ಒತ್ತಡದಲ್ಲಿ ಉಗುರು ಕಚ್ಚುವ ಅಭ್ಯಾಸವಿದೆಯೇ? ಇದು ಕೇವಲ ಚಟವಲ್ಲ, ಈ ಕಾಯಿಲೆಯ ಲಕ್ಷಣವೂ ಇರಬಹುದು! Nail Biting

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಯೊಬ್ಬ ಮನುಷ್ಯನೂ ಕೂಡಾ ಒಂದಲ್ಲ ಒಂದು ವಿಚಿತ್ರ ಅಭ್ಯಾಸವನ್ನು ಹೊಂದಿರುತ್ತಾರೆ
  • ಕನ್ನಡಿ ಮುಂದೆ ನಿಂತು ಮಾತನಾಡುವುದು, ಹಾಡುವುದು, ಕೈ-ಕಾಲುಗಳನ್ನು ಅಲುಗಾಡಿಸುವುದನ್ನು ಮಾಡುತ್ತಾರೆ
  • ಈ ಅಭ್ಯಾಸವು ಬಾಲ್ಯದಿಂದಲೇ ಪ್ರಾರಂಭವಾಗಿ ಪ್ರೌಢಾವಸ್ಥೆಯವರೆಗೂ ಅನೇಕ ಜನರಲ್ಲಿ ಮುಂದುವರಿಯುತ್ತದೆ
Nail Biting: ಪ್ರತಿಯೊಬ್ಬ ಮನುಷ್ಯನೂ ಕೂಡಾ ಒಂದಲ್ಲ ಒಂದು ವಿಚಿತ್ರ ಅಭ್ಯಾಸವನ್ನು ಹೊಂದಿರುತ್ತಾರೆ. ಕನ್ನಡಿ ಮುಂದೆ ನಿಂತು ಮಾತನಾಡುವುದು, ಹಾಡುವುದು, ಕೈ-ಕಾಲುಗಳನ್ನು ಅಲುಗಾಡಿಸುವುದನ್ನು ಮಾಡುತ್ತಾರೆ. ಆದರೆ, ಅವರಲ್ಲಿ ಎಥೇಚ್ಛವಾಗಿ ಜನರು ಉಗುರು ಕಚ್ಚುವ ಅಭ್ಯಾಸನ್ನು ಮಾಡುತ್ತಾರೆ. ಇದನ್ನು ವೈದ್ಯಕೀಯವಾಗಿ "ಒನಿಕೊಫೇಜಿಯಾ" ಎಂದು ಕರೆಯುತ್ತಾರೆ.
ಈ ಅಭ್ಯಾಸವು ಬಾಲ್ಯದಿಂದಲೇ ಪ್ರಾರಂಭವಾಗಿ ಪ್ರೌಢಾವಸ್ಥೆಯವರೆಗೂ ಅನೇಕ ಜನರಲ್ಲಿ ಮುಂದುವರಿಯುತ್ತದೆ. ಇದು ಮಕ್ಕಳಲ್ಲಿ ಮಾತ್ರವಲ್ಲದೆ ವಯಸ್ಕರಲ್ಲಿಯೂ ಸಹ ತುಂಬಾ ಸಾಮಾನ್ಯವಾಗಿದೆ.
ಉಗುರು ಕಚ್ಚುವ ಅಭ್ಯಾಸದ ಹಿಂದೆ ಹಲವಾರು ರೀತಿಯ ಮಾನಸಿಕ ಮತ್ತು ಭಾವನಾತ್ಮಕ ಕಾರಣಗಳಿರಬಹುದು. ಹೆಚ್ಚಿನ ಜನರು ಒತ್ತಡ ಸಮಯದಲ್ಲಿದ್ದಾಗ ಉಗುರು ಕಚ್ಚುವ ಅಭ್ಯಾಸವನ್ನು ಮಾಡುತ್ತಾರೆ. ಅಂದರೆ ಪರೀಕ್ಷೆಯ ಭಯ, ಕೆಲಸದ ಒತ್ತಡ ಅಥವಾ ಯಾವುದೋ ಆತಂಕಕಾರಿ ವಿಷಯದ ಬಗ್ಗೆ ಯೋಚಿಸುವಾಗ, ಮನಸ್ಸನ್ನು ಶಾಂತಗೊಳಿಸಲು ಮೆದುಳು ಅರಿವಿಲ್ಲದೆಯೇ ಈ ಕ್ರಿಯೆಯನ್ನು ಆರಿಸಿಕೊಳ್ಳುತ್ತದೆ. ಒಂದು ರೀತಿಯಲ್ಲಿ ಹೇಳುವುದಾದರೆ, ಇದು ಒಂದು ರೀತಿಯ 'ಸೆಲ್ಫ್-ಸೂಥಿಂಗ್' ಅಥವಾ ಸ್ವಯಂ ಸಮಾಧಾನಪಡಿಸುವ ತಂತ್ರವಾಗಿದೆ.
ಕೆಲವು ಸಂಶೋಧನೆಗಳು ಪ್ರಕಾರ, ಅಂದುಕೊಂಡ ಕೆಲಸಗಳು ಆಗದೇ ಇದ್ದಾಗ, ಒಂಟಿತನ, ಭಯ, ಹತಾಶೆಯಂತಹ ಸಂದರ್ಭದಲ್ಲಿ ಅವುಗಳಿಂದ ಹೊರ ಬರಲು ಉಗುರು ಕಚ್ಚುವ ಅಭ್ಯಾಸವನ್ನು ಮಾಡುತ್ತಾರೆ.
ಉಗುರು ಕಚ್ಚುವ ಅಭ್ಯಾಸ: ಇದು ಕೇವಲ ಚಟವಲ್ಲ, ಮನಸ್ಸಿನ ಆಳದ ಸಂಕೇತ!
ಮೇಲ್ನೋಟಕ್ಕೆ ಉಗುರು ಕಚ್ಚುವ ಅಭ್ಯಾಸವು ಒಂದು ಕೆಟ್ಟ ಅಭ್ಯಾಸದಂತೆ ಕಂಡರೂ, ವೈದ್ಯಕೀಯ ಮತ್ತು ಮನೋವಿಜ್ಞಾನದ ದೃಷ್ಟಿಕೋನದಲ್ಲಿ ಇದು ವ್ಯಕ್ತಿಯ ಭಾವನಾತ್ಮಕ ಸ್ಥಿತಿಯ ಪ್ರತಿಬಿಂಬವಾಗಿದೆ. ಮೆದುಳು ಖಿನ್ನತೆಯಿಂದ ಬಳಲುತ್ತಿದ್ದಾಗ, ಈ ಅಭ್ಯಾಸವನ್ನು ಮಾಡುವುದರಿಂದ ಮನಸ್ಸು ಹಗುರವಾಗಿ ಚಿಂತೆಗಳನ್ನು ದೂರ ಕಳುಹಿಸುತ್ತದೆ ಎಂದು ಹೇಳಲಾಗುತ್ತದೆ.

ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್

ಉಗುರು ಕಚ್ಚುವುದು ಮಾನಸಿಕ ಅಸ್ವಸ್ಥತೆಗಳೊಂದಿಗೆ ಸಂಬಂಧ ಹೊಂದಿರಬಹುದು. ಜೊತೆಗೆ ಕೆಲವು ಮಾನಸಿಕ ಸ್ಥಿತಿಗಳ ಲಕ್ಷಣವಾಗಿರಬಹುದು. ಇದು ಒಂದು ಒಬ್ಸೆಸಿವ್ ಪಲ್ಸಿವ್ ಡಿಸಾರ್ಡರ್ (OCD) ನೊಂದಿಗೆ ಸಂಬಂಧ ಹೊಂದಿದ್ದು, ಒಬ್ಬ ವ್ಯಕ್ತಿ ಹಲವು ಬಾರಿ ಅದೇ ನಡವಳಿಕೆಯನ್ನು ಪುನರಾವರ್ತಿಸುತ್ತಾನೆ.
ಹೆಚ್ಚಾಗಿ ಮಕ್ಕಳಲ್ಲಿ ಈ ಅಭ್ಯಾಸವು ಗಮನ ಕೊರತೆಯ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ADHD), ಬೇರ್ಪಡುವಿಕೆಯ ಆತಂಕ ಮತ್ತು ಇತರ ನಡವಳಿಕೆಯ ಸಮಸ್ಯೆಗಳೊಂದಿಗೆ ಸಹ ಸಂಬಂಧ ಹೊಂದಿದೆ.

ಯಾವ ಜನರು ಈ ಅಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು?

ಕೆಲಸದಲ್ಲಿ ಪರಿಪೂರ್ಣತೆಗಾಗಿ ಶ್ರಮಿಸುವ ಮತ್ತು ಯಾವಾಗಲೂ ತಮ್ಮ ಕೆಲಸವನ್ನು ಉತ್ತಮವಾಗಿ ಮುಗಿಸಬೇಕು ಎಂಬ ಆತುರತೆ, ಒತ್ತಡಕ್ಕೆ ಒಳಗಾಗುವ ಜನರಲ್ಲಿ ಈ ಅಭ್ಯಾಸವನ್ನು ಕಾಣಬಹುದು. ಅಂತಹ ವ್ಯಕ್ತಿಗಳು ಬೇಗನೆ ಬೇಸರ ಅಥವಾ ವಿಶ್ರಾಂತಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಇದು ದೇಹ-ಕೇಂದ್ರಿತ ಪುನರಾವರ್ತಿತ ನಡವಳಿಕೆಗಳಿಗೆ (BFRBs) ಕಾರಣವಾಗಬಹುದು. ಈ ಸಂದರ್ಭದಲ್ಲಿ, ಉಗುರು ಕಚ್ಚುವುದು ನಿಲ್ಲಿಸಲು ಕಷ್ಟಕರವಾದ ಕಡ್ಡಾಯ ಅಭ್ಯಾಸವಾಗುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net