ವೈರಲ್ ಆಗುತ್ತಿದೆ 15 ನಿಮಿಷಗಳ ಸೊಂಟ ನೋವಿನ ನಿಯಮ: ಏನಿದು ಹೊಸ ತಂತ್ರ? Back Pain Relief

Back Pain Relief (ಸಾಂದರ್ಭಿಕ ಚಿತ್ರ)
Back Pain Relief (ಸಾಂದರ್ಭಿಕ ಚಿತ್ರ)
Published on
Back Pain Relief: ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಹೆಚ್ಚಿನ ಸಮಯವನ್ನು ನಮ್ಮ ಲ್ಯಾಪ್​ಟಾಪ್​ಗಳ ಮುಂದೆ ಅಥವಾ ನಮ್ಮ ಕಚೇರಿ ಕುರ್ಚಿಗಳಲ್ಲಿ ಕುಳಿತುಕೊಳ್ಳುತ್ತೇವೆ. ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ನಮ್ಮ ದೇಹದ ಕೆಲವೊಂದು ಭಾಗಗಳು ನೋವನ್ನು ಅನುಭವಿಸಲು ಪ್ರಾರಂಭಿಸುತ್ತವೆ. ವಿಶೇಷವಾಗಿ ನಮ್ಮ ಸೊಂಟ ಮತ್ತು ಕೀಲುಗಳು ಬಂಡೆಯಂತೆ ಗಟ್ಟಿಯಾಗುತ್ತವೆ. ಆಗಾಗ್ಗೆ, ಈ ನೋವನ್ನು ಸಾಮಾನ್ಯ ಸಮಸ್ಯೆ ಎಂದು ತಳ್ಳುಹಾಕುತ್ತೇವೆ. ಆದರೆ, ಮುಂದುವರೆದಂತೆ ಈ ಸಮಸ್ಯೆ ದೊಡ್ಡ ನೋವಾಗಿ ಬೆಳೆಯಬಹುದು.
ನೀವೇನಾದರೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ವಿದೇಶಿ ಭೌತಚಿಕಿತ್ಸಕಿ ಡಾ. ಪೌಲಿನಾ ಕ್ಲೋಸ್ಕೋವ್ಸ್ಕಾ ಅವರ ಸಲಹೆಗಳನ್ನು ಹಂಚಿಕೊಳ್ಳಿ. ಇದು ನಿಮ್ಮ ಕೀಲುಗಳನ್ನು ಫಿಟ್​ ಆಗಿಡಲು ಸಹಾಯ ಮಾಡುತ್ತದೆ.

'ಚಲನೆಯೇ ನಿಜವಾದ ಔಷಧ'

ವಿಜ್ಞಾನದ ಪ್ರಕಾರ, ನಾವು ಸಾಮಾನ್ಯ ವೇಗದಲ್ಲಿ ನಡೆಯುವಾಗ ನಮ್ಮ ದೇಹದ ಪ್ರತಿ ಪೌಂಡ್ ತೂಕಕ್ಕೂ ಸೊಂಟದ ಮೇಲೆ ಸುಮಾರು 3 (ಶೇ.300) ಪಟ್ಟು ಒತ್ತಡ ಬೀಳುತ್ತದೆ. ಇದು ಓಡುವಾಗ ಸುಮಾರು 9 (ಶೇ.900) ಪಟ್ಟು ಹೆಚ್ಚಾಗುತ್ತದೆ. ಆದ್ದರಿಂದಲೇ ಕೀಲುಗಳನ್ನು ಸಕ್ರಿಯವಾಗಿಡುವುದು ಬಹಳ ಮುಖ್ಯ.
ಆದಾಗ್ಯೂ, ಕೀಲುಗಳು ಸಕ್ರಿಯವಾಗಿದ್ದಾಗ ಮಾತ್ರ ಅವುಗಳಲ್ಲಿರುವ 'ಸೈನೋವಿಯಲ್ ಫ್ಲೂಯಿಡ್' (Synovial Fluid) ಸರಿಯಾಗಿ ಕೆಲಸ ಮಾಡುತ್ತದೆ. ಇದು ಕೀಲುಗಳ ನಡುವೆ ಗ್ರೀಸ್ ಅಥವಾ ಲ್ಯೂಬ್ರಿಕಂಟ್‌ನಂತೆ ಕಾರ್ಯನಿರ್ವಹಿಸಿ ಘರ್ಷಣೆಯನ್ನು ಕಡಿಮೆ ಮಾಡುತ್ತದೆ.

15 ನಿಮಿಷಗಳ ನಿಯಮ ಏನು?

ನೀವು ಸಂಧಿವಾತ ಮತ್ತು ಸೊಂಟ ನೋವನ್ನು ಅನುಭವಿಸುತ್ತಿದ್ದರೆ, ಕಠಿಣ ವ್ಯಾಯಾಮದ ಬದಲಿಗೆ ಪ್ರತಿನಿತ್ಯ 15 ನಿಮಿಷಗಳ ಕಾಲ ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ನಿಮ್ಮ ದೇಹಕ್ಕೆ ದುರಸ್ಥಿ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ.
ನೀವು ಯಅವಾಗ ನಡೆಯಲು ಪ್ರಾರಂಭಿಸಿರುತ್ತೀರೋ ಆಗ ಕೀಲುಗಳ ಮೇಲಿನ ಸ್ವಲ್ಪ ಒತ್ತಡವು ದೇಹದಲ್ಲಿರುವ ವಿಶೇಷ ಗ್ರಾಹಕಗಳನ್ನು (Mechanoreceptors) ಜಾಗೃತಗೊಳಿಸುತ್ತದೆ. ಇವು ಮೆದುಳಿಗೆ ಮತ್ತು ಇಡೀ ದೇಹಕ್ಕೆ "ನಾವು ಚಲಿಸುತ್ತಿದ್ದೇವೆ" ಎಂಬ ಸಂದೇಶವನ್ನು ರವಾನಿಸುತ್ತವೆ.
ಈ ಸಂದೇಶವನ್ನು ಸ್ವೀಕರಿಸಿದ ತಕ್ಷಣ, ಕೀಲುಗಳ ನಡುವೆ ಗ್ರೀಸ್‌ನಂತೆ ಕೆಲಸ ಮಾಡುವ 'ಸೈನೋವಿಯಲ್ ದ್ರವ' ಉತ್ಪತ್ತಿಯಾಗುತ್ತದೆ. ಇದು ಕೀಲುಗಳ ಸವೆತವನ್ನು ತಡೆದು ಅವುಗಳನ್ನು ಸುಗಮಗೊಳಿಸುತ್ತದೆ.
ಈ ಅಭ್ಯಾಸವು ಹಾನಿಗೊಳಗಾದ ಅಂಗಾಂಶವನ್ನು ಸರಿಪಡಿಸುತ್ತದೆ ಮತ್ತು ಹೊಸದನ್ನು ಸೃಷ್ಟಿಸುತ್ತದೆ. ಏಕೆಂದರೆ, ಹೆಚ್ಚು ನಡೆದಂತೆ ನಿಮ್ಮ ಕೀಲುಗಳು ಬಲವಾಗಿರುತ್ತದೆ.

ಹೆಚ್ಚು ಕುಳಿತುಕೊಳ್ಳುವುದು ಏಕೆ ಅಪಾಯಕಾರಿ?

ದೀರ್ಘಕಾಲ ಕುಳಿತುಕೊಳ್ಳುವುದರಿಂದ ಆಯಾಸ ಉಂಟಾಗುತ್ತದೆ. ಇದರಿಂದ ಸೊಂಟದ ಮುಂಭಾಗದಲ್ಲಿರುವ ಸ್ನಾಯುಗಳು ಬಿಗಿಯಾಗುತ್ತವೆ. ಸ್ನಾಯುಗಳು ಪೂರ್ಣ ಪ್ರಮಾಣದ ಚಲನೆಯನ್ನು ಪಡೆಯುವುದಿಲ್ಲ. ಇದರಿಂದ ಒತ್ತಡವನ್ನು ಅನುಭವಿಸಬೇಕಾಗುತ್ತದೆ.

ಗ್ಲುಟ್ ಬಲವನ್ನು ಹೆಚ್ಚಿಸಿ

ನಾವು ಜಿಮ್ ಅಥವಾ ವ್ಯಾಯಾಮಕ್ಕೆ ಹೋದಾಗ, ದೇಹದ ಮುಂಭಾಗದ ಮೇಲೆ ಹೆಚ್ಚು ಗಮನ ಹರಿಸುತ್ತೇವೆ. ಆದರೆ, ನೋವನ್ನು ಕಡಿಮೆ ಮಾಡಲು ಭೌತಚಿಕಿತ್ಸಕರು ನಮ್ಮ ಸೊಂಟದ ಹಿಂದಿನ ಸ್ನಾಯುಗಳನ್ನು ಬಲಪಡಿಸಲು ಶಿಫಾರಸ್ಸು ಮಾಡುತ್ತಾರೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net