ಕಾಲುಗಳ ಮೇಲೆ ನೀಲಿ-ಕೆಂಪು ರಕ್ತನಾಳಗಳಿವೆಯೇ..? ಈ ಅಪಾಯ ತಪ್ಪಿದ್ದಲ್ಲ...ಎಚ್ಚರಿಕೆ! Blue Red Veins

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಹಲವಾರು ಜನರ ಕಾಲುಗಳ ಮೇಲೆ ಸಣ್ಣ ನೀಲಿ ಮತ್ತು ಕೆಂಪು ರಕ್ತನಾಳಗಳು ಇರುತ್ತವೆ
  • ಈ ರಕ್ತನಾಳಗಳು ಮೊಣಕಾಲಿನ ಕೆಳಗೆ ಹೆಚ್ಚಾಗಿ ಗೋಚರಿಸುತ್ತವೆ
  • ಕಾಲುಗಳಲ್ಲಿರುವ ರಕ್ತನಾಳಗಳು ಸರಿಯಾದ ಆಮ್ಲಜನಕವನ್ನು ಪಡೆಯದಿದ್ದಾಗ, ಅವುಗಳಲ್ಲಿ ರಕ್ತ ಸಂಗ್ರಹವಾಗುತ್ತದೆ
  • ಕಾಲುಗಳ ಮೇಲಿನ ಒತ್ತಡವು ಹೆಚ್ಚಾದಾಗ ಎಲ್ಲಾ ನರಗಳು ಒಂದೇ ಕಡೆ ಇರುವಂತೆ ಭಾಸವಾಗುತ್ತದೆ
Blue Red Veins: ಮೊದಲಿನಿಂದಲೂ ಹಲವಾರು ಜನರ ಕಾಲುಗಳ ಮೇಲೆ ಸಣ್ಣ ನೀಲಿ ಮತ್ತು ಕೆಂಪು ರಕ್ತನಾಳಗಳು ಇರುತ್ತವೆ. ಈ ರಕ್ತನಾಳಗಳು ಮೊಣಕಾಲಿನ ಕೆಳಗೆ ಹೆಚ್ಚಾಗಿ ಗೋಚರಿಸುತ್ತವೆ. ಆದಾಗ್ಯೂ, ಅನೇಕ ಜನರಲ್ಲಿ ರಕ್ತನಾಳಗಳು ಊದಿಕೊಂಡಂತೆ ಕಾಣಿಸುತ್ತವೆ. ಇವುಗಳು ತೀವ್ರವಾದ ನೋವಿಗೆ ಕಾರಣವಾಗಬಹುದು. ಈ ಸಮಸ್ಯೆಯನ್ನು ವೆರಿಕೋಸ್ ವೇನ್ಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ, ನೀಲಿ ರಕ್ತನಾಳಗಳು ಒಟ್ಟಿಗೆ ಅಂಟಿಕೊಂಡಂತೆ ಕಾಣಿಸುತ್ತದೆ. ಅಂತಹ ರಕ್ತನಾಳಗಳು ಮೊದಲಿಗೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ. ಬದಲಿಗೆ ಕ್ರಮೇಣವಾಗಿ ಕಾಲು ನೋವಿಗೆ ಕಾರಣವಾಗುತ್ತದೆ.
ಕಾಲುಗಳಲ್ಲಿರುವ ರಕ್ತನಾಳಗಳು ಸರಿಯಾದ ಆಮ್ಲಜನಕವನ್ನು ಪಡೆಯದಿದ್ದಾಗ, ಅವುಗಳಲ್ಲಿ ರಕ್ತ ಸಂಗ್ರಹವಾಗುತ್ತದೆ. ಈ ಸಂದರ್ಭದಲ್ಲಿ ಕಾಲುಗಳ ಮೇಲಿನ ಒತ್ತಡವು ಹೆಚ್ಚಾದಾಗ ಎಲ್ಲಾ ನರಗಳು ಒಂದೇ ಕಡೆ ಇರುವಂತೆ ಭಾಸವಾಗುತ್ತದೆ. ಇವು ಕಾಲುಗಳಿಗೆ ನೋವು ಉಂಟು ಮಾಡುವುದರ ಜೊತೆಗೆ ಕಾಲುಗಳನ್ನು ಭಾರವಾಗಿಸುತ್ತದೆ. ಹಾಗಾಗಿ ಉಬ್ಬಿರುವ ರಕ್ತನಾಳಗಳನ್ನು ತೊಡೆದು ಹಾಕಲು ಏನು ಮಾಡಬೇಕು ಎಂದು ನಾವಿಂದು ತಿಳಿಸಲಿದ್ದೇವೆ.

ಉಬ್ಬಿರುವ ರಕ್ತನಾಳಗಳಿಗೆ ಕಾರಣ

ವ್ಯಕ್ತಿಯು ಮಾಡುವ ಕೆಲವೊಂದು ವೈಯಕ್ತಿಕ ತಪ್ಪುಗಳಿಂದ ಕಾಲುಗಳ ಮೇಲೆ ಕೆಂಪು ಮತ್ತು ನೀಲಿ ರಕ್ತನಾಳಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಯಾವ ವ್ಯಕ್ತಿ ಹೆಚ್ಚಾಗಿ ಧೂಮಪಾನ ಮಾಡುವುದು, ನಿರಂತರವಾಗಿ ಪ್ರಯಾಣಿಸುವುದು, ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತಾನೋ ಅವನಿಗೆ ಕಾಲಿನ ನರಗಳಲ್ಲಿ ರಕ್ತ ಸಂಚಾರ ಆಗದೇ ಈ ಸಮಸ್ಯೆಗಳು ಉಂಟಾಗುತ್ತವೆ. ಕೆಲವೊಮ್ಮೆ ಮಧುಮೇಹ ಮತ್ತು ಹಾರ್ಮೋನುಗಳ ಗರ್ಭನಿರೋಧಕಗಳಿಂದಲೂ ಉಬ್ಬಿರುವ ರಕ್ತನಾಳಗಳು ಉಂಟಾಗಬಹುದು.

ಉಬ್ಬಿರುವ ರಕ್ತನಾಳಗಳನ್ನು ಸರಿಪಡಿಸುವುದು ಹೇಗೆ?

ಉಬ್ಬಿರುವ ರಕ್ತನಾಳಗಳ ನೋವಿನಿಂದ ಮುಕ್ತಿ ಪಡೆಯಲು ಮನೆಯಲ್ಲಿಯೇ ಸುಲಭವಾದ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಆದಾಗ್ಯೂ, ಒಂದು ಬಕೆಟ್​ಗೆ ಬೆಚ್ಚಗಿನ ನೀರನ್ನು ಹಾಕಿ ಅದಕ್ಕೆ ಉಪ್ಪು ಬೆರೆಸಿರಿ. ನಂತರ 15 ನಿಮಿಷಗಳ ಕಾಲ ನಿಮ್ಮ ಕಾಲನ್ನು ನೆನಸಿಡಿ. ಕ್ರಮೇಣವಾಗಿ ಹೀಗೆ ಮಾಡುವುದರಿಂದ ಪರಿಹಾರ ಸಿಗಬಹುದು.

ನಿದ್ರೆಯ ಸಮಯದಲ್ಲಿ ಕಾಲನ್ನು ಮೇಲಕ್ಕೆ ಎತ್ತಿಕೊಳ್ಳಿ

ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿದ ನಂತರ, ಹಾಸಿಗೆ ಮೇಲೆ ಮಲಗಿರಿ. ಈ ಸಮಯದಲ್ಲಿ ನಿಮ್ಮ ಪಾದಗಳನ್ನು ಹಾಸಿಗೆಯ ಮೇಲೆ ಸ್ವಲ್ಪ ಎತ್ತರಕ್ಕೆ ಇಟ್ಟುಕೊಳ್ಳಿ. ಅ.ದರೆ ನಿಮ್ಮ ಪಾದದ ಕೆಳಗೆ ಎರಡು ದಿಂಬುಗಳನ್ನು ಇಟ್ಟುಕೊಳ್ಳಿ. ಇವು ನಿಮ್ಮ ಪಾದಗಳನ್ನು ವೃತ್ತಾಕಾರದ ಚಲನೆಯಲ್ಲಿ ಹಿಂದಕ್ಕೆ ಮತ್ತು ಮುಂದಕ್ಕೆ ಸರಿಸಿ, ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ನೋವನ್ನು ನಿವಾರಿಸುತ್ತದೆ.

ವ್ಯಾಯಾಮ ಮಾಡಿ

ಉಬ್ಬಿದ ನರಗಳನ್ನು ಕಡಿಮೆ ಮಾಡಲು ಗೋಡೆಯ ಮುಂದೆ ನಿಂತು, ಒಂದು ಕಾಲನ್ನು ಮುಂದೆ ಮತ್ತು ಇನ್ನೊಂದು ಕಾಲನ್ನು ಹಿಂದಕ್ಕೆ ಇರಿಸಿರಿ. ನಿಮ್ಮ ಮೊಣಕಾಲುಗಳನ್ನು ಸ್ವಲ್ಪ ಬಗ್ಗಿಸಿ ಗೋಡೆಗೆ ಒರಗಿಸಿ. ಇದಾದ ನಂತರ ನಿಮ್ಮ ಹಿಂಗಾಲಿನ ಕರು ಸ್ನಾಯುಗಳನ್ನು ಬಿಗಿಯಾಗುವ ರೀತಿಯಲ್ಲಿ ಇರಿಸಿರಿ. 10-15 ನಿಮಿಷಗಳ ಕಾಲ ಹೀಗೆಯೇ ಇಟ್ಟುಕೊಳ್ಳಿ. ನಂತರ ಮತ್ತೊಂದು ಕಾಲನ್ನು ಅದೇ ರೀತಿ ಮಾಡಿ. ಈ ವ್ಯಾಯಾಮವನ್ನು ಪ್ರತಿದಿನ 15 ನಿಮಿಷಗಳ ಕಾಲ ಮಾಡುವುದರಿಂದ ಉಬ್ಬಿದ ನರಗಳನ್ನು ಕಡಿಮೆ ಮಾಡಬಹುದು.

ಕೈಕಾಲುಗಳಲ್ಲಿ ಭಾರ

ಉಬ್ಬಿರುವ ರಕ್ತನಾಳಗಳಿರುವ ಜನರು ನೇರವಾಗಿ ಹಿಮ್ಮಡಿಗಳನ್ನು ಮೇಲಕ್ಕೆ ಎತ್ತಿ ಕಾಲ್ಬೆರಳುಗಳ ಮೇಲೆ ನಿಲ್ಲಬೇಕು ಎಂದು ಹೇಳುತ್ತಾರೆ. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಕಾಲುಗಳ ಸ್ನಾಯುಗಳಲ್ಲಿ ಹಿಗ್ಗುವಿಕೆಯನ್ನು ಮಾಡುತ್ತವೆ. ಹಾಗಾಗಿ ಈ ವ್ಯಾಯಾಮವನ್ನು ಪ್ರತಿದಿನ 15-20 ನಿಮಿಷಗಳ ಕಾಲ ಮಾಡಿರಿ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net