ಬರೀ ಚಾಟಿಂಗ್ ಅಲ್ಲ, ಫಿಟ್‌ನೆಸ್‌ಗೂ ಸೈ: Chat GPT ಸಹಾಯದಿಂದ 27 ಕೆಜಿ ತೂಕ ಇಳಿಸಿಕೊಂಡು ಯುವಕ! Chat GPT

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇಂದಿನ ದಿನಗಳಲ್ಲಿ ತಂತ್ರಜ್ಞಾನವು ಚಿಟಿಕೆ ಹೊಡೆಯುವಷ್ಟರಲ್ಲಿ ಸಾವಿರಾರು ಮೈಲಿ ದೂರವನ್ನು ತಲುಪುತ್ತಿದೆ
  • AI ದೈನಂದಿನ ಜೀವನದ ಭಾಗವಾಗಿ ಮಾರ್ಪಟ್ಟಿದ್ದು, ಅನೇಕ ಸಮಸ್ಯೆಗಳಿಗೆ ದಾರಿ ಹುಡುಕಿಕೊಡುತ್ತದೆ
  • AI ಬಳಸಿಕೊಂಡು 12 ವಾರಗಳಲ್ಲಿ ಬರೋಬ್ಬರಿ 27 ಕೆಜಿ ತೂಕ ಇಳಿಸಿಕೊಂಡ ವ್ಯಕ್ತಿ
Chat GPT: ಇಂದಿನ ದಿನಗಳಲ್ಲಿ ತಂತ್ರಜ್ಞಾನವು ಚಿಟಿಕೆ ಹೊಡೆಯುವಷ್ಟರಲ್ಲಿ ಸಾವಿರಾರು ಮೈಲಿ ದೂರವನ್ನು ತಲುಪುತ್ತಿದೆ. ಅದರ ನಡುವೆಯೇ AI ದೈನಂದಿನ ಜೀವನದ ಭಾಗವಾಗಿ ಮಾರ್ಪಟ್ಟಿದೆ. ಇದು ಕೆಲಸದ ಸಮಸ್ಯೆಯಿಂದ ಪ್ರಾರಂಭಿಸಿ ಪ್ರವಾಸಗಳನ್ನು ಯೋಜಿಸುವುದು, ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವುದನ್ನು ಮಾಡುತ್ತದೆ. ಅಂದಹಾಗೇ, ನಾವಿಂದು ತಂತ್ರಜ್ಞಾನದ ಸಹಾಯವನ್ನು ಬಳಸಿಕೊಂಡು 12 ವಾರಗಳಲ್ಲಿ ಬರೋಬ್ಬರಿ 27 ಕೆಜಿ ತೂಕ ಇಳಿಸಿಕೊಂಡ ವ್ಯಕ್ತಿಯ ಬಗ್ಗೆ ಹೇಳಲು ಹೊರೆಟಿದ್ದೇವೆ.
ಹಸನ್ ಎಂಬ X ಬಳಕೆದಾರರೊಬ್ಬರ ರೂಪಾಂತರದ ಕಥೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಯಾವುದೇ ಜಿಮ್​ಗೆ ಹೋಗದೇ, ಫ್ಯಾನ್ಸಿ ಡಯಟ್ ಮಾಡದೇ ತೂಕ ಇಳಿಸಿಕೊಂಡಿದ್ದಾರಂತೆ. ಹೌದು! ಹಸನ್​ ತೂಕ ಇಳಿಸಿಕೊಳ್ಳುವ ಸಹಾಯಕ್ಕಾಗಿ ChatGPT ಮೊರೆ ಹೋಗಿದ್ದು, ಅದನ್ನು ತಮ್ಮ ದೈನಂದಿನ ಮಾರ್ಗದರ್ಶಿಯಾಗಿ ಬಳಸಿಕೊಂಡಿರುವುದಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಹಸನ್ ತಮ್ಮ ಫಲಿತಾಂಶಗಳನ್ನು ಹಂಚಿಕೊಳ್ಳುವುದಷ್ಟೇ ಅಲ್ಲದೇ, ಯಾವ ವ್ಯಕ್ತಿ ತೂಕ ಇಳಿಸಿಕೊಳ್ಳಬೇಕು ಎಂದು ಹೆಣಗಾಡುತ್ತಿದ್ದರೋ ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ.
ಆದಾಗ್ಯೂ, ಅವರು ತಮ್ಮ ಪೋಸ್ಟ್​ನಲ್ಲಿ ನನ್ನ ವೈಯಕ್ತಿಕ ತರಬೇತುದಾರನಾಗಿ ChatGPT ಯೊಂದಿಗೆ ನಾನು 27 ಕಿಲೋಗ್ರಾಂಗಳಷ್ಟು ತೂಕ ಇಳಿಸಿಕೊಂಡೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. "ದೈನಂದಿನ ಶಿಸ್ತು + ಪ್ರಾಂಪ್ಟ್‌ಗಳು" ಹಸನ್ ಅವರ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿದವು. ಹಾಗಾಗಿ ನೀವೇನಾದರೂ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಹಸನ್ ಅವರ ಸಲಹೆಗಳನ್ನು ತೆಗೆದುಕೊಳ್ಳಿ.

ಸಾಪ್ತಾಹಿಕ ಊಟದ ಯೋಜನೆ

ದಿನಕ್ಕೆ 1800 ಕ್ಯಾಲೋರಿಗಳ ಆಧಾರದ ಮೇಲೆ 7 ದಿನಗಳ ಊಟದ ಯೋಜನೆಯನ್ನು ಹೊಂದಿಸಿಕೊಳ್ಳಿ. ಇದರ ಪ್ರಕಾರ, 120 ಗ್ರಾಂ+ ಪ್ರೋಟೀನ್, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು, ಸುಲಭವಾದ ಪದಾರ್ಥಗಳನ್ನು ಸೇರಿಸಿಕೊಳ್ಳಿ.

ಮನೆಯಲ್ಲಿ ಕೊಬ್ಬು ಕರಗಿಸುವ ವ್ಯಾಯಾಮಗಳು

ಪ್ರತಿನಿತ್ಯ 30 ನಿಮಿಷಗಳ ಕಾಲ ಕೊಬ್ಬು ಕರಗಿಸುವ ವ್ಯಾಯಾಮಗಳನ್ನು ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾವುದೇ ಉಪಕರಣಗಳಿಲ್ಲದೆ ಸುಲಭವಾದ ವ್ಯಾಯಾಮವನ್ನು ಆಯ್ಕೆ ಮಾಡಿಕೊಳ್ಳಿ.

ಕಡುಬಯಕೆ ಮತ್ತು ಭಾವನಾತ್ಮಕ ಆಹಾರ ಬೆಂಬಲ

ಆಹಾರಗಳನ್ನು ಸೇವಿಸುವಾಗ ಹೆಚ್ಚು ಸಕ್ಕರೆ ಇರುವ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಅದಕ್ಕಾಗಿ, 200 ಕ್ಯಾಲೋರಿಗಳಿಗಿಂತ ಕಡಿಮೆ ಕ್ಯಾಲೋರಿ ಹೊಂದಿರುವ 10ಕ್ಕಿಂತ ಹೆಚ್ಚಿನ ಪ್ರಮಾಣದ, ಕಡಿಮೆ ಕ್ಯಾಲೋರಿ ತಿಂಡಿಗಳ ಪಟ್ಟಿಯನ್ನು ಮಾಡಿಕೊಳ್ಳಿ. ಅದರಂತೆ ಕಡುಬಯಕೆಗಳು ಹೆಚ್ಚಾದಾಗ ಈ ಆಹಾರಗಳನ್ನು ಸೇವಿಸಿರಿ.

ಅಭ್ಯಾಸ ಟ್ರ್ಯಾಕಿಂಗ್ ವ್ಯವಸ್ಥೆ

ಫಿಟ್​ನೆಸ್​ ಹೊಂದಲು ತೀರ್ಮಾನವನ್ನು ತೆಗೆದುಕೊಂಡ ನಂತರ, ಪ್ರತಿದಿನ 5 ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ. ಅಂದರೆ, ನಿಮ್ಮ ಊಟದ ಯೋಜನೆಯನ್ನು ಅನುಸರಿಸಿದ್ದೀರಾ? ವ್ಯಾಯಾಮ ಮುಗಿದಿದೆಯೇ? ನಿದ್ರೆಯ ಸಮಯ ಈ ರೀತಿಯ ಪ್ರಶ್ನೆಯನ್ನು ಕೇಳಿಕೊಂಡು ನಿಮ್ಮ ಅಭ್ಯಾಸಗಳನ್ನು ಟ್ರಾಕ್​ ಮಾಡಿ.

ಮನಸ್ಥಿತಿ ಮತ್ತು ಸ್ಥಿರತೆಯ ಸೂಚನೆ ತಿಳಿದುಕೊಳ್ಳಿ

ಪ್ರತಿನಿತ್ಯ 5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಭರ್ತಿ ಮಾಡಬಹುದಾದ ಬೆಳಗಿನ ಜರ್ನಲಿಂಗ್ ಸ್ಕ್ರಿಪ್ಟ್ ರಚಿಸಿಕೊಳ್ಳಿ. ಇದರಲ್ಲಿ ನನ್ನ ಗುರಿ ಏನು? ನಾನು ಯಾವುದಕ್ಕೆ ಕೃತಜ್ಞನಾಗಿದ್ದೇನೆ ಹಾಗೂ ನನ್ನ ಫಿಟ್​ನೆಸ್ ದೃಢೀಕರಣ ಏನು ಎಂಬುದನ್ನು ತಿಳಿಯಿರಿ.

ಸಾಪ್ತಾಹಿಕ ವಿಮರ್ಶೆ

ಪ್ರತಿ ಭಾನುವಾರಕ್ಕೊಮ್ಮೆ ನಿಮ್ಮ ಸೊಂಟದ ಅಳತೆ, ತೂಕ, ಸ್ಥಿರತೆಯನ್ನು ಪರೀಕ್ಷೆ ಮಾಡಿಕೊಳ್ಳಿ. ಫಲಿತಾಂಶಗಳ ಮೇಲೆ ಮುಂದಿನ 7 ದಿನಗಳು ಯಾವ ರೀತಿಯಲ್ಲಿ ಊಟ ಸೇವಿಸಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಸರಳ ಸುಳಿವುಗಳು ಸರಿಯಾದ ಮಾರ್ಗದರ್ಶನ, ದೈನಂದಿನ ಸ್ಥಿರತೆ ಮತ್ತು AI ನ ಬುದ್ಧಿವಂತ ಬಳಕೆಯು ತೂಕ ನಷ್ಟವನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ. ಈ ನಿಯಮಗಳನ್ನು ಅಳವಡಿಸಿಕೊಂಡು ಅಭ್ಯಾಸ ಮಾಡಿದ್ದಲ್ಲಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net