ನಿದ್ರೆ ಮಾಡುವಾಗ ಕೆಳಕ್ಕೆ ಬಿದ್ದಂತೆ ಭಾಸವಾಗುತ್ತದೆಯೇ..? ಈ ಬಗ್ಗೆ ವಿಜ್ಞಾನ ಹೇಳೋದೇನು..? Sleep

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಹಗಲಿನಲ್ಲಿ ಕೆಲಸ ಮಾಡಿ ದಣಿದ ದೇಹಕ್ಕೆ ರಾತ್ರಿಯ ನಿದ್ರೆ ಅತ್ಯಗತ್ಯ
  • ನವಿಡೀ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ನಿದ್ರೆ ಬೇಕೇ ಬೇಕು
  • ನೀವು ನಿದ್ರೆ ಮಾಡುವಾಗ ಮೇಲಿಂದ ಕೆಳಕ್ಕೆ ಬಿದ್ದಂತೆ ಭಾಸವಾಗಿದಿಯಾ?
  • ಈ ವಿಚಾರದ ಬಗ್ಗೆ ವಿಜ್ಞಾನ ಹೇಳುವುದೇನು?
Sleep: ಹಗಲಿನಲ್ಲಿ ಕೆಲಸ ಮಾಡಿ ದಣಿದ ದೇಹಕ್ಕೆ ರಾತ್ರಿಯ ನಿದ್ರೆ ಅತ್ಯಗತ್ಯ. ದಿನವಿಡೀ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ನಿದ್ರೆ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ದೇಹವು ಶಕ್ತಿಯನ್ನು ಹೊಂದಲು ನಿದ್ರೆ ಬೇಕೇ ಬೇಕು. ಆದರೆ, ಕೆಲವೊಂದು ನಮ್ಮ ಕೆಟ್ಟ ಚಟಗಳಿಂದ ನಾವು ನಿದ್ರೆ ಮಾಡದೇ, ಇಡೀ ದಿನವನ್ನು ಆಲಸ್ಯ ತನದಿಂದ ಕಳೆಯುತ್ತೇವೆ.
ನೀವು ನಿದ್ರೆ ಮಾಡುವಾಗ ಮೇಲಿಂದ ಕೆಳಕ್ಕೆ ಬಿದ್ದಂತೆ ಭಾಸವಾಗಿದಿಯಾ? ನಮ್ಮಲ್ಲಿ ಒಮ್ಮೆಯಾದರೂ ಈ ಸಮಸ್ಯೆಯನ್ನು ಅನುಭವಿಸಿಯೇ ಇರುತ್ತೇವೆ. ಅಥವಾ ಸಂಬಂಧಿಕರು, ಇನ್ನಿತರರಿಂದ ಕೇಳಿರುತ್ತೇವೆ. ಆದರೆ ಇದಕ್ಕೆ ಕಾರಣ ಏನೆಂಬುದು ಆದಷ್ಟು ಜನರಿಗೆ ತಿಳಿದಿರುವುದಿಲ್ಲ. ಆದರೆ, ಇದು ನಿದ್ರಾ ಪಾರ್ಶ್ವವಾಯು, ಸಂಮೋಹನದ ಸೆಳೆತದಿಂದ ಉಂಟಾಗುತ್ತದೆ ಎಂದು ಕೆಲವರು ಹೇಳುತ್ತಾರೆ.
ಕೆಲವೊಮ್ಮೆ ಮಲಗಿದಾಗ ಆಳವಾದ ಗುಂಡಿಗೆ ಬಿದ್ದಂತೆ, ಯಾರೋ ಕೈ ಕಾಲುಗಳನ್ನು ಎಳೆದಂತೆ ಭಾಸವಾಗುತ್ತದೆ. ಆದರೂ ಕೂಡ ಹಾಸಿಗೆಯಿಂದ ಏಳಲು ಸಾಧ್ಯವಾಗುವುದಿಲ್ಲ. ನೀವು ನಿಮ್ಮ ಕಣ್ಣುಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಆದರೆ, ಒಬ್ಬ ವ್ಯಕ್ತಿಯಲ್ಲಿ ಭಯಾನಕ ಸ್ಥಿತಿಯನ್ನು ಸೃಷ್ಟಿಸಲು ಕೆಲವೇ ಸೆಕೆಂಡುಗಳು ಮಾತ್ರ ಬೇಕಾಗುತ್ತದೆ ಎಂಬುದು ಇಲ್ಲಿ ಗಮನಸೆಳೆಯುತ್ತದೆ.
ಈ ಘಟನೆ ಏಕೆ ಸಂಭವಿಸುತ್ತದೆ ಎಂಬುದಕ್ಕೆ ಉತ್ತರ ಇನ್ನೂ ಖಚಿತವಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ, ನಿದ್ರೆಯ ಸಮಸ್ಯೆಗಳು, ಅತಿಯಾದ ನಿದ್ರೆ, ಒತ್ತಡ, ಅಸ್ವಸ್ಥತೆ, ಆತಂಕ ಈ ರೀತಿಯ ಸಮಸ್ಯೆಯನ್ನು ಉಂಟು ಮಾಡುತ್ತದೆ.
ನಿದ್ರೆಯ ಸಮಯದಲ್ಲಿ ಜರ್ಕಿಂಗ್ ಎಂಬ ಸ್ಥಿತಿ ಇದೆ. ಇದು ನಿದ್ರಿಸುವ ಆದಷ್ಟು ಜನರಿಗೆ ತಿಳಿದಿರುವುದಿಲ್ಲ. ಆದರೆ, ಅವರ ಹತ್ತಿರವಿರುವವರಿಗೆ ಇದರ ಬಗ್ಗೆ ತಿಳಿದಿರುತ್ತದೆ. ಈ ಜರ್ಕಿಂಗ್ ಅನ್ನು ಹಿಪ್ನಿಕ್ ಜರ್ಕ್ ಎಂದು ಕರೆಯುತ್ತಾರೆ. ಅಂದರೆ, ಹಠಾತ್ ನಡುಕ ಅಥವಾ ಆಳವಾದ ನಿದ್ರೆಯ ಸಮಯದಲ್ಲಿ ಕೆಳಗೆ ಬೀಳುವ ಭಾವನೆಯನ್ನು ಉಂಟಿ ಮಾಡಿದಾಗ ಈ ಸಮಸ್ಯೆ ಘೋಚರವಾಗುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net