ಊಟದ ಬಳಿಕ ಅಗಿಯುವ ಒಂದೇ ಒಂದು ಏಲಕ್ಕಿಯಿಂದ ಎಷ್ಟೆಲ್ಲಾ ಲಾಭಗಳು ಗೊತ್ತಾ!

 Cardamom
Cardamom
Published on

ಪ್ರಮುಖ ಮುಖ್ಯಾಂಶಗಳು

  • ಊಟದ ಬಳಿಕ ಏಲಕ್ಕಿ ಅಗಿಯುವ ರೂಢಿ ಒಳ್ಳೆಯದು
  • ಒಂದೇ ಒಂದು ಏಲಕ್ಕಿಯಿಂದ ಎನೆಲ್ಲಾ ಲಾಭಗಳು ತಿಳಿಯಿರಿ..
ಬೆಂಗಳೂರು: ಭಾರತದಲ್ಲಿ ಊಟದ ನಂತರ ಸಾಂಪ್ರದಾಯಿಕವಾಗಿ ಏಲಕ್ಕಿ ಅಗಿಯುವ ಪದ್ಧತಿ ರೂಢಿಯಲ್ಲಿದೆ. ಕೆಲ ಮೆನಗಳಲ್ಲಿ ಈ ಪದ್ಧತಿ ಇಂದಿಗೂ ನಡೆಸುಕೊಂಡು ಬಂದಿದೆ. ಆದಾಗ್ಯೂ, ಕೆಲವರು ಊಟದ ಬಳಿಕ ಏಲಕ್ಕಿ ತಿನ್ನುವುದು ಸಾಮಾನ್ಯ ಅಭ್ಯಾಸ ಎಂದುಕೊಳ್ಳುತ್ತಾರೆ. ಆದರೆ, ಒಂದು ಸಣ್ಣ ಏಲಕ್ಕಿ ಅಗಿಯುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳು ಸಿಗಲಿದೆ ಗೊತ್ತಾ! ಇದು ನಮ್ಮ ದೇಹದ ಮೇಲೆ ಮತ್ತು ಆರೋಗ್ಯದ ಪ್ರಯೋಜನಗಳೇನು ಎಂಬುದು ತಿಳಿಯೋಣ..
ದೇಹವನ್ನು ನಿರ್ವಿಷಗೊಳಿಸಲು ಸಹಾಯ
ಏಲಕ್ಕಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ದೇಹದಲ್ಲಿ ಸಂಗ್ರಹವಾದ ವಿಷವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯಕೃತ್ತ ಮತ್ತು ಮೂತ್ರಪಿಂಡಗಳಿಗೂ ದೇಹಕ್ಕೆ ಬೇಕಿರಿದ ಕೆಟ್ಟದನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ಊಟದ ನಂತರ ಪ್ರತಿದಿನ ಅದನ್ನು ಅಗಿಯುವುದರಿಂದ ಚಯಾಪಚಯ ಕ್ರಿಯೆಯನ್ನು ಸಮತೋಲನಗೊಳಿಸಲು ಮತ್ತು ದೇಹವು ಹಗುರವಾಗಿರಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ ಅತ್ಯಂತ ಸಹಾಯಕಾರಿ
ಏಲಕ್ಕಿ ತಿಂದ ಬಳಿಕ ಹೊಟ್ಟೆ ಭಾರ, ಅನಿಲ ಮತ್ತು ಆಮ್ಲೀಯತೆಯಿಂದ ತೊಂದರೆ ಅನುಭವಿಸುವವರಿಗೆ ಏಲಕ್ಕಿ ನೈಸರ್ಗಿಕ ಪರಿಹಾರವಾಗಿದೆ. ಆಹಾರವು ವೇಗವಾಗಿ ಮತ್ತು ಸುಲಭವಾಗಿ ಆಹಾರವು ವೇಗವಾಗಿ ಮತ್ತು ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಏಲಕ್ಕಿ ಹೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ವಿಶೇಷವಾಗಿ ಹುರಿದ ಅಥವಾ ಭಾರವಾದ ಆಹಾರವನ್ನು ತಿಂದ ನಂತರ ಅದನ್ನು ಶಮನಗೊಳಿಸುತ್ತದೆ.
ನೈಸರ್ಗಿಕ ಮೌತ್​ ಫ್ರೆಶ್ನರ್​
ನೀವು ಬಾಯಲ್ಲಿ ಏಲಕ್ಕಿ ಅಗಿಯುವಾಗ ಉಲ್ಲಾಸಕರ ಅನುಭವಾಗುತ್ತದೆ. ಏಲಕ್ಕಿಯಲ್ಲಿ ಆರೊಮ್ಯಾಟಿಕ್​ ಆಯಿಲ್​ ಇರುವುದರಿಂದ ಬಾಯಿಯ ದುರ್ವಾಸನೆ ಕಡಿಮೆ ಮಾಡುತ್ತದೆ. ಇದು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ನಿಮ್ಮ ಬಾಯಿಯನ್ನು ಸ್ವಚ್ಛವಾಗಿ ಮತ್ತು ನಿಮ್ಮ ಉಸಿರಾಟವನ್ನು ತಾಜಾವಾಗಿರಿಸುತ್ತದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net