ಮಗುವಿಗೆ ಡೈಪರ್ ತೊಡಿಸುವುದರಿಂದ ಮೂತ್ರಪಿಂಡಗಳಿಗೆ ಹಾನಿಯಾಗಬಹುದೇ..? ನೈಜ ಸಂಗತಿ ಹೀಗಿದೆ...Baby Diapers

Baby Diapers ಸಾಂದರ್ಭಿಕ ಚಿತ್ರ
Baby Diapers ಸಾಂದರ್ಭಿಕ ಚಿತ್ರ
Published on
Baby Diapers: ಇಂದಿನ ದಿನಗಳಲ್ಲಿ ಮನೆಯಲ್ಲಿ ಮಗು ಜನಿಸಿದಾಗ, ನವಜಾತ ಶಿಶುವಿನ ಶಾಪಿಂಗ್ ಪಟ್ಟಿಯಲ್ಲಿ ಡೈಪರ್‌ಗಳು ಕಡ್ಡಾಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಡೈಪರ್​ ಧರಿಸುವುದು ಅನಿವಾರ್ಯವಾಗಿದೆ. ವಿಶೇಷವಾಗಿ ಮನೆಯಿಂದ ಹೊರ ಪ್ರಯಾಣ ಮಾಡುವಾಗ, ಹೆಚ್ಚಿನ ಕೆಲಸವಿದ್ದಾಗ ಡೈಪರ್​ನ್ನು ಮಕ್ಕಳಿಗೆ ಧರಿಸುವುದು ಸಾಮಾನ್ಯವಾಗಿ ಬಿಟ್ಟಿದೆ.
ಆದರೆ, ದೀರ್ಘಕಾಲದವರೆಗೆ ಮಗುವಿಗೆ ಡೈಪರ್​ ಧರಿಸುವುದರಿಂದ ಇದು ಮೂತ್ರಪಿಂಡಗಳಿಗೆ ಹಾನಿಯಾಗಬಹುದೇ? ಎಂಬ ಪ್ರಶ್ನೆ ಹಲವರಲ್ಲಿ ಗೊಂದಲ ಉಂಟು ಮಾಡಿದೆ. ಹಾಗಿದ್ದರೆ, ಈ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ ತಪ್ಪು ಮಾಹಿತಿಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಈ ಹೇಳಿಕೆಯ ಹಿಂದಿನ ಸತ್ಯವೇನು ಎಂದು ತಿಳಿಯೋಣ....
ಮಕ್ಕಳಿಗೆ ಡೈಪರ್ ಧರಿಸುವುದರಿಂದ ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ ಎಂಬುದು ಶುದ್ಧ ಸುಳ್ಳು ಎಂದು ವೈದ್ಯರು ಹೇಳಿಕೆ ನೀಡಿದ್ದಾರೆ. ಇನ್ನು ನಿಮ್ಮ ಮಗುವಿನ ಮೇಲೆ ಯಾವುದೇ ರೀತಿಯ ಬಟ್ಟೆ ಹಾಗೂ ಡೈಪರ್​ ಧರಿಸುವುದರಿಂದ, ಯಾವುದೇ ಸಂದರ್ಭದಲ್ಲೂ ಅದರ ಸೋಂಕು ಮೂತ್ರಪಿಂಡಗಳನ್ನು ತಲುಪಲು ಸಾಧ್ಯವಿಲ್ಲ. ಆದ್ದರಿಂದ, ಈ ಹಕ್ಕು ಆಧಾರರಹಿತವಾಗಿದೆ.

ಮೂತ್ರಪಿಂಡಗಳು ಹೇಗೆ ಹಾನಿಗೊಳಗಾಗಬಹುದು?

ಡಯಾಪರ್ ರಾಶ್ : ಒದ್ದೆಯಾದ ಡೈಪರ್‌ಗಳನ್ನು ದೀರ್ಘಕಾಲ ಬಳಸುವುದರಿಂದ ಚರ್ಮ ಕೆಂಪಾಗುವುದು, ಕಿರಿಕಿರಿ ಅನುಭವ ಹಾಗೂ ಹಾನಿಯಾಗುವುದು ಹೆಚ್ಚಾಗುತ್ತದೆ. ಆದಾಗ್ಯೂ, ಇದು ಮೂತ್ರಪಿಂಡದ ಸಮಸ್ಯೆಯಲ್ಲ, ಚರ್ಮದ ಸಮಸ್ಯೆಯಾಗಿರುತ್ತದೆ.
ಮೂತ್ರನಾಳದ ಸೋಂಕು (UTI): ಮೂತ್ರಮಾರ್ಗ ಸೋಂಕು (UTI) ಮೇಲೆ ಹರಡಿ ಪೈಲೋನೆಫ್ರೈಟಿಸ್ ಉಂಟುಮಾಡುತ್ತವೆ. ಇದರಿಂದ ಸಂಪೂರ್ಣವಾಗಿ ಬ್ಯಾಕ್ಟೀರಿಯಾದ ಸೋಂಕು ಮತ್ತು ಇದರ ಲಕ್ಷಣಗಳು ಮಕ್ಕಳಲ್ಲಿ ವಯಸ್ಸಿಗೆ ಅನುಗುಣವಾಗಿ ಬದಲಾಗಲು ಪ್ರಾರಂಭವಾಗುತ್ತದೆ.

ಡೈಪರ್‌ ಬಳಸುವುದು ಹೇಗೆ?

* ಪ್ರತಿ 3-4 ಗಂಟೆಗಳಿಗೊಮ್ಮೆ ನಿಮ್ಮ ಮಗುವಿನ ಡಯಾಪರ್ ಬದಲಾಯಿಸಬೇಕು.
* ಮಗು ಚಿಕ್ಕದಾಗಿದ್ದರೆ, ಪ್ರತಿ 2 ಗಂಟೆಗಳಿಗೊಮ್ಮೆ ಡೈಪರ್ ಬದಲಾಯಿಸುವುದು ಉತ್ತಮ
* ರಾತ್ರಿಯಲ್ಲಿ ಸೂಪರ್ ಹೀರಿಕೊಳ್ಳುವ ಡೈಪರ್‌ಗಳು ಮತ್ತು ಹಗಲಿನಲ್ಲಿ ಬಟ್ಟೆಯ ಡೈಪರ್‌ಗಳು.
* ಯಾವುದೇ ಸಮಸ್ಯೆಗೆ ಮೂಲ ಕಾರಣ ತೇವಾಂಶ ಹಾಗಾಗಿ ಪ್ರತಿ ಬಾರಿ ಡಯಾಪರ್
ಬದಲಾಯಿಸುವ ಮುನ್ನ ಚರ್ಮವನ್ನು ಒಣಗಲು ಬಿಡಬೇಕು.
* ಆಗ್ಗಾಗ ಮಗುವಿಗೆ ಡಯಾಪರ್ ರಾಶ್ ಕ್ರೀಮ್ ಅಥವಾ ತೆಂಗಿನ ಎಣ್ಣೆಯನ್ನು ಬಳಸಿ.
* ಇದು ಮಗುವಿನ ಚರ್ಮದ ಮೇಲೆ ರಕ್ಷಣಾತ್ಮಕ ಪದರವನ್ನು ಸೃಷ್ಟಿಸುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net