ಹುಟ್ಟಿದ ತಕ್ಷಣ ಮಗು ಅಳುವುದೇಕೆ..? ಶೇ.90 ರಷ್ಟು ಜನರಿಗೆ ಈ ಕಾರಣವೇ ಗೊತ್ತಿಲ್ಲ...Baby cries
ಸಾಂದರ್ಭಿಕ ಚಿತ್ರ
Published on:
Copied
Follow Us
Baby cries: ಹುಟ್ಟು ಸಾವು ಎಂಬುದು ಪ್ರಕೃತಿ ನಿಯಮವಾಗಿದೆ. ಯಾವುದೇ ಮಗುವು ತನ್ನ ತಾಯಿಯ ಗರ್ಭದಿಂದ ಹೊರಬಂದ ಕೂಡಲೇ ತಕ್ಷಣ ಅಳುವುದನ್ನು ಕೇಳಬಹುದು. ಈ ಸಂದರ್ಭವು ಪೋಷಕರಿಗೆ ಸಾಂತ್ವಾನ ಪಡೆಯುವ ಕ್ಷಣವಾಗಿರುತ್ತದೆ. ಆದರೆ ಈ ಅಳುವುದು ವಾಸ್ತವವಾಗಿ ಆರೋಗ್ಯದ ಪ್ರಮುಖ ಸಂಕೇತವಾಗಿದ್ದರು ಈ ವಿಚಾರ ಹಲವಾರು ಜನರಿಗೆ ತಿಳಿದಿರುವುದಿಲ್ಲ. ಹಾಗೆಯೇ ಮಗು ಹುಟ್ಟಿದಾಕ್ಷಣ ನಗದಿರಲು ಕೆಲವು ವೈಜ್ಞಾನಿಕ ಕಾರಣಗಳಿವೆ.
ಒಂದು ಮಗು ಸುಮಾರು 9 ತಿಂಗಳುಗಳ ಕಾಲ ತಾಯಿಯ ಗರ್ಭದ ಸುರಕ್ಷಿತ ವಾತಾವರಣದಲ್ಲಿ ಬೆಳೆಯುತ್ತದೆ. ಅಲ್ಲಿ ಆ ಮಗುವಿಗೆ ತಾಪಮಾನ ಸಮತೋಲನವಾಗಿರುತ್ತದೆ. ಹೊರಗಿನ ಪ್ರಪಂಚದ ಬಗ್ಗೆ ಪ್ರವೇಶದ ಬಗ್ಗೆ ಗಮನವಿರುವುದಿಲ್ಲ. ಬೆಳಕು ಮಂದವಾಗಿರುತ್ತದೆ ಮತ್ತು ಶಬ್ದಗಳು ಮೃದುವಾಗಿರುತ್ತವೆ. ಹಾಗಾಗಿ ಮಗು ಹೊರಗಿನ ಪ್ರಪಂಚವನ್ನು ಪ್ರವೇಶಿಸದ ತಕ್ಷಣ, ಮಗು ಸಂಪೂರ್ಣವಾಗಿ ವಿಭಿನ್ನವಾದ ವಾತಾವರಣವನ್ನು ಎದುರಿಸಬೇಕಾಗುತ್ತದೆ.
ಜನನದ ತಕ್ಷಣ, ಮಗು ಬೆಳಕು, ಶೀತ, ಶಾಖ ಮತ್ತು ಹೊಸ ಶಬ್ದಗಳಿಗೆ ಹೊಸದಾಗಿ ಹೊಂದಿಕೊಳ್ಳಬೇಕು. ದೇಹವು ಈ ಬದಲಾವಣೆಗಳಿಗೆ ತಕ್ಷಣ ಪ್ರತಿಕ್ರಿಯಿಸುವುದರಿಂದ ಮಗುವಿಗೆ ಆತಂಕ ಹೆಚ್ಚಾಗಿ ಅಳಲು ಪ್ರಾರಂಭಿಸುತ್ತದೆ.
ಮಗುವಿನ ಅಳುವಿನಿಂದ ಮಗು ಆರೋಗ್ಯವಾಗಿದೆ ಎಂದು ವೈದ್ಯರು ಸೂಚನೆ ನೀಡುತ್ತಾರೆ. ಈ ವೇಳೆ ಮಗು ಅತ್ತಾಗ ಮಗುವಿನ ಶ್ವಾಸಕೋಶಗಳು ತೆರೆದುಕೊಳ್ಳುತ್ತವೆ ಮತ್ತು ಉಸಿರಾಟದ ಪ್ರಕ್ರಿಯೆಯು ಹೊಸದಾಗಿ ಪ್ರಾರಂಭವಾಗುತ್ತದೆ. ಇದು ಹೃದಯ ಮತ್ತು ಶ್ವಾಸಕೋಶಗಳು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸುತ್ತದೆ.
ಮಗು ಜನಿಸಿದ ತಕ್ಷಣ ಅಳುವುದು ನೈಸರ್ಗಿಕ ಪ್ರಕ್ರಿಯೆ ಇದು ಸಂಕೇತವಲ್ಲ. ಬದಲಾಗಿ ಮಗು ಬಾಹ್ಯ ಪರಿಸರಕ್ಕೆ ಹೊಂದಿಕೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ.
ಆದರೆ ಮಗು ಮೊದಲು ನಗುವುದಿಲ್ಲ ಏಕೆಂದರೆ ನಗುವುದು ಭಾವನಾತ್ಮಕ ಮತ್ತು ಸಾಮಾಜಿಕ ಪ್ರತಿಕ್ರಿಯೆಯಾಗಿದೆ. ಇದಕ್ಕೆ ಮೆದುಳು ಮತ್ತು ಇಂದ್ರಿಯಗಳ ಬೆಳವಣಿಗೆಯ ಅಗತ್ಯವಿರುವುದರಿಂದ ಮಗು ತನ್ನ ಸುತ್ತಲಿನ ಜನರನ್ನು ಗುರುತಿಸಲು ಸಮಯ ಬೇಕಾಗುತ್ತದೆ.
ಹೀಗಾಗಿ, ಮಗು ಮೊದಲು ಅಳಲು ಕಲಿಯುತ್ತದೆ ಮತ್ತು ನಂತರ ಬೆಳೆದಂತೆ ನಗಲು ಪ್ರಾರಂಭಿಸುತ್ತದೆ. ಮಗು ನಗಲು ಪ್ರಾರಂಭಿಸಿದಾಗ, ಅದು ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಯ ಸುಂದರ ಸಂಕೇತವಾಗಿರುತ್ತದೆ ಎಂದು ತಿಳಿಯಬಹುದು. ಹಾಗಾಗಿ ಪೋಷಕರೇ ನಿಮ್ಮ ಮಗು ಅಳುತ್ತಿದೆ ಎಂದು ಹೆದರಬೇಡಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.