Kidney Problems: ಹೃದಯ ಮತ್ತು ಮೂತ್ರಪಿಂಡಗಳು ದೇಹದ ರಕ್ತಪರಿಚಲನೆ ಮತ್ತು ದ್ರವ ಸಮತೋಲನಕ್ಕೆ ಅತ್ಯಗತ್ಯ. ಈ ಅವಯವಗಳಲ್ಲಿ ತೊಂದರೆ ಉಂಟಾದಾಗ, ಪಾದಗಳಲ್ಲಿ ಕೆಲವು ಸ್ಪಷ್ಟ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಇವುಗಳನ್ನು ನಿರ್ಲಕ್ಷಿಸಿದರೆ ಗಂಭೀರ ಸಮಸ್ಯೆಗಳು ಉಂಟಾಗಬಹುದು.
ಹೌದು, ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡುವಂತೆ, ಪಾದಗಳಲ್ಲಿನ ಈ ೫ ಬದಲಾವಣೆಗಳು ಹೃದಯ ವೈಫಲ್ಯ ಅಥವಾ ಮೂತ್ರಪಿಂಡ ಕಾಯಿಲೆಯ ಸೂಚನೆಯಾಗಿರಬಹುದು
1. ಪಾದಗಳಲ್ಲಿ ಊತ
ಹೃದಯ ಸರಿಯಾಗಿ ರಕ್ತ ಪಂಪ್ ಮಾಡದಿದ್ದರೆ ಅಥವಾ ಮೂತ್ರಪಿಂಡಗಳು ದ್ರವವನ್ನು ಹೊರಹಾಕದಿದ್ದರೆ, ಪಾದಗಳು ಮತ್ತು ಕಣಕಾಲುಗಳಲ್ಲಿ ಊತ ಉಂಟಾಗುತ್ತದೆ. ಸಂಜೆಯ ವೇಳೆ ಇದು ಹೆಚ್ಚಾಗಿ ಕಾಣಿಸುತ್ತದೆ.
2 ತಣ್ಣನೆಯ ಪಾದಗಳು
ರಕ್ತಪರಿಚಲನೆ ಕಡಿಮೆಯಾದಾಗ ಪಾದಗಳು ತಣ್ಣಗಾಗುತ್ತವೆ. ಇದು ಪೆರಿಫೆರಲ್ ಆರ್ಟರಿ ಡಿಸೀಸ್ (PAD)ಗೆ ಸಂಬಂಧಿಸಿದ್ದು, ಹೃದಯ ಸಮಸ್ಯೆಯ ಸಂಕೇತ.
3.ಚರ್ಮದ ಬಣ್ಣ ಬದಲಾವಣೆ
ಪಾದಗಳು ನೀಲಿ ಅಥವಾ ಗಾಢವಾಗಿ ಕಾಣಿಸುವುದು ಆಮ್ಲಜನಕದ ಕೊರತೆಯಿಂದ ಉಂಟಾಗುತ್ತದೆ. ಹೃದಯ ಅಥವಾ ಮೂತ್ರಪಿಂಡ ಸಮಸ್ಯೆಗಳಲ್ಲಿ ಇದು ಸಾಮಾನ್ಯ.
4. ನೋವು ಅಥವಾ ಆಯಾಸ
ನಡೆಯುವಾಗ ಪಾದಗಳಲ್ಲಿ ನೋವು ಅಥವಾ ಕ್ರ್ಯಾಂಪ್ ಬರುವುದು ರಕ್ತನಾಳಗಳ ಅಡ್ಡಿಯ ಸೂಚನೆ. PAD ಮತ್ತು ಹೃದಯ ಕಾಯಿಲೆಗೆ ಇದು ಸಂಬಂಧಿಸಿದೆ.
5. ಗಾಯಗಳು ಗುಣವಾಗದಿರುವುದು
ಮೂತ್ರಪಿಂಡ ಕಾಯಿಲೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿ, ಪಾದಗಳಲ್ಲಿನ ಸಣ್ಣ ಗಾಯಗಳು ಬೇಗ ಗುಣವಾಗುವುದಿಲ್ಲ. ಇದು ಸೋಂಕಿಗೆ ಕಾರಣವಾಗಬಹುದು.
ಈ ಲಕ್ಷಣಗಳು ಕಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ರಕ್ತದೊತ್ತಡ ನಿಯಂತ್ರಣದಿಂದ ಈ ಸಮಸ್ಯೆಗಳನ್ನು ತಡೆಗಟ್ಟಬಹುದು,(ಏಜೆನ್ಸೀಸ್).