಕಾಲುಗಳು ನಡುಗಲು ಪ್ರಾರಂಭಿಸುತ್ತವೆ.

4. ಸ್ನಾಯುಗಳ ಆಯಾಸ/ದೌರ್ಬಲ್ಯ

ದೇಹದಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ನಂತಹ ಎಲೆಕ್ಟ್ರೋಲೈಟ್‌ಗಳ ಕೊರತೆಗಳು ಇದ್ದರೆ, ಸ್ನಾಯುಗಳು ಬೇಗನೆ ದುರ್ಬಲಗೊಳ್ಳುತ್ತವೆ. ಈ ಸಮಯದಲ್ಲಿ ದೇಹವು ನೀರನ್ನು ದೇಹಕ್ಕೆ ಸೇರಿಸಿಕೊಳ್ಳುವುದಿಲ್ಲ. ಈ ಕಾರಣಗಳಿಂದ ಕಾಲುಗಳಲ್ಲಿ ನೋವು ಉಂಟಾಗುತ್ತದೆ.

5. ಸ್ಪೈನಲ್ ಸ್ಟೆನೋಸಿಸ್

ಸ್ಪೈನಲ್ ಸ್ಟೆನೋಸಿಸ್ ಬೆನ್ನುಹುರಿ ಹಾದುಹೋಗುವ ಬೆನ್ನುಮೂಳೆಯಲ್ಲಿನ ಜಾಗವು ಕಿರಿದಾಗುವ ಸ್ಥಿತಿಯಾಗಿದ್ದು, ನರಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದರಿಂದ ನಡೆಯುವಾಗ ಕಾಲುಗಳಲ್ಲಿ ಜುಮ್ಮೆನಿಸುವಿಕೆ ಮತ್ತು ತೀವ್ರ ನೋವು ಉಂಟಾಗುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net