ಬ್ಲಾಕ್ ಟಿ ಮತ್ತು ಬ್ಲಾಕ್​ ಕಾಫಿ ಯಾವುದು ಆರೋಗ್ಯಕ್ಕೆ ಉತ್ತಮ ? Black tea and Black Coffee

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಚಳಿಗಾಲದಲ್ಲಿ ದೇಹವನ್ನು ಆದಷ್ಟು ಬೆಚ್ಚಗಿಡಬೇಕು
  • ಬ್ಲಾಕ್ ಟಿ ಮತ್ತು ಬ್ಲಾಕ್​ ಕಾಫಿ ಸೇವನೆ ಉತ್ತಮ
  • ಬ್ಲಾಕ್ ಟಿ ಮತ್ತು ಬ್ಲಾಕ್​ ಕಾಫಿ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ
Black tea vs Black Coffee : ಇದೀಗ ಚಳಿಗಾಲವು ನಿಧಾನವಾಗಿ ಆರಂಭವಾಗುತ್ತಿದ್ದು, ದೇಹವನ್ನು ಆದಷ್ಟು ಬೆಚ್ಚಗೀಡ ಬೇಕೆಂದು ವೈದ್ಯರು ಹೇಳುತ್ತಾರೆ. ಹಾಗಾಗಿ ಹೆಚ್ಚಿನ ಜನರು ಚಹಾ ಮತ್ತು ಕಾಫಿಯ ಸೇವನೆಯನ್ನು ಈ ಋತುವಿನಲ್ಲಿ ಹೆಚ್ಚಿಸುತ್ತಾರೆ. ಆದರೆ ಹಾಲು ಮತ್ತು ಸಕ್ಕರೆ ರಹಿತವಾಗಿ ಸೇವಿಸಿದರೆ ಇನ್ನೂ ಆರೋಗ್ಯಕ್ಕೆ ಒಳ್ಳೆಯದೆಂದು ಜನರು ಈಗೀಗ ಬ್ಲಾಕ್ ಟಿ ಮತ್ತು ಬ್ಲಾಕ್​ ಕಾಫಿ (Black tea and Black coffee) ಯ ಮೊರೆ ಹೋಗುತ್ತಿರುವುದನ್ನು ನಾವು ನೋಡುತ್ತೇವೆ.
ಬ್ಲಾಕ್ ಟಿ ಮತ್ತು ಬ್ಲಾಕ್​ ಕಾಫಿ ಸೇವನೆಯಿಂದ ಹತ್ತು ಹಲವಾರು ಪ್ರಯೋಜನಗಳಿವೆ. ನಿಯಮತವಾಗಿ ಇವನ್ನು ಕುಡಿಯುದರಿಂದ ಚಳಿಗಾಲದಲ್ಲಿ ಬರುವ ಅನೇಕ ರೋಗ ರುಜಿನಗಳನ್ನು ದೂರವಿಡಬಹುದು.ಆದರೆ ಈ ಬ್ಲಾಕ್ ಟಿ ಮತ್ತು ಬ್ಲಾಕ್​ ಕಾಫಿಯ ನಡುವೆ ಯಾವುದು ಉತ್ತಮ? ಯಾವುದನ್ನು ನಾವು ನಿರಂತರವಾಗಿ ಸೇವಿಸಿದರೆ ನಮ್ಮ ಆರೋಗ್ಯಕ್ಕೆ ಪ್ರಯೋಜನವಿದೆ? ಎಂಬ ಪ್ರಶ್ನೆಗಳಿದ್ದರೆ ಅವಕ್ಕೆಲ್ಲಾ ಉತ್ತರ ಇಲ್ಲಿದೆ.

ಬ್ಲಾಕ್ ಟಿ (Black Tea) ದ ಪ್ರಯೋಜನಗಳು

* ಬ್ಲಾಕ್ ಟಿನಲ್ಲಿ ಆಂಟಿ-ಆಕ್ಸಿಡೆಂಟ್ಸ್ ಅಧಿಕವಾಗಿರುವ ಕಾರಣ ಇದು ದೇಹದಲ್ಲಿ ರೋಗನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ.
* ಬ್ಲಾಕ್ ಟಿ ಸೇವನೆಯಿಂದ ಹೃದಯದ ಆರೋಗ್ಯಕ್ಕೆ ಪ್ರೋತ್ಸಾಹ ದೊರೆಯುವುದರಿಂದ ರಕ್ತ ಸಂಚಾರ ಸುಧಾರಿಸಿ ಹೃದಯ ಸಂಭಂದಿ ರೋಗಗಳ ಅಪಾಯ ಕಡಿಮೆಯಾಗುತ್ತದೆ.
* ಬ್ಲಾಕ್ ಟಿನ ನಿಯಮಿತ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಜೀರ್ಣದೋಷ ಇತ್ಯಾದಿಗಳು ಕಡಿಮೆಯಾಗುತ್ತವೆ.
* ಬ್ಲಾಕ್ ಟಿಯನ್ನು ದಿನನಿತ್ಯ ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಕಡಿಮೆಮಾಡುವುದರಿಂದ ಮಧುಮೇಹ ರೋಗಿಗಳು ಇದನ್ನು ಕುಡಿಯುವುದು ಉತ್ತಮ.

ಬ್ಲಾಕ್​ ಕಾಫಿ (Black Coffee) ಯ ಪ್ರಯೋಜನಗಳು

* ಬ್ಲಾಕ್​ ಕಾಫಿ ಸೇವನೆಯಿಂದ ಮೆದುಳಿನ ಶಕ್ತಿ ಉತ್ತೇಜನವಾಗುತ್ತದೆ.
* ಬ್ಲಾಕ್​ ಕಾಫಿ ನಿಯಮಿತ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗುವುದರಿಂದ ತೂಕ ಇಳಿಸಲು ಸಹಾಯಕವಾಗಿದೆ.
* ಬ್ಲಾಕ್​ ಕಾಫಿ ಕುಡಿಯುವುದರಿಂದ ಲಿವರ್​ನ ಕೊಬ್ಬು ಕರಗುವುದರಿಂದ ಪ್ಯಾಟಿ ಲಿವರ್​ ಸಮಸ್ಯೆಯನ್ನು ದೂರವಾಗಿಸಬಹುದು.
* ಬ್ಲಾಕ್​ ಕಾಫಿಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುವ ಕಾರಣ ದೇಹದಲ್ಲಿರುವ ಕಲ್ಮಶಗಳು ಕಡಿಮೆಯಾಗುತ್ತವೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net