ಈ ಲಕ್ಷಣಗಳು ಕಂಡುಬಂದರೆ.. ಉಪೇಕ್ಷೆ ಬೇಡ.. ಕಿಡ್ನಿ ವೈಫಲ್ಯವಾದಿತು ಎಚ್ಚರ!!Kidney Failure

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮೂತ್ರಪಿಂಡ ದೇಹದಲ್ಲಿ ಹೃದಯ ಮತ್ತು ಶ್ವಾಸಕೋಶದಷ್ಟೇ ಪ್ರಮುಖವಾದ ಭಾಗ
  • ದೇಹದಲ್ಲಿರುವ ಮಲಿನಗಳನ್ನು ಸ್ವಚ್ಚಗೊಳಿಸುವುಸುದು ಕಿಡ್ನಿಯ ಪ್ರಾಥಮಿಕ ಕೆಲಸ
  • ಮೂತ್ರಪಿಂಡವು ಕೆಲಸವನ್ನು ಸರಿಯಾಗಿ ಮಾಡದೆ ಇದ್ದಾಗ ಕೆಲವು ಸೂಚನೆಗಳನ್ನು ನೀಡುತ್ತದೆ
  • ಸೂಕ್ತ ಚಿಕಿತ್ಸೆ ಪಡೆದರೆ ಕಿಡ್ನಿ ವೈಫಲ್ಯದಿಂದ ತಪ್ಪಿಸಿಕೊಳ್ಳಬಹುದು.
Kidney : ಮೂತ್ರಪಿಂಡವು (Kidney) ನಮ್ಮ ದೇಹದಲ್ಲಿ ಹೃದಯ ಮತ್ತು ಶ್ವಾಸಕೋಶದಷ್ಟೇ ಪ್ರಮುಖವಾದ ಭಾಗವಾಗಿದೆ. ಕಿಡ್ನಿಯ ಪ್ರಮುಖ ಕಾರ್ಯವೆಂದರೆ ದೇಹದಲ್ಲಿರುವ ಮಲಿನವನ್ನು ಸ್ವಚ್ಚಗೊಳಿಸುವ ಜತೆಗೆ ರಕ್ತವನ್ನು ಶುದ್ಧಿಮಾಡುವುದರಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
ರಕ್ತದೊತ್ತಡ ಸರಿದೂಗಿಸುವಿಕೆ, ಕೆಂಪು ರಕ್ತ ಕಣಗಳ ಉತ್ಪಾದನೆ ಹಾಗೂ ಮೂಳೆಗಳ ಆರೋಗ್ಯದ ಮೇಲು ಪರಿಣಾಮ ಬೀರುವ ಮೂತ್ರಪಿಂಡ ತನ್ನ ಕೆಲಸವನ್ನು ಸರಿಯಾಗಿ ಮಾಡದ ಪಕ್ಷದಲ್ಲಿ ಮಾನವನ ದೇಹವು ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.
ಆದ್ದರಿಂದ ಮೂತ್ರಪಿಂಡವು ತನ್ನ ಕೆಲಸವನ್ನು ಸರಿಯಾಗಿ ಮಾಡದೆ ಇದ್ದಾಗ ಕೆಲವು ಸೂಚನೆಗಳನ್ನು ನೀಡುತ್ತದೆ. ಅ ಸಂದರ್ಭದಲ್ಲಿ ನಾವು ಮುನ್ನೆಚ್ಚರಿಕೆ ವಹಿಸಿ ಸೂಕ್ತ ಚಿಕಿತ್ಸೆ ಪಡೆದರೆ ಕಿಡ್ನಿ ವೈಫಲ್ಯದಂತ ಗಂಭೀರ ಸನ್ನಿವೇಶದಿಂದ ತಪ್ಪಿಸಿಕೊಳ್ಳಬಹುದು.

ಮೂತ್ರಪಿಂಡದ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ ಉಂಟಾದಾಗ ನೀಡುವ ಸೂಚನೆಗಳು

1. ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ

ಮೂತ್ರಪಿಂಡವು ಸರಿಯಾಗಿ ಕೆಲಸ ಮಾಡದಿದ್ದರೆ ಮೂತ್ರದ ಹೊರಹೋಗುವ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಮೂತ್ರದ ಬಣ್ಣದಲ್ಲಿ ಬದಲಾವಣೆಗಳು ಪ್ರಕಟವಾಗುತ್ತದೆ.

2. ದೇಹದ ವಿವಿದೆಡೆ ಊತ

ಮೂತ್ರಪಿಂಡ ಕೆಲಸವನ್ನು ಮಾಡಲು ವಿಫಲವಾಗುತ್ತಿರುವಾಗ ಕಾಲು, ಮೊಣ ಕಾಲು ಮತ್ತು ಕಣ್ಣುಗಳ ಸುತ್ತಲೂ ಊತ ಕಾಣಿಸಿಕೊಳ್ಳುತ್ತದೆ.

3. ನಿರಂತರ ಆಯಾಸ

ಮೂತ್ರಪಿಂಡದ ಕಾರ್ಯನಿರ್ವಹಣೆ ಕಳಪೆಯಾದಾಗ ವಿಷಕಾರಿ ಅಂಶಗಳು ದೇಹದಲ್ಲಿ ಸಂಗ್ರಹವಾಗಿ ವಿಪರೀತ ಆಯಾಸ ಮತ್ತು ದೌರ್ಬಲ್ಯದ ಭಾವನೆಗಳಿಗೆ ಕಾಣಿಸಿಕೊಳ್ಳುತ್ತದೆ.

4. ಉಸಿರಾಟದ ತೊಂದರೆ

ಮೂತ್ರಪಿಂಡದ ವಿಫಲ ಕಾರ್ಯನಿರ್ವಹಣೆಯಿಂದ ಶ್ವಾಸಕೋಶದಲ್ಲಿ ದ್ರವ ಸಂಗ್ರಹವಾಗಲು ಪ್ರಾರಂಭಿಸಿದಾಗ ಉಸಿರಾಟ ಕ್ರಿಯೆಯಲ್ಲಿ ವ್ಯತ್ಯಯವಾಗುತ್ತದೆ.

5. ವಾಕರಿಕೆ ಮತ್ತು ವಾಂತಿ

ತ್ಯಾಜ್ಯವನ್ನು ದೇಹದಿಂದ ತೆಗೆದುಹಾಕುವುದು ಮೂತ್ರಪಿಂಡಗಳ ಮೂಲಭೂತ ಕೆಲಸವಾಗಿದೆ. ಆದರೆ ಈ ಕೆಲಸ ಸರಯಾಗಿ ಆಗದಿದ್ದಾಗ ದೇಹದಲ್ಲಿ ತ್ಯಾಜ್ಯ ಸಂಗ್ರಹವಾಗಿ, ವಾಕರಿಕೆ ಮತ್ತು ವಾಂತಿಯ ಅನಭವವಾಗುತ್ತದೆ.

ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳು

1. ಹೆಚ್ಚೆಚ್ಚು ನೀರನ್ನು ಕುಡಿಯಿರಿ

ದೇಹವು ಹೈಡ್ರೇಟ್​ ಆಗಿದ್ದರೆ ಮೂತ್ರಪಿಂಡವು ತನ್ನ ಕೆಲಸವನ್ನು ಸರಾಗವಾಗಿ ಮಾಡತ್ತದೆ. ಆದ್ದರಿಂದ ದಿನಕ್ಕೆ 4 ರಿಂದ 5 ಲೀಟರ್​ಗಳಷ್ಟು ನೀರನ್ನು ಕುಡಿಯಿರಿ.

2. ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ

ಹಣ್ಣುಗಳು ಕಡಿಮೆ ಕ್ಯಾಲೊರಿ ಮತ್ತು ವಿವಿಧ ರೀತಿಯ ವಿಟಾಮಿನ್​ಗಳನ್ನು ಹೊಂದಿರುವುದರಿಂದ ಮೂತ್ರಪಿಂಡದ ಆರೋಗ್ಯವು ಉತ್ತಮವಾಗಿರುತ್ತದೆ. ಸೇಬು, ಅನಾನಸ್ ಮತ್ತು ದ್ರಾಕ್ಷಿ ಉತ್ತಮ ಆಯ್ಕೆಗಳಾಗಿವೆ.

3. ಮೊಸರನ್ನು ಕಡಿಮೆ ಸೇವಿಸಿ

ಮೊಸರಿನಲ್ಲಿರುವ ಟೈಟ್ರೇಟ್‌ಗಳು ಮೂತ್ರಪಿಂಡಕ್ಕೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಆದ್ದರಿಂದ ಮೊಸರಿನ ಸೇವನೆ ಕಡಿಮೆ ಮಾಡುವುದು ಉತ್ತಮ.

4. ಧೂಮಪಾನ ಮತ್ತು ಮದ್ಯಪಾನವನ್ನು ನಿಲ್ಲಿಸಿ

ಧೂಮಪಾನ ಮತ್ತು ಮದ್ಯಪಾನವು ಕಿಡ್ನಿಗೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತವೆ. ಹೀಗಾಗಿ ಅವುಗಳಿಂದ ದೂರವಿರುವುದು ಉತ್ತಮ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net