ಈ ನೈಸರ್ಗಿಕ ಆಹಾರಗಳನ್ನು ಸೇವಿಸುವ ಮೂಲಕ ವಿಟಮಿನ್ ಡಿ ಕೊರತೆಗೆ ಗುಡ್ ಬೈ ಹೇಳಿ! Vitamin D

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Vitamin D: ವಿಟಮಿನ್ ಡಿ ನಮ್ಮ ಆರೋಗ್ಯಕ್ಕೆ ತುಂಬಾ ಅವಶ್ಯಕ. ಸಾಮಾನ್ಯವಾಗಿ ಸೂರ್ಯನ ಬೆಳಕಿನಿಂದ ಮಾತ್ರ ವಿಟಮಿನ್ ಡಿ ಪಡೆಯುತ್ತೇವೆ ಎಂದು ಭಾವಿಸುತ್ತೇವೆ. ಆದಾಗ್ಯೂ, ಹೆಚ್ಚಿನ ಒತ್ತಡ, ಕೆಲಸ ಸಂದರ್ಭಗಳಲ್ಲಿ ಹೆಚ್ಚಾಗಿ ಸೂರ್ಯನ ಬೆಳಕಿನಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡುತ್ತೇವೆ. ಈ ಕಾರಣಕ್ಕಾಗಿ ಹಲವಾರು ಜನರು ವಿಟಮಿನ್​ ಡಿ ಪೂರಕಗಳನ್ನು ತೆಗೆದುಕೊಳ್ಳುತ್ತಾರೆ.
ನಿಮಗೆ ಗೊತ್ತಾ? ಕೆಲವು ಸಾಮಾನ್ಯ ಆಹಾರಗಳು ಗಮನಾರ್ಹ ಪ್ರಮಾಣದ ವಿಟಮಿನ್​ ಡಿಯನ್ನು ಒದಗಿಸುತ್ತವೆ. ಈ ಆಹಾರಗಳು ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ಖನಿಜಗಳನ್ನು ಸಹ ಒಳಗೊಂಡಿದ್ದು, ದೇಹಕ್ಕೆ ಬೇಕಾದ ವಿಟಮಿನ್​ಗಳನ್ನು ಪೂರೈಕೆ ಮಾಡುತ್ತದೆ.

ಕೊಬ್ಬಿನ ಮೀನು

ಕೊಬ್ಬಿನ ಮೀನುಗಳನ್ನು ವಿಟಮಿನ್ ಡಿ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. 100 ಗ್ರಾಂ ಕೊಬ್ಬಿನ ಮೀನು ಸರಿಸುಮಾರು 400ರಿಂದ 600 ವಿಟಮಿನ್​ ಡಿಯನ್ನು ಒದಗಿಸುತ್ತದೆ. ಇದು ಕಡಿಮೆ ಪ್ರಮಾಣದಲ್ಲಿ ಸಮಾನವಾಗಿರುತ್ತದೆ. ಈ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಸಹ ಹೊಂದಿರುತ್ತದೆ. ಇದರ ಸೇವನೆಯು ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಬೇಕಾದ ವಿಟಮಿನ್​ ಡಿ ಪೂರೈಕೆಯನ್ನು ಮಾಡುತ್ತದೆ.

ಮೊಟ್ಟೆಯ ಹಳದಿ ಲೋಳೆ

ಮೊಟ್ಟೆಯಲ್ಲಿರುವ ಹಳದಿ ಲೋಳೆಯು ವಿಟಮಿನ್​ ಡಿಯನ್ನು ಹೊಂದಿರುತ್ತದೆ. ಒಂದು ಸಂಪೂರ್ಣ ಮೊಟ್ಟೆಯಲ್ಲಿ ಸುಮಾರು 40–50 IU ವಿಟಮಿನ್ ಡಿ ಇರುತ್ತದೆ. ಮೊಟ್ಟೆಯ ಹಳದಿ ಲೋಳೆಯಲ್ಲಿರುವ ಆರೋಗ್ಯಕರ ಕೊಬ್ಬುಗಳು ವಿಟಮಿನ್ ಡಿ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ.

ಅಣಬೆಗಳು

ನಮ್ಮ ಚರ್ಮವನ್ನು ಸೂರ್ಯನ ಬೆಳಕಿನಿಂದ ವಿಟಮಿನ್​ ಡಿ ಉತ್ಪಾದನೆಯನ್ನು ಹೇಗೆ ಹೆಚ್ಚಿಸುತ್ತವೆಯೋ, ಅದೇ ರೀತಿ ಸೂರ್ಯನ ಕಿರಣಗಳನ್ನು ಪಡೆದು ಬೆಳದ ಅಣಬೆಗಳಲ್ಲಿ ವಿಟಮಿನ್​ ಡಿ ಹೇರಳವಾಗಿರುತ್ತದೆ. ಒಂದು ತುಂಡು ಅಣಬೆಗಳಲ್ಲಿ 200–400 IU ವಿಟಮಿನ್ ಡಿ ಅನ್ನು ಒದಗಿಸುತ್ತದೆ. ಇದು ಸಸ್ಯಹಾರಿಗಳು ಸೂಕ್ತವಾಗಿದೆ.

ಬಲವರ್ಧಿತ ಹಾಲು ಮತ್ತು ಮೊಸರು

ಪ್ರತಿನಿತ್ಯ ಹಾಲು ಮತ್ತು ಮೊಸರನ್ನು ಸೇವಿಸುವುದರಿಂದ ದೇಹಕ್ಕೆ ನೇರವಾಗಿ ವಿಟಮಿನ್​ ಡಿ ಸಿಗುತ್ತದೆ. ಪ್ರತಿ ಕಪ್​ನಲ್ಲಿ ಸುಮಾರು 100–120 IU ವಿಟಮಿನ್ ಡಿ ಅನ್ನು ಹೊಂದಿರುತ್ತದೆ. ಪ್ರತಿದಿನ ಇದನ್ನು ಸೇವಿಸಿದಾಗ ಪ್ರಯೋಜನಗಳು ಹೆಚ್ಚಾಗುವುದರ ಜೊತೆಗೆ ದೇಹಕ್ಕೆ ಬೇಕಾದ ಪೂರೈಕೆಗಳು ಕೂಡಾ ಸಿಗಲಾರಂಭಿಸುತ್ತವೆ.
ಈ ಸುದ್ದಿ ಸಾಮಾನ್ಯ ಮಾಹಿತಿಗಾಗಿ ಮಾತ್ರ. ವಿಟಮಿನ್ ಡಿ ಅವಶ್ಯಕತೆಗಳು ವಯಸ್ಸು, ಆರೋಗ್ಯ ಮತ್ತು ವೈದ್ಯಕೀಯ ಸ್ಥಿತಿಗಳನ್ನು ಅವಲಂಬಿಸಿ ಬದಲಾಗುತ್ತವೆ. ಹಾಗಾಗಿ ನಿಮಗೆ ವಿಟಿಮಿನ್​​ ಡಿ ಕೊರತೆ ಹೆಚ್ಚಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net