ನಿಮ್ಮ ಕಾಲುಗಳಲ್ಲಿ ಈ ಲಕ್ಷಣಗಳಿವೆಯೇ? ಕೂಡಲೇ ಎಚ್ಚೆತ್ತುಕೊಳ್ಳಿ, ಇಲ್ಲದಿದ್ದರೆ ಕಿಡ್ನಿ ಮತ್ತು ಹೃದಯದ ಸಮಸ್ಯೆಗೆ ತುತ್ತಾಗುವಿರಿ! Swelling legs

Swelling legs ಸಾಂದರ್ಭಿಕ ಚಿತ್ರ
Swelling legs ಸಾಂದರ್ಭಿಕ ಚಿತ್ರ
Published on
Swelling legs: ನಮ್ಮ ದೇಹದ ಭಾಗಗಳು ಪರಸ್ಪರ ಸಂಬಂಧ ಹೊಂದಿರುವುದರಿಂದ, ಕೆಲವು ಲಕ್ಷಣಗಳು ಬೇರೆಡೆ ಕಾಣಿಸಿಕೊಳ್ಳುತ್ತದೆ. ಪಾದಗಳಲ್ಲಾಗುವ ಕೆಲವೊಂದು ಬದಲಾವಣೆಗಳು ಕಾಯಿಲೆಗಳ ಆರಂಭಿಕ ಚಿಹ್ನೆಗಳನ್ನು ಗುರುತಿಸಬಹುದು. ಈ ಲಕ್ಷಣಗಳನ್ನು ಮೊದಲೇ ಗುರುತಿಸಿವುದರಿಂದ ದೇಹದಲ್ಲಾಗುವ ಗಂಭೀರ ತೊಡಕುಗಳನ್ನು ತಡೆಯಲು ಸಹಾಯವಾಗುತ್ತದೆ. ಹಾಗಿದ್ದರೆ, ಆ ತೊಂದರೆಗಳು ಏನು ಎಂದು ನೋಡೋಣ ಬನ್ನಿ...

1. ಕಾಲುಗಳಲ್ಲಿ ಊತ

ನಿಮ್ಮ ಪಾದಗಳು ಮತ್ತು ಕಣಕಾಲುಗಳಲ್ಲಿ ದಿಢೀರ್​ ಊತ ಕಾಣಿಸಿಕೊಂಡರೆ, ಅದನ್ನು ಹಗುರವಾಗಿ ಪರಿಗಣಿಸಬೇಡಿ. ಇದು ದೇಹದ ವಿವಿಧ ಅಂಗಗಳಲ್ಲಿನ ಸಮಸ್ಯೆಗಳಿಂದ ಉಂಟಾಗಬಹುದು. ನಿಮ್ಮ ದೇಹದ ರಕ್ತದ ಹರಿವು ಚೆನ್ನಾಗಿಲ್ಲದಿದ್ದರೆ, ದೇಹದ ಅಂಗಾಂಶಗಳಲ್ಲಿ ದ್ರವವು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಈ ಸ್ಥಿತಿಯನ್ನು ಎಡಿಮಾ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಹೆಚ್ಚಾಗುತ್ತಿದ್ದಂತೆಯೇ, ಹೃದಯದ ವೈಫಲ್ಯಕ್ಕೆ ಕಾರಣವಾಗಬಹುದು. ಆದಾಗ್ಯೂ, ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯು ಮೂತ್ರಪಿಂಡದ ಸಮಸ್ಯೆಯನ್ನು ಉಂಟು ಮಾಡಬಹುದು. 
ನಿಮ್ಮ ಕಾಲಿನ ಊತವು ಇದ್ದಕ್ಕಿದ್ದಂತೆ ಹೆಚ್ಚಾಗಲು ಪ್ರಾರಂಭಿಸಿದರೆ, ನೀವು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲದಿದ್ದರೆ, ಇದು ಉಸಿರಾಟದ ತೊಂದರೆ, ಎದೆ ಬಿಗಿಯುವಂತಹ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.

2. ತಣ್ಣನೆಯ ಪಾದಗಳು 

ಚಳಿಗಾಲದಲ್ಲಿ ಚಳಿ ಅನಿಸುವುದು ಸಹಜ. ಆದರೆ ಬೆಚ್ಚಗಿನ ಬಟ್ಟೆಗಳನ್ನು ಧರಿಸಿದರೂ, ಪಾದಗಳು ತಣ್ಣಗಾಗುವುದರಿಂದ ಇದರ ಬಗ್ಗೆ ಜಾಗೃತಿ ವಹಿಸುವುದು ಉತ್ತಮ. ಏಕೆಂದರೆ, ಇದು ಬಾಹ್ಯ ಅಪಧಮನಿ ಕಾಯಿಲೆಯ ಸಂಕೇತವಾಗಿರಬಹುದು. ಈ ಸಮಸ್ಯೆಯು ನಿಮ್ಮ ಕಾಲುಗಳ ರಕ್ತನಾಳಗಳಲ್ಲಿ ಪ್ಲೇಕ್​ ನಿರ್ಮಿಸಿ, ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಈ ಸಮಸ್ಯೆಯಿಂದ ಕಾಲುಗಳಿಗೆ ಆಮ್ಲಜನಕ ದೊರೆಯುವುದಿಲ್ಲ. ಈ ಸಮಸ್ಯೆಯನ್ನು ನಿರ್ಲಕ್ಷಿಸುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುಗಳು ಸಂಭವಿಸುತ್ತದೆ. ಹಾಗಾಗಿ ಈ ಲಕ್ಷಣ ಕಂಡುಬಂದರೆ ನಿರ್ಲಕ್ಷಿಸದೆ ವೈದ್ಯರ ಬಳಿ ಹೋಗುವುದು ಉತ್ತಮ.

3. ರಾತ್ರಿಯಲ್ಲಿ ಕಾಲಿನ ಸ್ನಾಯು ನೋವು

ನೀವು ಮಲಗಿದ ನಂತರ ಪಾದಗಳಲ್ಲಿ ಇದ್ದಕ್ಕಿಂದತೆಯೇ ಹಠಾತ್​ ನೋವುಗಳು ಪ್ರಾರಂಭವಾಗುತ್ತದೆ. ಇವು ಕೆಲವೊಮ್ಮೆ ತೀಕ್ಷ್ಣವಾಗಿ ನೋವನ್ನು ಅನುಭವಿಸುವಂತೆ ಮಾಡುತ್ತದೆ. ಕೆಲವೊಮ್ಮೆ ದೀರ್ಘವಾಗಿ ನೋವಾಗಬಹುದು. ಕೆಲವೊಮ್ಮೆ ಕೆಲವು ಸೆಕೆಂಡುಗಳು ಅಥವಾ ನಿಮಿಷಗಳಲ್ಲಿ ಕಡಿಮೆಯಾಗಬಹುದು.
ಆದರೆ ಈ ಸಮಸ್ಯೆಯು ಪ್ರತಿಸಲ ಸಂಭವಿಸಿದರೆ ನಿರ್ಲಕ್ಷಿಸಬೇಡಿ. ಮಧ್ಯಂತರ ಕಾಲು ಸ್ನಾಯು ನೋವು ನಿರ್ಜಲೀಕರಣ, ಔಷಧಿಗಳ ಅಡ್ಡಪರಿಣಾಮಗಳು ಅಥವಾ ಎಲೆಕ್ಟ್ರೋಲೈಟ್ ಅಸಮತೋಲನದಿಂದ ಈ ಸಮಸ್ಯೆ ಉಂಟಾಗಬಹುದು. ಇದರಿಂದ ಮೂತ್ರಪಿಂಡದ ಸಮಸ್ಯೆಗಳು ಸಹ ಕಾರಣಗಳಾಗಿರಬಹುದು. 

4. ಕಾಲುಗಳಲ್ಲಿ ಮರಗಟ್ಟುವಿಕೆ

ಕೆಲವೊಮ್ಮೆ, ದೀರ್ಘಕಾಲ ಕುಳಿತುಕೊಳ್ಳುವುದರಿಂದ ಅಥವಾ ಮಲಗುವುದರಿಂದ ಕಾಲುಗಳಲ್ಲಿ ಮರಗಟ್ಟುವಿಕೆ ಅಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಸಮಸ್ಯೆ ಮುಂದುವರೆದರೆ, ಹಗುರವಾಗಿ ಪರಿಗಣಿಸಬೇಡಿ. ಇದು ಮಧುಮೇಹ ನರರೋಗದ ಲಕ್ಷಣವನ್ನು ನೀಡಬಹುದು. ದೀರ್ಘಕಾಲದ ವರೆಗೆ ಈ ನೋವುಗಳು ಕಾಣಿಸಿಕೊಳ್ಳುವುದರಿಂದ ಮಧುಮೇಹ ಸಮಸ್ಯೆಗೆ ಕಾರಣವಾಗುತ್ತದೆ.
ಹೆಚ್ಚುವರಿಯಾಗಿ, ನೋವು ಕಾಣಿಸಿಕೊಳ್ಳದೇ ಇದ್ದರೂ, ಕಾಲುಗಳಲ್ಲಿ ನಿರಂತರ ಮರಗಟ್ಟುವಿಕೆ ಹೃದಯ ಕಾಯಿಲೆಯ ಸಾಧ್ಯತೆಯನ್ನು ಸೂಚಿಸುತ್ತದೆ. ಮೊದಲೇ ಗುರುತಿಸದಿದ್ದರೆ, ಇದು ಗಾಯಗಳು, ಹುಣ್ಣುಗಳ ಅಪಾಯವನ್ನು ಹೆಚ್ಚಿಸುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net