Cause of Infertility: ಇಂದಿನ ಬದಲಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾನಸಿಕ ಒತ್ತಡವು ದಂಪತಿಗಳ ಪಾಲಿಗೆ ಪೋಷಕತ್ವದ ಕನಸನ್ನು ನನಸಾಗಿಸಲು ಅಡ್ಡಿಯಾಗುತ್ತಿದೆ. ಅದರಲ್ಲೂ ಮಹಿಳೆಯರಲ್ಲಿಯೇ ಈ ಸಮಸ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಆದಾಗ್ಯೂ, ನೈಸರ್ಗಿಕವಾಗಿ ತಾಯಿಯಾಗಲು ಸಾಧ್ಯವಾಗದ ಸಾವಿರಾರು ಮಹಿಳೆಯರು ಇಂದು ಐವಿಎಫ್ ಚಿಕಿತ್ಸೆಯ ಮೂಲಕ ಮಗುವಿನ ಮುಖ ನೋಡಲು ಬಯಸುತ್ತಿದ್ದಾರೆ.