ಕೋಳಿಗಳಿಗೆ ಹಾರ್ಮೋನ್ ಚುಚ್ಚುಮದ್ದು ನೀಡಲಾಗುತ್ತಿದೆಯೇ? ಈ ಬಗ್ಗೆ ವಿಜ್ಞಾನ ಹೇಳೋದೇನು! ಇಲ್ಲಿದೆ ಅಚ್ಚರಿ ಮಾಹಿತಿ.. Broiler Chicken
ಸಾಂದರ್ಭಿಕ ಚಿತ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಸ್ನಾಯುಗಳು ಬಲಿಷ್ಟವಾಗಲೆಂದು ಕೋಳಿ ಮಾಂಸವನ್ನು ಸೇವಿಸಲು ಇಷ್ಟಪಡುತ್ತಾರೆ
ಅನೇಕ ಕೋಳಿ ಮಾರಾಟಗಾರರು ವೇಗದ ಬೆಳವಣಿಗೆಗೆ ಚುಚ್ಚುಮದ್ದುಗಳನ್ನು ನೀಡುತ್ತಾರೆ ಎಂದು ಹೇಳಲಾಗುತ್ತದೆ
ಕೋಳಿಗಳನ್ನು ನಾವು ಆಹಾರವಾಗಿ ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ? ಅಥವಾ ಹಾನಿಕಾರಿಯೇ?
Broiler Chicken: ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಸ್ನಾಯುಗಳು ಬಲಿಷ್ಟವಾಗಲೆಂದು ಕೋಳಿ ಮಾಂಸವನ್ನು ಸೇವಿಸಲು ಇಷ್ಟಪಡುತ್ತಾರೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿರುವುದು ಮಾತ್ರ ಬ್ರಾಯ್ಲರ್ ಕೋಳಿಗಳು. ಈ ಕೋಳಿಗಳು ಸುಮಾರು 6 ರಿಂದ 8 ವಾರಗಳಲ್ಲಿ ಬೆಳೆಯುತ್ತವೆ ಎಂದು ತಿಳಿದುಬರುತ್ತವೆ.
ಅನೇಕ ಕೋಳಿ ಮಾರಾಟಗಾರರು ವೇಗದ ಬೆಳವಣಿಗೆಗೆ ಚುಚ್ಚುಮದ್ದುಗಳನ್ನು ನೀಡುತ್ತಾರೆ ಎಂದು ಹೇಳಲಾಗುತ್ತದೆ. ಇದರಿಂದ ಸ್ನಾಯುಗಳು ಬೇಗನೆ ಬೆಳೆಯಲಾರಂಭಿಸುತ್ತವೆ. ಹಾಗಿದ್ದರೆ, ಈ ರೀತಿಯ ಕೋಳಿಗಳನ್ನು ನಾವು ಆಹಾರವಾಗಿ ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ? ಅಥವಾ ಹಾನಿಕಾರಿಯೇ? ಎಂದು ನೋಡೋಣ ಬನ್ನಿ...
ಬ್ರಾಯ್ಲರ್ ಕೋಳಿಗಳು ಇಷ್ಟು ವೇಗವಾಗಿ ಹೇಗೆ ಬೆಳೆಯುತ್ತವೆ?
ಬ್ರಾಯ್ಲರ್ ಕೋಳಿಗಳಿಗೆ ಬೆಳವಣಿಗೆಯ ಹಾರ್ಮೋನುಗಳನ್ನು ನೀಡುವುದರಿಂದ ಅವು 5 ರಿಂದ 7 ವಾರದವರೆಗೆ ಬೆಳೆಯುತ್ತವೆ ಎಂದು ಜನರು ಭಾವಿಸುತ್ತಾರೆ. ಆದರೆ, ವಾಸ್ತವವಾಗಿ ಹೇಳುವುದಾದರೆ, ಭಾರತದಲ್ಲಿ ಕೋಳಿಗಳಿಗೆ ಸಿಂಪಡಿಸುವ ಹಾರ್ಮೋನು ಔಷಧಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಪ್ರತಿಯೊಂದು ಕೋಳಿಗಳಿಗೆ ಬೆಳವಣಿಗೆಯ ಹಾರ್ಮೋನುಗಳನ್ನು ಚುಚ್ಚುವುದು ವಾಸ್ತವಿಕವಲ್ಲ.
ಸಂಶೋಧನೆಯ ಪ್ರಕಾರ, ಬ್ರಾಯ್ಲರ್ ಕೋಳಿಗಳ ಈ ತ್ವರಿತ ಬೆಳವಣಿಗೆಯ ಹಿಂದಿನ ಕಾರಣಗಳನ್ನು ವಿವರವಾಗಿ ಚರ್ಚಿಸಲಾಗಿದೆ. ಆಯ್ದ ಸಂತಾನೋತ್ಪತ್ತಿ, ಸರಿಯಾದ ಪೋಷಣೆ ಮತ್ತು ರೋಗ ನಿರ್ವಹಣೆಯಿಂದಾಗಿ ಅವು ವೇಗವಾಗಿ ಬೆಳೆಯುತ್ತವೆ ಎಂದು ಹೇಳಲಾಗುತ್ತದೆ. ಇದರ ಹಿಂದೆ ಯಾವುದೇ ಆನುವಂಶಿಕ ಮಾರ್ಪಾಡು ಅಥವಾ ಹಾರ್ಮೋನುಗಳ ಪಾತ್ರವಿಲ್ಲ.
ದೇಸಿ ಮತ್ತು ಬಾಯ್ಲರ್ ನಡುವಿನ ವ್ಯತ್ಯಾಸವೇನು?
ಸ್ವದೇಶಿ ಕೋಳಿಗಳ ಆನುವಂಶಿಕ ರಚನೆಯು ವಿಭಿನ್ನವಾಗಿದೆ. ಆದಾಗ್ಯೂ, ಅವುಗಳ ಜೀವನಶೈಲಿಯೂ ಕೂಡಾ ವಿಭಿನ್ನ. ಬಾಯ್ಲರ್ ಕೋಳಿಗಳಿಗೆ ನಿರ್ದಿಷ್ಟ ಆಹಾರವನ್ನು ನೀಡುವುದರಿಂದ ಅವು ವೇಗವಾಗಿ ಬೆಳೆಯುತ್ತವೆ. ಅವುಗಳಿಗೆ ಚಲಿಸಲು ಹೆಚ್ಚು ಸ್ಥಳಾವಕಾಶ ನೀಡಲಾಗುವುದಿಲ್ಲ. ಈ ಕಾರಣದಿಂದಾಗಿ, ಅವುಗಳ ಎದೆಯ ಸ್ನಾಯುಗಳು ದೊಡ್ಡದಾಗಿ ಬೆಳೆಯುವುದರ ಜೊತೆಗೆ ಹೆಚ್ಚಿನ ಕೊಬ್ಬನ್ನು ಹೊಂದಿರುತ್ತವೆ.
ಸ್ವದೇಶಿ ಕೋಳಿ ಮಾಂಸವು ತುಲನಾತ್ಮಕವಾಗಿ ಕಡಿಮೆ ಕೊಬ್ಬು ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದರಲ್ಲಿ ಕಬ್ಬಿಣ, ಸತು ಮತ್ತು ವಿಟಮಿನ್ ಬಿ ಕೂಡಾ ಇರುತ್ತದೆ.
ಚಿಕನ್ ಹೇಗೆ ತಿನ್ನಬೇಕು?
ಚಿಕನ್ ಪ್ರಿಯರು ಹೆಚ್ಚಾಗಿ ಡೀಪ್ ಫ್ರೈ ಮಾಡಿದಂತಹ ಆಹಾರವನ್ನು ಸೇವಿಸಬೇಡಿ. ಬದಲಾಗಿ ಗ್ರಿಲ್ ಮಾಡಿ, ಬೇಯಿಸಿದ ಅಥವಾ ಕರಿ ಮಾಡಿ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.
ಏನು ತಿನ್ನಬೇಕು?
ಚಿಕನ್ ತಿನ್ನಲು ಬಯಸುವವರು ಚಿಕನ್ ಬ್ರೆಸ್ಟ್, ಚಿಕನ್ ಲೆಗ್, ಚಿಕನ್ ಲಿವರ್ ಅನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಲ್ಲಿ ಪ್ರೋಟೀನ್, ಸತು, ಕಬ್ಬಿಣಾಂಶ, ವಿಟಮಿನ್ A ಮತ್ತು B12 ಹೇರಳವಾಗಿರುವುದರಿಂದ ದೇಹಕ್ಕೆ ಉತ್ತಮವಾದ ಕೊಬ್ಬುಗಳನ್ನು ನೀಡಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.