30ರ ಹರೆಯದಲ್ಲೂ ವಯಸ್ಸಾದವರಂತೆ ಕಾಣ್ತಿದ್ದೀರಾ?; ಈ 5 ಕೆಟ್ಟ ಅಭ್ಯಾಸ ಇಂದೇ ಬಿಟ್ಬಿಡಿ..Anti-Ageing Habits

Anti-Ageing Habits
Anti-Ageing Habits
Published on

ಪ್ರಮುಖ ಮುಖ್ಯಾಂಶಗಳು

  • ಧೂಮಪಾನ, ವ್ಯಾಯಾಮ ಮಾಡದೇ ಇರುವುದು ಆರೋಗ್ಯಕ್ಕೆ ಉತ್ತಮವಲ್ಲ
  • ನಿದ್ರೆಯ ಕೊರತೆಯು ಡಿಎನ್‌ಎ ರಿಪೇರಿ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ ಎಂದ ವೈದ್ಯ ಜೆರಿಮಿ
  • ಬದುಕಿನ ಒತ್ತಡ ನಿರ್ವಹಣೆ ಹಾಗೂ ಪೋಷಕಾಂಶವುಳ್ಳ ಆಹಾರ ರೂಢಿಸಿಕೊಳ್ಳಿ
Anti-Ageing Habits: ಕಾಲಚಕ್ರದನುಸಾರ, ಪ್ರಕೃತಿಯ ನಿಯಮಾನುಸಾರ ದೇಹಕ್ಕೆ ಮುಪ್ಪಾಗುವುದು ಸಾಮಾನ್ಯ. ಆದರೆ, ಮೂವತ್ತರ ಹರೆಯದವರು ವಯಸ್ಸಾದವರಂತೆ ಕಾಣಲು, ಯುವಜನರು ಅಳವಡಿಸಿಕೊಂಡಿರುವ ದುರಾಭ್ಯಾಸ ಹಾಗೂ ಆಧುನಿಕ ಜೀವನಶೈಲಿಯೇ ಕಾರಣ ಎನ್ನುತ್ತಾರೆ ಅಮೆರಿಕದ ಹೃದ್ರೋಗ ತಜ್ಞರು.
ಕೆಟ್ಟ ಅಭ್ಯಾಸಗಳು ನಮ್ಮನ್ನು ಅಕಾಲಿಕವಾಗಿ ಮುಪ್ಪಾಗಿಸುತ್ತವೆ. ನಾವು ಸಣ್ಣವರಾದರೂ ಸಹ ದೊಡ್ಡವರಂತೆ ಕಾಣಲು ಕಾರಣವೇನು, ನಮ್ಮ ದೇಹದ ಆತಂಕರಿಕ ಶಕ್ತಿ ದಿನದಿಂದ ದಿನಕ್ಕೆ ಕುಂದಲು ಕಾರಣವೇನು ಎನ್ನುವ ಬಗ್ಗೆ ಮಾತನಾಡಿ, ಅಮೆರಿಕ ಮೂಲದ ಹೃದಯ ರಕ್ತನಾಳದ ಶಸ್ತ್ರಚಿಕಿತ್ಸಕ ಜೆರಿಮಿ ಲಂಡನ್​(Dr Jeremy London) ಅವರು ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಯಾವ ಅಭ್ಯಾಸ ಬಿಡ್ಬೇಕು?

ನಿಮ್ಮ ಹೃದಯವನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಮತ್ತು ಮುಪ್ಪಾಗಿ ಕಾಣೋದನ್ನು ಕಡಿಮೆ ಮಾಡಲು ನೀವು ಈ ಐದು ಅಭ್ಯಾಸಗಳನ್ನು ಬಿಡಲೇ ಬೇಕು ಎಂದು ಜೆರಿಮಿ ಲಂಡನ್​ ಹೇಳಿದ್ದಾರೆ.

ಧೂಮಪಾನ ಮತ್ತು ಇ-ಸಿಗರೇಟ್​ ಬಳಕೆ ಇಂದೇ ಬಿಟ್ಬಿಡಿ

ದಿನಿತ್ಯವೂ ಧೂಮಪಾನ ಮಾಡುವುದು ಮತ್ತು ಸಿಗರೇಟ್​ ಬದಲಿಗೆ ಎಲೆಕ್ಟ್ರಿಕ್​ ಸಿಗರೇಟ್​ ಬಳಕೆ ಮಾಡುವುದು ಎರಡು ಸಹ ನಿಮ್ಮ ದೇಹವು ಬೇಗನೇ ವಯಸ್ಸಾಗುವ ಹಾಗೆ ಮಾಡುತ್ತದೆ. ಚರ್ಮದಲ್ಲಿ ಸುಕ್ಕನ್ನು ಹೆಚ್ಚು ಮಾಡುವುದಲ್ಲದೆ. ದೇಹದಲ್ಲಿನ ಜೈವಿಕ ಅಂಗಾಂಶಗಳ ವಯಸ್ಸನ್ನು ಕಡಿಮೆ ಮಾಡುತ್ತದೆ. ಅತಿ ಕಡಿಮೆ ಧೂಮಪಾನ ಮಾಡೋದು ಬೇಡ ಎನ್ನುತ್ತಾರೆ ಜೆರಿಮಿ.

ದಿನಪೂರ್ತಿ ಕೂತೇ ಇರಬೇಡಿ

ದಿನವಿಡೀ 6ರಿಂದ 8ಗಂಟೆ ಕೆಲಸ ಮಾಡುತ್ತಾ ಕುಳಿತ ಜಾಗದಲ್ಲೇ ಇರುವುದು ನಿಮ್ಮ ದೇಹವೂ ಅತ್ರಂತ್ರ ಸ್ಥಿತಿಗೆ ತಲುಪುವಂತೆ ಮಾಡುತ್ತದೆ. ನಿತ್ಯವೂ ನಿಮ್ಮ ದೇಹವನ್ನು ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕುಳಿತಲ್ಲೇ ಇರುವುದು ನಿಮ್ಮ ದೇಹದ ಗ್ಲೂಕೋಸ್​, ಮೆಟೊಕಾಂಡ್ರಿಯಲ್​​, ಮೆಟಬಾಲಿಸಂ ಆರೋಗ್ಯಕ್ಕೆ ಇದು ಹಾನಿಕಾರಕ. ನೀವು ನಿತ್ಯ ವ್ಯಾಯಾಮ ಮಾಡಿದರೂ ಸಹ ದಿನವಿಡೀ ದೇಹವನ್ನು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದೇ ಇದ್ದರೆ ವ್ಯರ್ಥ ಎಂದು ಹೇಳಿದ್ದಾರೆ.
📄 Embedded Content
ದೀರ್ಘಕಾಲದ ಒತ್ತಡ
ಆರ್ಥಿಕ ಸಮಸ್ಯೆ, ಮಾನಸಿಕ ಹಾಗೂ ನಿಮಗೆ ಮ್ಯಾನೇಜ್​​ ಮಾಡಲು ಸಾಧ್ಯವಾಗದ ಒತ್ತಡ, ಭಾವನಾತ್ಮಕ ಒತ್ತಡಗಳು ನಿಮ್ಮ ದೇಹದಲ್ಲಿ ಕಾರ್​ಟಿಸೋಲ್​ ಎಂಬ ಹಾರ್ಮೋನ್​ ಅನ್ನು ಬಿಡುಗಡೆ ಮಾಡುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ನಕರಾತ್ಮಕವಾಗಿ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಕಡಿಮೆ ನಿದ್ರೆ ಮಾಡುವುದು

ದೀರ್ಘಕಾಲ ಕೆಲಸ ಮಾಡಿದ ದೇಹಕ್ಕೆ ದಣಿವು ಮುಖ್ಯ. ಅದು ಕಂಪ್ಯೂಟರ್​ ವರ್ಕ್​ ಅಥವಾ ದೈಹಿಕ ಕೆಲಸವಾಗಿರಬಹುದು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ನೋಡುತ್ತಾ ಮಲಗೋದನ್ನೇ ಮರೆತು ಬಿಡುತ್ತೇವೆ ಅದು ತಪ್ಪು. ಏಳರಿಂದ-ಎಂಟು ಗಂಟೆ ದೇಹಕ್ಕೆ ನಿದ್ದೆ ಬೇಕೆ ಬೇಕು. ನಾವು ನಿದ್ದೆ ಮಾಡಿದಾಗ ನಮ್ಮ ದೇಹ ಚೇತರಿಸಿಕೊಳ್ಳುತ್ತಿರುತ್ತವೆ. ಕಳಪೆ ನಿದ್ರೆ ಡಿಎನ್​ಎ ಮತ್ತು ಹಾರ್ಮೋನಲ್​ ನಿಯಂತ್ರಣಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ. ಇದರಿಂದಾಗಿ ದೇಹ ವಯಸ್ಸಾಗುವ ವೇಗವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ಕಳಪೆ ಆಹಾರ ಪದ್ಧತಿ ಮತ್ತು ಬೊಜ್ಜು

ಇತ್ತೀಚಿನ ದಿನಗಳಲ್ಲಿ ಬರ್ಗರ್​, ಪಿಜ್ಜಾದಂತಹ ಆಹಾರವನ್ನು ಸೇವಿಸುತ್ತಿದ್ದಾರೆ. ಇದು ಅತಿಯಾದ ತೂಕ ಮತ್ತು ಬೊಜ್ಜು ಹೆಚ್ಚಲು ಕಾರಣವಾಗುತ್ತಿದೆ. ಅಂಗಾಗಳ ಸುತ್ತ ಇರುವ ಕೊಬ್ಬು ಇನ್ಸುಲಿನ್​ ಪ್ರತಿರೋಧವನ್ನು ಉಂಟು ಮಾಡಿ ಮೆಟಬಾಲಿಸಂ ಬೆಳವಣಿಗೆಗೆ ಸಮಸ್ಯೆ ತಂದೊಡ್ಡುತ್ತದೆ. ಅಮೆರಿಕದಲ್ಲಿ ನಿತ್ಯ ಕ್ಯಾಲೋರಿ ಸೇವನೆ 3500 ದಾಟೋದಿಲ್ಲ. ಇನ್ನು ನಿತ್ಯವೂ 20 ನಿಮಿಷವಾದರೂ ವ್ಯಾಯಮ ಮಾಡುತ್ತಾರೆ ಎಂದು ಹೇಳಿದ್ದಾರೆ, (ಏಜೆನ್ಸೀಸ್).
ನಮ್ಮ ದಿನನಿತ್ಯದ ಜೀವನದಲ್ಲಿ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳುವುದು ಆರೋಗ್ಯಕರ ಜೀವನಕ್ಕೆ ಸಹಕಾರಿ. ಈ ಮೇಲಿನ ಮಾಹಿತಿಯು ವೈದ್ಯ ಜೆರಿಮಿ ಲಂಡನ್​ ಅವರ ಇನ್​ಸ್ಟಾಗ್ರಾಂ ಪೋಸ್ಟ್​ ಅನುಸಾರ ಬರೆಯಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net