ರಕ್ತ ಹೀನತೆಯಿಂದ ಕಾಡುವ ತಲೆ ಸುತ್ತು, ಆಯಾಸಕ್ಕೆ ಹೇಳಿ ಗುಡ್‌ಬೈ: ಮಹಿಳೆಯರ ಶಕ್ತಿ ಹೆಚ್ಚಿಸುವ ಲಡ್ಡು ರೆಸಿಪಿ ಇಲ್ಲಿದೆ..Health Tips

Superfood Laddoo For Women Energy And Health
Superfood Laddoo For Women Energy And Health
Published on

ಪ್ರಮುಖ ಮುಖ್ಯಾಂಶಗಳು

  • ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಈ ಲಡ್ಡು ಮನೆಯಲ್ಲೇ ತಯಾರಿಸಿ ತಿನ್ನಿ
  • ಏಲಕ್ಕಿ, ಖರ್ಜೂರ, ಕುಂಬಳಕಾಯಿಯ ಬೀಜ, ಕಪ್ಪು ಎಳ್ಳು, ಅಗಸೆ ಬೀಜ ತುಪ್ಪದಿಂದ ತಯಾರಿಸಿದ ಲಡ್ಡು
  • ಸುಸ್ತು, ಆಯಾಸಕ್ಕೆ ಮುಕ್ತಿ ನೀಡುವ ಸೂಪರ್‌ಫುಡ್ ಲಡ್ಡು ರೆಸಿಪಿ ಇಲ್ಲಿದೆ
Superfood Laddoo For Women Energy And Health: ಮಹಿಳೆಯರಲ್ಲಿ ಹೆಚ್ಚಾಗಿ ರಕ್ತ ಹೀನತೆ ಸಮಸ್ಯೆ ಕಂಡುಬರುತ್ತದೆ. ಮುಟ್ಟಾದಾಗ ಹೆಚ್ಚು ರಕ್ತಸ್ರಾವ, ಗರ್ಭಾವಸ್ಥೆ, ಪೌಷ್ಠಿಕಾಂಶದ ಕೊರತೆಯಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳೋದು ಸಾಮಾನ್ಯ.  ಇದು ಸದಾ ಆಯಾಸವಾಗಿರುವಂತೆ ಮಾಡುವುದು, ಮುಖ ಬಿಳಿಚಿಕೊಳ್ಳೋದು,  ತಲೆ ನೋವು, ತಲೆ ತಿರುಗುವಂತೆ ಮಾಡುತ್ತದೆ. ಹೀಗಾಗಿ ಮಹಿಳೆಯರು ತಮ್ಮನ್ನು ತಾವು ಪೋಷಿಸಿಕೊಳ್ಳುವುದು ಅಗತ್ಯ. 
ಅನೇಮಿಯಾ ಅಥವಾ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವ  ಮಹಿಳೆಯರು  ದೇಹದ ಹಿಮೋಗ್ಲೋಬಿನ್​ ಮಟ್ಟವನ್ನು ಹೆಚ್ಚಿಸಿಕೊಳ್ಳಲು ರಾಜ್ಮಾ, ಪಾಲಕ್​, ದಾಳಿಂಬೆ, ರಾಗಿ, ಖರ್ಜೂರ, ಬೀಟ್ರೂಟ್​  ಸೇರಿಂದತೆ  ಕಬ್ಬಿಣಾಂಶ ಮತ್ತು ವಿಟಮಿನ್​ ಬಿ 12 ಸಮೃದ್ಧವಾಗಿರುವ ಆಹಾರವನ್ನು ಸೇವನೆ ಮಾಡೋದು ಬಹು ಮುಖ್ಯವಾಗಿರುತ್ತದೆ.  ಆದರೆ, ಎಲ್ಲ ತರಕಾರಿ ಅಥವಾ ಹಣ್ಣು, ಧಾನ್ಯವನ್ನು ಎಲ್ಲರೂ ತಿನ್ನೋಲ್ಲ. ಹೀಗಾಗಿ ಸುಲಭವಾಗಿ ಎಲ್ಲರಿಗೂ ಇಷ್ಟವಾಗುವಂತೆ ಮಾಡಿ ತಿನ್ನಬಹುದಾದ ಒಂದು ಆಹಾರ ಪದಾರ್ಥವಿದೆ. ಅದೇ ಕಪ್ಪು ಎಳ್ಳು, ಕುಂಬಳ ಬೀಜ, ಏಲಕ್ಕಿ, ಉದ್ದು ಸೇರಿದಂತೆ ಹಲವು ಪದಾರ್ಥ ಹಾಕಿ ಮಾಡುವ ಲಡ್ಡು.
ಏಲಕ್ಕಿ, ಖರ್ಜೂರ, ಉದ್ದು, ಬೇಳೆ, ಕುಂಬಳಕಾಯಿಯ ಬೀಜ, ಕಪ್ಪು ಎಳ್ಳು, ಅಗಸೆ ಬೀಜ,  ತುಪ್ಪದಿಂದ ಹಿಮೋಗ್ಲೋಬಿನ್​ ಹೆಚ್ಚು ಮಾಡುವ ಈ  ಉಂಡೆ ತಯಾರಿ ಮಾಡೋದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ.

ಹಿಮೋಗ್ಲೋಬಿನ್​ ಹೆಚ್ಚಿಸಲು ಸಹಾಯ ಮಾಡುವ ಲಡ್ಡು ತಯಾರಿಸೋದು ಹೀಗೆ

ಇವನ್ನು ಉರಿದುಕೊಳ್ಳಿ
ಒಲೆ ಮೇಲೆ ಪ್ಯಾನ್​ವೊಂದನ್ನು ಇಟ್ಟು ಅದಕ್ಕೆ ಒಂದು ಕಪ್​ನಷ್ಟು ಉದ್ದು, ಕುಂಬಳಕಾಯಿ ಬೀಜ, ಕಪ್ಪು ಎಳ್ಳು, ಅಗಸೆ ಬೀಜ ಹಾಕಿ ಅದಕ್ಕೆ ಮೂರು ಸ್ಪೂನ್​ ತುಪ್ಪ ಹಾಕಿ. ಹಸಿ ವಾಸನೆ ದೂರಾಗುವವರೆಗೂ ಉರಿದುಕೊಳ್ಳಿ. ಚೆನ್ನಾಗಿ ಉರಿದು ಹಸಿ ವಾಸನೆ ಹೋಗಿದೆ ಎನಿಸಿದಾಗ  ಅದನ್ನು ತೆಗೆದು ಪಕ್ಕಕ್ಕೆ ಹಾರಲು ಬಿಡಿ.
ಈಗ 15 ಖರ್ಜೂರವನ್ನು ಬಿಡಿಸಿಕೊಳ್ಳಿ. ಅದರಲ್ಲಿರುವ ಬೀಜವನ್ನು ತೆಗೆಯಿರಿ,. ನಂತರ ಅದನ್ನು ಮಿಕ್ಸರ್​ಗೆ ಹಾಕಿ ಚೆನ್ನಾಗಿ ಗ್ರೈಂಡ್​ ಮಾಡಿ ಕೊಳ್ಳಿ, ಮಿಕ್ಸಿಯಿಂದ ಬೌಲ್​ಗೆ ಇದನ್ನು ಹಾಕಿದ ನಂತರ ಚೆನ್ನಾಗಿ ಉರಿದ ಬೀಜಗಳು ತಣ್ಣಗಾಗಿದ್ದರೆ ಅವನ್ನು ನುಣ್ಣಗೆ ರುಬ್ಬಿಕೊಳ್ಳಿ.

ಕೊನೇ ಹಂತ

ಈಗ ದೊಡ್ಡ ಪಾತ್ರೆ ಅಥವಾ  ತಟ್ಟೆಯನ್ನು ತೆಗೆದುಕೊಂಡು ಪುಡಿ ಮಾಡಿದ ಖರ್ಜೂರ ಹಾಗೂ ಬೀಜಗಳ ಪುಡಿಯನ್ನು ಒಟ್ಟಿಗೆ ಹಾಕಿ ಕಲಿಸಿ ನಂತರ ಇದಕ್ಕೆ ಮತ್ತೆ ಮೂರು ಸ್ಪೂನ್​ ತುಪ್ಪ ಜಜ್ಜಿದ ಏಲಕ್ಕಿ ಹಾಕಿ ಕಲಿಸಿ ಸಣ್ಣ ಸಣ್ಣದಾಗಿ ನಿಮಗೆ ಬೇಕಾದ ರೀತಿಯಲ್ಲಿ ಉಂಡೆ ಮಾಡಿಕೊಳ್ಳಿ. 

ದುಬಾರಿ ಹಣ ಖರ್ಚಾಗುವ ಭಯ ಬಿಡಿ

ಈ ಲಡ್ಡು ನಿತ್ಯ ಒಂದೊಂದು ಸೇವನೆ ಮಾಡೋದ್ರಿಂದಾಗಿ ದೇಹದ ಆರೋಗ್ಯಕ್ಕೆ ಅದರಲ್ಲಿಯೂ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಲಾಭದಾಯಕ. ಮನೆಯಲ್ಲಿ ನಾವೇ ತಯಾರಿಸಿ ತಿನ್ನುವುದರಿಂದ ಹೊರಗೆ ದುಬಾರಿ ಹಣ ಕೊಟ್ಟೆ ಎನ್ನುವ ಕೊರತೆ ಇರೋದಿಲ್ಲ. ಜೊತೆಗೆ, ಹೇಗೆ ಮಾಡಿರುತ್ತಾರೋ,  ಡೇಟ್​ ಎಕ್ಸಪೈರಿ ಆಗಿರುವ ಸಾಮಾಗ್ರಿ ಬಳಕೆ ಮಾಡಿದ್ದಾರಾ ಎಂದು ಕಾಡುವ ನೂರೊಂದು ಗೊಂದಲಕ್ಕೆ ಇವು ಮುಕ್ತಿ ಕೊಡುತ್ತದೆ, (ಏಜೆನ್ಸೀಸ್).

ಗಮನಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net