ಹಲ್ಲಿನ ಎನಾಮೆಲ್ ಕಾಪಾಡಿಕೊಳ್ಳಲು ಇಂದೇ ಈ ಅಭ್ಯಾಸಗಳನ್ನು ಬಿಟ್ಟುಬಿಡಿ: ದಂತ ವೈದ್ಯರು ನೀಡುವ ಪ್ರಮುಖ ಎಚ್ಚರಿಕೆ ಇದು! Dental Health

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಹಲ್ಲಿನ ಆರೋಗ್ಯ ಎಂದರೆ ಕೇವಲ ಹಲ್ಲುಗಳು ಬಿಳಿಯಾಗಿರುವುದು ಮಾತ್ರವಲ್ಲ, ಅದು ಒಟ್ಟಾರೆ ಬಾಯಿಯ ಆರೋಗ್ಯದ ಸಮತೋಲನ
  • ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ದಂತ ಕವಚದ ದುರ್ಬಲಗೊಳ್ಳುವಿಕೆಯು ಹೆಚ್ಚುತ್ತಿದೆ ಎಂದು ವೈದ್ಯರು ವರದಿ ಮಾಡಿದ್ದಾರೆ
  • ದಂತ ಕವಚವು ಒಮ್ಮೆ ಸವೆದರೆ, ಅದು ಮತ್ತೆ ಬೆಳೆಯಲು ಸಾಧ್ಯವಿಲ್ಲ. ಹಲ್ಲಿನ ದಂತ ಕವಚವನ್ನು ನಿಧಾನವಾಗಿ ನಾಶ ಮಾಡುತ್ತದೆ
  • ನಿಮ್ಮ ಹಲ್ಲುಗಳು ಹುಳುಕಾಗಲು ಅಥವಾ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುವ ಹೊತ್ತಿಗೆ ಗಮನಾರ್ಹ ಹಾನಿಗಳು ಸಂಭವಿಸಿರುತ್ತದೆ
Dental Health: ಹಲ್ಲಿನ ಆರೋಗ್ಯ ಎಂದರೆ ಕೇವಲ ಹಲ್ಲುಗಳು ಬಿಳಿಯಾಗಿರುವುದು ಮಾತ್ರವಲ್ಲ, ಅದು ಒಟ್ಟಾರೆ ಬಾಯಿಯ ಆರೋಗ್ಯದ ಸಮತೋಲನವಾಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ 'ಓರಲ್ ಹೈಜೀನ್' (Oral Hygiene) ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ದಂತ ಕವಚದ ದುರ್ಬಲಗೊಳ್ಳುವಿಕೆಯು ಹೆಚ್ಚುತ್ತಿದೆ ಎಂದು ವೈದ್ಯರು ವರದಿ ಮಾಡಿದ್ದಾರೆ.
ದಂತಕವಚವು ಹಲ್ಲುಗಳನ್ನು ಹಾನಿ ಮತ್ತು ಸೂಕ್ಷ್ಮತೆಯಿಂದ ರಕ್ಷಿಸುತ್ತದೆ. ಆದರೆ ನೀವು ಗಮನಿಸಬೇಕಾದ ಮುಖ್ಯ ವಿಷಯವೆಂದರೆ ದಂತ ಕವಚವು ಒಮ್ಮೆ ಸವೆದರೆ, ಅದು ಮತ್ತೆ ಬೆಳೆಯಲು ಸಾಧ್ಯವಿಲ್ಲ. ನಮ್ಮ ಕೆಲವೊಂದು ದೈನಂದಿನ ಅಭ್ಯಾಸಗಳು ಹಲ್ಲಿನ ದಂತಕವಚವನ್ನು ನಿಧಾನವಾಗಿ ನಾಶ ಮಾಡುತ್ತದೆ. ನಿಮ್ಮ ಹಲ್ಲುಗಳು ಹುಳುಕಾಗಲು ಅಥವಾ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುವ ಹೊತ್ತಿಗೆ ಗಮನಾರ್ಹ ಹಾನಿಗಳು ಸಂಭವಿಸಿರುತ್ತದೆ. ಹಾಗಿದ್ದರೆ, ನಿಮ್ಮ ದಂತ ಕವಚವನ್ನು ದುರ್ಬಲಗೊಳಿಸುವ 5 ಪ್ರಮುಖ ತಪ್ಪುಗಳು ಯಾವುದು ಎಂದು ತಿಳಿಯೋಣ ಬನ್ನಿ...

1. ತುಂಬಾ ಗಟ್ಟಿಯಾಗಿ ಹಲ್ಲುಜ್ಜುವುದು

ಅನೇಕ ಜನರು ತಮ್ಮ ಹಲ್ಲುಗಳನ್ನು ಬಲವಾಗಿ ಉಜ್ಜುವುದರಿಂದ ಅವು ಉತ್ತಮವಾಗಿ ಸ್ವಚ್ಛಗೊಳಿಸುತ್ತವೆ ಎಂದು ಭಾವಿಸುತ್ತಾರೆ. ಆದಾಗ್ಯೂ, ಈ ರೀತಿಯ ಅಭ್ಯಾಸವು ದಂತ ಕವಚವನ್ನು ಸವೆಯುವಂತೆ ಮಾಡುತ್ತದೆ. ಜೊತೆಗೆ ಗಟ್ಟಿಯಾದ ಬ್ರಷ್​ಗಳನ್ನು ಬಳಸುವುದರಿಂದ ಇದರ ಅತಿಯಾದ ಒತ್ತಡವು ದಂತದ ಮೇಲ್ಮೈಯನ್ನು ಹಾಳು ಮಾಡಬಹುದು. ಹಾಗಾಗಿ ಯಾವಾಗಲು ಮೃದುವಾದ ಬ್ರಷ್​ಗಳನ್ನು ಬಳಸಿ ಹಲ್ಲು ಉಜ್ಜುವುದರಿಂದ ಈ ರೀತಿಯಾಗುವ ಹಾನಿಯನ್ನು ತಡೆಯಬಹುದು.

2. ಆಮ್ಲೀಯ ಆಹಾರಗಳು ಮತ್ತು ಪಾನೀಯಗಳು

ಹೆಚ್ಚಾದ ತಂಪು ಪಾನೀಯಗಳ ಸೇವನೆ ಪ್ಯಾಕ್​ ಮಾಡಿದ ಹಣ್ಣಿನ ರಸ ಮತ್ತು ಶಕ್ತಿ ನೀಡುವ ಪಾನೀಯಗಳು ನಿಂಬೆ ಹಣ್ಣುಗಳಲ್ಲಿನ ಆಮ್ಲವು ಹಲ್ಲುಗಳನ್ನು ಹಾಳು ಮಾಡುತ್ತದೆ. ಅಂತಹ ಪಾನೀಯಗಳನ್ನು ಕುಡಿಯುವುದರಿಂದ ಇವು ಹಲ್ಲಿನ ದಂತಕವಚವು ಮೃದುವಾಗುತ್ತದೆ. ಮತ್ತು ಕಾಲಾನಂತರದಲ್ಲಿ ಅದು ನಾಶವಾಗುತ್ತವೆ. ಇವುಗಳನ್ನು ಸೇವಿಸದೆ ನಿಂತರ ನಿಮ್ಮ ಬಾಯಿಯನ್ನು ಚೆನ್ನಾಗಿ  ತೊಳೆಯಿರಿ. 

3. ಹಲ್ಲು ಕಡಿಯುವುದು

ಒತ್ತಡದಲ್ಲಿದ್ದಾಗ ಅಥವಾ ನಿದ್ದೆ ಮಾಡುವಾಗ ಹಲ್ಲು ಕಡಿಯುವುದು ಅನೇಕ ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಘರ್ಷಣೆಯು ದಂತಕವಚವನ್ನು ಬೇಗನೆ ಸವೆದು ಹಲ್ಲು ಮುರಿಯಲು ಕಾರಣವಾಗುತ್ತದೆ. ಇದು ದವಡೆ ನೋವು ಮತ್ತು ತಲೆನೋವನ್ನು ಉಂಟು ಮಾಡುತ್ತದೆ.

4. ನೈರ್ಮಲ್ಯವಿಲ್ಲದ ಅಭ್ಯಾಸಗಳು

ಪ್ರತಿದಿನ ಸರಿಯಾಗಿ ಹಲ್ಲುಜ್ಜದಿದ್ದರೆ ನಿಮ್ಮ ಹಲ್ಲುಗಳ ಮೇಲೆ ಪ್ಲೇಕ್ ಸಂಗ್ರಹವಾಗಬಹುದು. ಇದರಲ್ಲಿರುವ ಆಮ್ಲಗಳು ದಂತ ಕವಚದ ಮೇಲೆ ದಾಳಿ ಮಾಡಿ ದಂತಗಳನ್ನು ಹಾನಿ ಮಾಡಬಹುದು. ಹಾಗಾಗಿ ದಂತ ತಪಾಸಣೆ ಮಾಡಿಸಿಕೊಳ್ಳುವುದರಿಂದ ಈ ಹಾನಿಯನ್ನು ಮೊದಲೇ ಗುರುತಿಸಬಹುದು.

5. ಅತಿಯಾದ ಬಿಳಿಮಾಡುವ ಚಿಕಿತ್ಸೆಗಳು

ಹಲ್ಲುಗಳನ್ನು ಬಿಳಿಯಾಗಿಸಲು ಬಳಸುವ ಬ್ಲೀಚಿಂಗ್ ಮತ್ತು ಇತರ ಬಿಳಿ ಮಾಡುವ ಚಿಕಿತ್ಸೆಗಳನ್ನು ಅತಿಯಾಗಿ ಬಳಸಿದರೆ ದಂತ ಕವಚಕ್ಕೆ ಹಾನಿಯಾಗಬಹುದು. ಹಾಗಾಗಿ ವೈದ್ಯರ ಸಲಹೆಗಳಿಲ್ಲದೇ, ಬಲವಾದ ರಾಸಾಯನಿಕಗಳ ಉಪಯೋಗವನ್ನು ಮಾಡಬೇಡಿ. ಇವು ಹಲ್ಲುಗಳ ಆರೋಗ್ಯಕ್ಕೆ ಹಾನಿಯಾಗಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net