ಮಳೆಗಾಲದಲ್ಲಿ ಕಾಡುವ ‘ಮದ್ರಾಸ್ ಐ’: ಕಣ್ಣಿನ ಸೋಂಕಿನಿಂದ ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ..Conjunctivitis Eyes

 Conjunctivitis eyes during monsoon
Conjunctivitis eyes during monsoon
Published on

ಪ್ರಮುಖ ಮುಖ್ಯಾಂಶಗಳು

  • ಮೋಡ, ಮಳೆ, ಬಿಸಿಲಿನಿಂದ ಹರಡುತ್ತಿದೆ ಕಣ್ಣಿನ ಸೋಂಕು ಮದ್ರಾಸ್​ ಐ
  • ಕಣ್ಣು ಕೆಂಪಾಗುವುದು, ನೀರು ಬರುವುದು ಮುಖ್ಯ ಲಕ್ಷಣ, ಮಕ್ಕಳಲ್ಲಿ ಇದು ಬೇಗನೆ ಹರಡುತ್ತದೆ.
  • ಕಣ್ಣು ಕೆಂಪಾದ ತಕ್ಷಣ ಸ್ವಂತವಾಗಿ ಡ್ರಾಪ್ಸ್ ಹಾಕಿಕೊಳ್ಳಬೇಡಿ, ವೈದ್ಯರ ಸಲಹೆ ಕಡ್ಡಾಯ
 Conjunctivitis eyes during monsoon: ಬಿಸಿಲು, ಮೋಡ ಕವಿದ ವಾತಾವರಣ ಹಾಗೂ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮದ್ರಾಸ್​​ ಐ ಸೋಂಕನ್ನು ಪಿಂಕ್​ ಐ ಎಂದು ಸಹ ಕರೆಯಲಾಗುತ್ತದೆ. ಕಣ್ಣಿನ ಬಿಳಿ ಭಾಗದಲ್ಲಿ ಉರಿಯೂತ ಉಂಟಾಗಿ, ಕಣ್ಣಿನ ಪೊರೆಯು ಉಬ್ಬಿ, ರಕ್ತನಾಳಗಳು ಹಿಗ್ಗುತ್ತವೆ, ಆನಂತರ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದು ತೇವ ಆದ್ರತೆ ವಾತಾವರಣದಲ್ಲಿ ವೈರಸ್​​ಗಳು ಸುಲಭವಾಗಿ ಹರಡುವುದರಿಂದ ಈ ಸಮಸ್ಯೆ  ದೇಶದಾದ್ಯಂತ ಕಾಣಿಸಿಕೊಳ್ಳುತ್ತದೆ.
ಹಿರಿಯರು ಈ ಬಗ್ಗೆ ಸರಿಯಾದ ಕ್ರಮದಲ್ಲಿ ಕಣ್ಣನ್ನು ರಕ್ಷಿಸಿಕೊಂಡರೆ, ಮಕ್ಕಳು ಕಣ್ಣು ಉಜ್ಜುವುದು, ಕಣ್ಣುಗಳನ್ನು ಮುಟ್ಟಿಕೊಂಡು ಮತ್ತಷ್ಟು ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಮದ್ರಾಸ್​ ಐ ಕಾಣಿಸಿಕೊಳ್ಳುವ ಮುನ್ನ ಕೊಡುವ ಸೂಚನೆ ಏನು, ಕಣ್ಣು ಸುರಕ್ಷಿತವಾಗಿರಿಸಲು ತೆಗೆದುಕೊಳ್ಳನೇಕಾದ ಮುಂಜಾಗ್ರತಾ ಕ್ರಮ ಏನು ಎನ್ನುವುದು ಈ ಲೇಖನದಲ್ಲಿ ಇದೆ.

ಮದ್ರಾಸ್ ಐ ಗಂಭೀರ ಸಮಸ್ಯೆನಾ?

ಕಣ್ಣಿನ ಬಿಳಿ ಭಾಗದಲ್ಲಿ ಕಾಣಿಸಿಕೊಳ್ಳುವ ಉರಿಯೂತವು, ಕಣ್ಣಿನ ಪೊರೆಯನ್ನು ಉಬ್ಬುವಂತೆ  ಮಾಡಿ, ರಕ್ತ ನಾಳವನ್ನು ಹಿಗ್ಗುವಂತೆ ಮಾಡುತ್ತದೆ. ಆನಂತೆ ಕಣ್ಣು ಬಾವು ಬಂದಂತೆ ಕಾಣುತ್ತದೆ. ಕಣ್ಣಿನ ಒಳಗೆ ಕೆಂಪಾಗಿ ಕಾಣುತ್ತದೆ, ಇದು ಗಂಭೀರ ಸಮಸ್ಯೆ ಏನಲ್ಲ. ಆದರೆ,  ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾಯಿಲೆಯಾಗಿದೆ. ಇದು ಸಣ್ಣವರಿಂದ ಹಿಡಿದೂ ದೊಡ್ಡವರವರೆಗೂ ಹರಡುವ ಕಾಯಿಲೆಯಾಗಿದೆ.

ಮದ್ರಾಸ್​​ ಐನ ಗುಣ ಲಕ್ಷಣವೇನು? 

ಕಣ್ಣು ಕೆಂಪಾಗುವುದು, ಅತಿಯಾಗಿ ನೀರು ಸೋರುವುದು, ತುರಿಕೆ, ಕಣ್ಣಿನ ರೆಪ್ಪೆ ಊದುವುದು. ಅಂಟು ದ್ರವ ಸೋರುವುದು. ಬೆಳಕು ನೋಡಲು ಕಷ್ಟವಾಗುವುದು ಮುನ್ಸೂಚನೆಯಾಗಿದೆ.

  ಕಣ್ಣು ರಕ್ಷಣೆ ಹೇಗೆ?

  • ಕೈಗಳನ್ನು  ಸ್ವಚ್ಛವಾಗಿ ತೊಳೆದುಕೊಳ್ಳುವುದು. ಆಗಾಗ್ಗೆ ಕಣ್ಣನ್ನು ಕೈಗಳಿಂದ ಮುಟ್ಟಿಕೊಳ್ಳುವುದನ್ನು ತಪ್ಪಿಸುವುದು. ಕಣ್ಣನ್ನು ಉಜ್ಜಿಕೊಳ್ಳುವುದನ್ನು ನಿಲ್ಲಿಸಬೇಕು.
  • ಐಸ್​​ ಕ್ಯೂಬ್​, ಬಟ್ಟೆ ಇಡಿ
ಮದ್ರಾಸ್​ ಐ ಕಾಣಿಸಿಕೊಂಡಾಗ ಕಣ್ಣಿನ ಉರಿ ಕಡಿಮೆ ಮಾಡಲು. ಬಟ್ಟೆ ಹಾಕಿ ಅದರ ಮೇಲೆ ಐಸ್​​ ಕ್ಯೂಬ್​ ಇಟ್ಟುಕೊಳ್ಳಿ. ಇದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಆದರೆ, ನೆನಪಿಡಿ ಒಮ್ಮೆ ಬಳಕೆ ಮಾಡಿದ ಬಟ್ಟೆಯನ್ನೇ ಪ್ರತಿಬಾರಿ ಬಳಕೆ ಮಾಡಬೇಡಿ. 

ನಿಮ್ಮ ವಸ್ತು ಕೊಡಬೇಡಿ

  • ನಿಮಗೆ ಕಣ್ಣಿನ ಸೋಂಕು ಕಾಣಿಸಿಕೊಂಡಿದ್ದರೆ ನೀವು ಬಳಕೆ ಮಾಡುವ ಟವಲ್​, ಪಿಲ್ಲೋ ಕವರ್​​​, ಬಟ್ಟೆ ಕಣ್ಣಿನ ಮೇಕಪ್​ ವಸ್ತು, ಕನ್ನಡಕವನ್ನು ಬೇರೆಯವರಿಗೆ ಕೊಡಬೇಡಿ. ಇದರಿಂದ ಸೋಂಕು ಹರಡುವುದನ್ನು ತಪ್ಪಿಸಬಹುದು.

ಮೇಕಪ್​ ಸೆಟ್ ಬದಲಿಸಿ

  • ಕಣ್ಣಿನ ಸೋಂಕಿನಿಂದ ಮುಕ್ತಿ ಪಡೆದ ನಂತರ ನಿಮ್ಮ ಬಳಿ ಇರುವ ಹಳೆಯ ಮೇಕಪ್​ ಸೆಟ್​​, ಕಣ್ಣಿಗೆ ಸಂಬಂಧಿಸಿದ ಮೇಕಪ್​​​ ಪರಿಕರವನ್ನು ಬಿಸಾಡಿ ಹೊಸದನ್ನು ಖರೀದಿ ಮಾಡಿ. ಹಳೆಯದರಲ್ಲಿ ವೈರಸ್​ ಉಳಿದುಕೊಂಡು ಮತ್ತೆ ಸೋಂಕು ಹರಡಬಹುದು. ನಿಮ್ಮ ಮೇಕಪ್​ ಸೆಟ್​ ಅನ್ನು ಆರು ತಿಂಗಳಿಗೊಮ್ಮೆ ಬದಲಾಯಿಸಿ ಎಂದು ತಜ್ಞರು ಹೇಳುತ್ತಾರೆ.

ಇವನ್ನು ಪಾಲಿಸಿ

  • ಮದ್ರಾಸ್​ ಐ  ಬಂದಿದೆ ಎಂದು ತಿಳಿದ ನಂತರೆವೈದ್ಯರು ಸೂಚಿಸುವ ಐ ಡ್ರಾಪ್ಸ್​ ಬಳಕೆ ಮಾಡಿ.
  •  ವೈದ್ಯರ ಸಲಹೆ ಇಲ್ಲದೆ ಮೆಡಿಕಲ್​ನಲ್ಲಿ ಯಾವುದೇ ಔಷಧಿ ಕೊಂಡು ಕಣ್ಣಿನ ಬಳಕೆಗೆ ಉಪಯೋಗಿಸಿಕೊಳ್ಳಬೇಡಿ.
  •  ಕಣ್ಣಿನ ಸೋಂಕು ಕಾಣಿಸಿಕೊಂಡಾಗ ತಕ್ಷಣವೇ  ಕಾಂಟ್ಯಾಕ್ಟ್ ಲೆನ್ಸ್  ಧರಿಸುವುದನ್ನು ನಿಲ್ಲಿಸಿ.  ಸೋಂಕು ಸಂಪೂರ್ಣವಾಗಿ ವಾಸಿಯಾಗಿ ವೈದ್ಯರು ಅನುಮತಿ ನೀಡಿದ ಮೇಲಷ್ಟೇ ಮತ್ತೆ ಲೆನ್ಸ್ ಬಳಸಬೇಕು.
  • ಧೂಳು, ಮಳೆ ಗಾಳಿಯಿಂದ ಕಣ್ಣನ್ನು ಕಾಪಾಡಿಕೊಳ್ಳಲು ಕನ್ನಡ ಮಾಸ್ಕ್​ ಧರಿಸಿ
  • ಮದ್ರಾಸ್​ ಐ ಸುಲಭವಾಗಿ ಹರಡುವ ಕಾರಣ, ಸೋಂಕು ಇರುವವರು ಕಣ್ಣು ವಾಸಿಯಾಗುವವರೆಗೆ ಇತರರೊಂದಿಗೆ ನಿಕಟವಾಗಿ ಬೆರೆಯುವುದನ್ನು ಕಡಿಮೆ ಮಾಡಬೇಕು. 
  •  ಮದ್ರಾಸ್​ ಐ ಹರಡಲು ಕಾರಣವಾಗುವ ವೈರಸ್ ಮತ್ತು ಬ್ಯಾಕ್ಟೀರಿಯಾಗಳು  ನೀವು ನಿತ್ಯ ಬಳಕೆ ಮಾಡುವ ಮೊಬೈಲ್ ಫೋನ್, ಕೀಬೋರ್ಡ್, ಬಾಗಿಲಿನ ಹ್ಯಾಂಡಲ್, ಟೇಬಲ್‌ಗಳ ಬದುಕಿರುತ್ತವೆ, ಆಗಾಗ್ಗೆ ಅವುಗಳ ಸ್ವಚ್ಛತೆ ಬಗ್ಗೆ ಗಮನಿಸಿ, (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net